• ಜನತೆ ನೀಡಿದ ತೀರ್ಪನ್ನು ಸ್ವಾಗತಿಸುತ್ತೇವೆ– ಲಕ್ಷ್ಮೀ ಪತಿ

    ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲನ್ನಪ್ಪಿದೆ. ಜನಾದೇಶವನ್ನು ನಾವು ಸ್ವಾಗತಿಸುತ್ತೇವೆ ಎಂದು ಕೆಪಿ ಸಿಸಿ ಸದಸ್ಯ,ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅದ್ಯಕ್ಷ ಜಿ ಲಕ್ಷ್ಮೀಪತಿ ಹೇಳಿದ್ದಾರೆ.
    ಇಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ನೆಡೆದ ಸುದ್ದಿ ಗೋಷ್ಟಿ ಯಲ್ಲಿ ಲಕ್ಷ್ಮೀಪತಿ ಮಾತನಾಡಿ ಚುನಾವಣೆಯಲ್ಲಿ ಸೋಲಿಗೆ ಕಾರಣವಾದ ಲೋಪಗಳನ್ನು ತಿದ್ದಿಕೊಂಡು ಮುಂಬರುವ ಜಿಲ್ಲಾ ಪಂಚಾಯತಿ ,ತಾಲ್ಲೂಕು ಪಂಚಾಯತಿ, ಲೋಕಸಭಾ ಚುನಾವಣೆ ವೇಳೆಗೆ ಪಕ್ಷವನ್ನು ಸಂಘಟಿಸಿ ಪುಟಿದೇಳುವಂತೆ ಮಾಡುತ್ತೇವೆ.ಇಲ್ಲಿ ಪಕ್ಷ ಸೋತಿರಬಹುದು ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದೆ .ಆದ್ದರಿಂದ ಸ್ಥಳೀಯವಾಗಿ ಪಕ್ಷದ ಕಾರ್ಯಕರ್ತರು ಯಾರು ಕೂಡ ಆತಂಕಕ್ಕೆ ಒಳಗಾಗಬೇಕಿಲ್ಲ ಹಿಂದೆ ಆಪರೇಷನ್ ಕಮಲ ನಡೆದಾಗ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ತೀರ ಕೆಳಮಟ್ಟದಲ್ಲಿತ್ತು.ಅಂತಹ ಸಂದರ್ಭದಲ್ಲಿಯು ಎದೆಗುಂದದೆ ಪಕ್ಷವನ್ನು ಸಂಘಟಿಸಿ ಚುನಾವಣೆಯಲ್ಲಿ ಗೆದ್ದದ್ದು ಕಣ್ಣ ಮುಂದಿದೆ ಅಂತಹದರಲ್ಲಿ ಈಗ ಕಾಂಗ್ರೆಸ್ ಪಕ್ಷವೇ ಅದಿಕಾರದಲ್ಲಿದೆ.ಮಾಜಿ ಶಾಸಕರಾದ ಆರ್ ಜಿ ವೆಂಕಟಾಚಲಯ್ಯ,ಅಪ್ಪಕಾರನಹಳ್ಳಿ ವೆಂಕಟರಮಣಯ್ಯ,ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯಿಲಿ ರವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ತಂದು ಜನರ ವಿಶ್ವಾಸವನ್ನು ಗಳಿಸುತ್ತೇವೆ.

    ಈ ಚುನಾವಣೆಯಲ್ಲಿ ಜಿ ಜೆ ಪಿ ಅಭ್ಯರ್ಥಿ ಹಣದ ಹೊಳೆ ಹರಿಸಿ,ಯುವಕರಿಗೆ ಅತಿಯಾದ ನಿರೀಕ್ಷೆ ಮೂಡಿಸಿ ವಾಮ ಮಾರ್ಗದಿಂದ ಗೆದ್ದಿದ್ದಾರೆ. ಅವರ ಅತಿಯಾದ ನಿರೀಕ್ಷೆಗಳು, ಭರವಸೆಗಳು ಹೆಚ್ಚು ದಿನ ಇರಲಾರದು ಎಂದ ಅವರು ಕಾಂಗ್ರೆಸ್ ನಿಂದ ಬಿ ಜೆ ಪಿ ಗೆ ಹೋದ ಕೆಲ ಮುಖಂಡರು ಕಾಂಗ್ರೆಸ್ ನಿಂದ ಎಲ್ಲಾ ಅಧಿಕಾರ ಅನುಭವಿಸಿ ತಮ್ಮ ವೈಯಕ್ತಿಕ ಹಿತಾಸಕ್ತಿಗೋಸ್ಕರ ಪಕ್ಷಕ್ಕೆ ಕೈ ಕೊಟ್ಟರು. ಇದಲ್ಲದೆ ವೆಂಕಟರಮಣಯ್ಯ ರವರ ಮೇಲೆ ಇಡೀ ಕ್ಷೇತ್ರದಾದ್ಯಂತ ಅಪ ಪ್ರಚಾರ ಮಾಡಿ ಕಾಂಗ್ರೆಸ್ ಸೋಲುವಂತೆ ಮಾಡಿದರು ಮುಂದಿನ ದಿನಗಳಲ್ಲಿ ಅವರು ಏನೆನ್ನುವುದು ಕ್ಷೇತ್ರದ ಜನತೆಗೆ ಗೊತ್ತಾಗಲಿದೆ.ಇಷ್ಟೆಲ್ಲಾ ಆದರು ಕೂಡ ನಾವ್ಯಾರು ಎದೆಗುಂದುವುದಿಲ್ಲ.ಪಕ್ಷ ಅದಿಕಾರದಲ್ಲಿರುವುದರಿಂದ ಪರಾಜಿತ ಅಪ್ಪಕಾರನಹಳ್ಳಿ ವೆಂಕಟರಮಣಯ್ಯ ರವರಿಗೆ ನಿಗಮ ಮಂಡಳಿ ಸ್ಥಾನ ಕೊಡುವಂತೆ ಒತ್ತಾಯಿಸಲಾಗುವುದೆಂದು ಲಕ್ಷ್ಮೀಪತಿ ಹೇಳಿದ್ದಾರೆ.

    ಕೆ.ಪಿ ಸಿ ಸಿ ಸದಸ್ಯ ಹೇಮಂತರಾಜು ,ದೊಡ್ಡಬಳ್ಳಾಪುರ ಗ್ರಾಮಾಂತರ ಅದ್ಯಕ್ಷ ಭೈರೇಗೌಡ,ಕಸಬಾ ಬ್ಲಾಕ್ ಅದ್ಯಕ್ಷ ಅಪ್ಪಿ ವೆಂಕಟೇಶ್,ನಗರಾದ್ಯಕ್ಷ ಕೆ.ಪಿ ಜಗನ್ನಾಥ್,ನಗರಸಭಾ ಸದಸ್ಯ ಶಿವಶಂಕರ್ ಜಿಲ್ಲಾ ಸೇವಾ ದಳದ ಅದ್ಯಕ್ಷ ಕಾಂತರಾಜು, ಮುಖುಂಡರಾದ ಅಖಿಲೇಶ್,ಕ್ರಿಷ್ಣಾನಾಯಕ್,ಕೆಂಪಣ್ಣ,ಲಕ್ಕಣ್ಣ ಮುಂತಾದವರು ಹಾಜರಿದ್ದರು.