ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಯಾಗಿ ಎಂ.ಶ್ರೀನಿವಾಸ್ ನೇಮಕ…
ದೊಡ್ಡಬಳ್ಳಾಪುರ: ಉಪವಿಭಾಗಾಧಿಕಾರಿಯಾಗಿದ್ದ ತೇಜಸ್ ಕುಮಾರ್ ಅವರನ್ನು ದಿಢೀರ್ ವರ್ಗಾವಣೆ ಮಾಡಿದ್ದು ಅವರ ಜಾಗಕ್ಕೆ ಎಂ. ಶ್ರೀನಿವಾಸ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ತೇಜಸ್ ಕುಮಾರ್ ಅವರಿಗೆ ಇನ್ನೂ ಜಾಗ ತೋರಿಸಿಲ್ಲ. ಅದೇ ರೀತಿ ಡಾ.ಶಿವರಾಮ ಕಾರಂತ ಬಡಾವಣೆಯ ವಿಶೇಷ ಭೂಸ್ವಾಧೀನಾಧಿಕಾರಿ ಆಗಿದ್ದ ಡಾ.ಬಿ.ಆರ್.ಹರೀಶ್ ಅವರನ್ನು ಬೆಂಗಳೂರು ದಕ್ಷಿಣ ವಿಭಾಗದ ಉಪವಿಭಾಗಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಈ ಸ್ಥಾನದಲ್ಲಿದ್ದ ಎ.ಎನ್.ರಘುನಂದನ್ ಅವರಿಗೆ ಜಾಗ ತೋರಿಸಿಲ್ಲವೆಂದು ತಿಳಿದು ಬಂದಿದೆ.