ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರದ ಆರ್ ಎಲ್ ಜಾಲಪ್ಪ ಮಹಾವಿದ್ಯಾಲಯದ ವಿವಿಧ ಶೈಕ್ಷಣಿಕ ಘಟಕಗಳ ನೇತೃತ್ವದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಉತ್ಸವವನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು ನಾಡಪ್ರಭು ಕೆಂಪೇಗೌಡರು ಐದು ಶತಮಾನಗಳ ಹಿಂದೆಯೇ ಅತ್ಯಂತ ದೂರಗಾಮಿ ಆಲೋಚನೆಯ ನಾಯಕರಾಗಿ ಕಂಡುಬರುತ್ತಾರೆ. ವಿಶ್ವ ದರ್ಜೆಯ ಮೂಲಸೌಕರ್ಯಗಳನ್ನು ಒಳಗೊಂಡ ನಗರ ನಿರ್ಮಾಣದ ಕನಸನ್ನು ಅವರು ಸಾಕಾರಗೊಳಿಸಿದರು. ಬೆಂಗಳೂರಿನ ನಿರ್ಮಾತೃವಾಗಿ ಎಲ್ಲ ಜಾತಿ ಧರ್ಮ ಮತಗಳ ಭಿನ್ನತೆಯನ್ನು ಮರೆತು ಸಹಬಾಳ್ವೆ ಮತ್ತು ಸಮನ್ವಯದ ಆಶಯವನ್ನು ಸಾರಿದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಆರ್ ಎಲ್ ಜೆ ಐ ಟಿ ಶೈಕ್ಷಣಿಕ ನಿರ್ದೇಶಕ ಡಾ.ಶ್ರೀನಿವಾಸ ರೆಡ್ಡಿ, ಎಸ್ ಡಿ ಯು ಐ ಎಂ ನಿಕಟ ಪೂರ್ವ ಪ್ರಾಂಶುಪಾಲ ಪ್ರೊ.ಕೆ ಆರ್ ರವಿಕಿರಣ್, ಆಡಳಿತಾಧಿಕಾರಿ ಐ ಎಂ ರಮೇಶ್ ಕುಮಾರ್, ಎಸ್ ಡಿ ಯು ಐ ಆರ್ ಎಸ್ ಕಚೇರಿ ವ್ಯವಸ್ಥಾಪಕ ಎಸ್ ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.