*ಶ್ರೀಕ್ಷೇತ್ರ *ಘಾಟಿ* *ಸುಬ್ರಹ್ಮಣ್ಯ* ದೇವಸ್ಥಾನದ ಹುಂಡಿಯಹಣ ಎಣಿಕೆ
ದೊಡ್ಡಬಳ್ಳಾಪುರ: ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿಯಲ್ಲಿ 89,02, 459 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.
ಸೋಮವಾರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಹುಂಡಿ ಹಣ ಎಣಿಕೆ ಮಾಡಲಾಯಿತು. 89,02,459 ರೂ. ನಗದು ಜೊತೆಗೆ 2 ಗ್ರಾಂ 800 ಮಿಲಿ ಚಿನ್ನ, 3 ಕೆ.ಜಿ 150 ಮಿಲಿ ಬೆಳ್ಳಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ
ಕಾರ್ಯನಿರ್ವಾಹಕ ಅಧಿಕಾರಿ ಎನ್. ಕೃಷ್ಣಪ್ಪ ಮುಜರಾಯಿ ಇಲಾಖೆ ಜಿಲ್ಲಾ ಸಹಾಯಕ ಆಯುಕ್ತ ಜೆ.ಜೆ.ಹೇಮಾ ವತಿ, ದೇವಾಲಯದ ಅಧೀಕ್ಷಕ ರಘು ಹುಚ್ಚಪ್ಪ, ಪ್ರಧಾನ ಅರ್ಚಕ ನಾಗೇಂದ್ರ ಶರ್ಮಾ, ನಂಜಪ್ಪ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ದೇವಾಲಯದ ಸಿಬ್ಬಂದಿ ಭಾಗವಹಿಸಿದ್ದರು.
ಕಳೆದ ಮಾರ್ಚ್ 27 ರಂದು ಹುಂಡಿ ಎಣಿಕೆ ಕಾರ್ಯ ಮಾಡಲಾಗಿತ್ತು.