ತುಮಕೂರು: ಪೆಟ್ರೋಲ್ ಬಂಕ್‍ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಮಧುಗಿರಿಯ ಬಡವನಹಳ್ಳಿಯಲ್ಲಿ ನಡೆದಿದೆ.
ಶಿರಾ ತಾಲ್ಲೂಕಿನ ಜವನಹಳ್ಳಿ ಗ್ರಾಮದ ನಿವಾಸಿ ಭವ್ಯಾಗೌಡ ಮೃತ ಯುವತಿ. ಸ್ಕೂಟರ್ ನಲ್ಲಿ ಪೆಟ್ರೋಲ್ ಹಾಕಿಸಲು ಬಂದಿದ್ದ ಯುವತಿ ಬೈಕ್ ಮೇಲೆ ಕುಳಿತೇ ಪೆಟ್ರೋಲ್ ಹಾಕಿಸುತ್ತಿದ್ದಳು. ಸ್ಕೂಟರ್ ಎಂಜಿನ್ ಬಿಸಿಯಾಗಿದ್ದರಿಂದ ತಕ್ಷಣವೇ ಹೊತ್ತಿಕೊಂಡ ಬೆಂಕಿಯ ಜ್ವಾಲೆ ಕ್ಷಣಾರ್ಧದಲ್ಲೇ ಭವ್ಯಾಳ ದೇಹಕ್ಕೂ ಹಬ್ಬಿದೆ.
ಕೊನೆಗೆ ಬೆಂಕಿಯನ್ನು ನಂದಿಸಿ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಭವ್ಯಾಗೌಡ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾಳೆ.