ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಇ ಖಾತೆ ಮಾಡಿಸಲು 15 ರಿಂದ 20000 ಲಂಚ ನೀಡಬೇಕೆಂದು ಅಧಿಕಾರಿಗಳು ಬೇಡಿಕೆ ಇಡುತ್ತಿದ್ದಾರೆಂದು ಕೆ ಅರ್ ಎಸ್ ಪಕ್ಷದ ಅಭ್ಯರ್ಥಿ ಶಿವಶಂಕರ್ ರವರು ಅರೋಪ ಮಾಡಿದ್ದಾರೆ.

ನಗರದ ಕೆ ಅರ್ ಎಸ್ ಪಕ್ಷದ ಕಛೇರಿಯಲ್ಲಿ ನೆಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಇ ಖಾತೆ‌ಮಾಡಿಸಲು ಖಾತೆದಾರರಿಗೆ 15ರಿಂದ 20000 ಲಂಚ ನೀಡಬೇಕೆಂದು ಬೇಡಿಕೆ ಇಡುತ್ತಾರೆ ಈ ಕುರಿತು ನಾವುಗಳು ಸಂಭದಪಟ್ಟ ಅಧಿಕಾರಿಗಳಿಗೆ ಕೇಳಿದರೆ ಅವರುಗಳು ಆ ಹಣದ ಪಾಲುದಾರರ ಪಟ್ಟಿಯನ್ನು ಬಹಿರಂಗವಾಗಿಯೇ ಹೇಳುತ್ತಾರೆ ಇದೇ ಸಮಸ್ಯೆ ಪಂಚಾಯತಿ ವ್ಯಾಪ್ತಿಯಲ್ಲಿಯೂ ಮುಂದುವರೆದಿದ್ದು ನಗರ ಸಭೆ ಅಧಿಕಾರಿಗಳು ದೊಡ್ಡಬಳ್ಳಾಪುರ ನಗರದ ಎಲ್ಲಾ ವಾರ್ಡಗಳಲ್ಲಿ ಇ ಖಾತ ಅದಾಲತ್ ನೆಡೆಸಿ ಸ್ಥಳದಲ್ಲಿಯೇ ಕಂದಾಯ ಪಾವತಿಸಿಕೊಂಡು ಈ ಖಾತೆ ಮಾಡಿಕೊಡಲು ಕೆ ಆರ್ ಎಸ್ ಪಕ್ಷದಿಂದ ನಗರ ಸಭೆ ಅಧಿಕಾರಿಗಳಿಗೆ ಒತ್ತಡ ಹೇರಲಾಗುವುದೆಂದರು,

ದೊಡ್ಡಬಳ್ಳಾಪುರ ನಗರಸಭೆವತಿಯಿಂದ ನಗರದ ಹಳೇ ಬಸ್ ನಿಲ್ದಾಣದಲ್ಲಿ ಹಳೆಯ ಅಂಗಡಿ ಮಳಿಗೆಗಳು ಬಹುತೇಕ ಖಾಲಿಯಿದ್ದು ಹೊಸದಾಗಿ ಕಟ್ಟಿರುವ ಅಂಗಡಿ ಮಳಿಗೆಗಳಿಗೆ ಬೀಗ ಹಾಕಿರತ್ತಾರೆ ಬಸ್ ನಿಲ್ದಾಣದ ಸುತ್ತಾಮುತ್ತಾ ಬೀದಿ ಬದಿ ವ್ಯಾಪಾರಸ್ಥರು ರಸ್ತೆಗಳಲ್ಲೆ ಜನರ ಒಡಾಟಕ್ಕೆ ಸ್ಥಳ ಬಿಡದೆ ಸುಗುಮ ಸಂಚಾರಕ್ಕೂ ಅಡ್ಡಿಪಡಿಸುತ್ತಾ ನಗರಸಭೆ ಆಸ್ಥಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು ನಗರಸಭೆ ಯವರು ಇವರುಗಳಿಗೆ ಅಂಗಡಿ ಮಳಿಗೆಗಳು ಕಟ್ಟಿಕೊಟ್ಟು ನಗರ ಸೌಂದರ್ಯ ಮತ್ತು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುವಲ್ಲಿ ನಗರ ಸಭೆ ನಿರ್ಲಕ್ಷ ತೋರುತ್ತಿದೆ ಮತ್ತು ನಗರ ಸಭೆ ವ್ಯಾಪ್ತಿಯಲ್ಲಿ ನಗರ ಸಭೆ ಆಸ್ಥಿಗಳು ನಾಗರಕೆರೆ ಸೇರಿದಂತೆ ಅನೇಕ ಕಡೆ ಒತ್ತುವರಿಯಾಗಿ ಒತ್ತವರಿ ತೆರವಿಗಾಗಿಯು ನಮ್ನ ಪಕ್ಷದಿಂದ ಶೀಘ್ರದಲ್ಲೆ ಹೋರಾಟ ನಡೆಸಲಾಗುವುದು ಎಂದರು.
ಡಿ ಸಿ ನೆಡೆ ಹಳ್ಳಿ ಕಡೆ ಕಾರ್ಯಕ್ರಮ ದಲ್ಲಿ ಯಾವ್ಯಾವ ಕೆಲಸಗಳಾಗಿದೆ ಎಂಬುದರ ಬಗ್ಗೆ ಮಾಹಿತಿ ಕೇಳಿದ್ದು ಇದುವರೆಗು ನಮಗೆ ಇದರ ಮಾಹಿತಿ ನೀಡಿರುವುದಿಲ್ಲ ಇನ್ಮು ಬಹುತೇಕ ಗ್ರಾಮ ಲೆಕ್ಕಿಗರು ಅವರಿಗೆ ಬರುವ ವ್ಯಾಪ್ತಿಯ ಹಳ್ಳಿಗಳಿಗೆ ಇಂತಿಂತ ದಿನ ಬೇಟಿ ನೀಡಬೇಕೆಂದು ಸರ್ಕ್ಯುಲರ್ ಇದ್ದರು ಯಾವೊಬ್ಬ ಗ್ರಾಮ ಲೆಕ್ಕಿಗರು ಹೋಗುತ್ತಿಲ್ಲ ಇದರ ಬಗ್ಗೆ ಮತ್ತು ತಾಲ್ಲೂಕಿನಾದ್ಯಂತ ಯಾವ್ಯಾವ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೋ ಅಂತಹ ಅಧಿಕಾರಿಗಳಿಗೆ ಸರಿಯಾಗಿ ಕಾರ್ಯನಿರ್ವಹಿಸಲು ಕೆ ಆರ್ ಎಸ್ ಪಕ್ಷದಿಂದ ಎಚ್ಚರಿಸುವುದಾಗಿ ತಿಳಿಸಿದರು.

ಭೂ ಮಂಜೂರಾತಿ ಮಂಡಳಿಯಿಂದ 10-15 ವರ್ಷದಿಂದ ಯಾರ್ಯಾರಿಗೆ ಯಾವ್ಯಾವ ಮಾನದಂಡಗಳೊಂದಿಗೆ ಭೂಮಿ ಮಂಜೂರು ಮಾಡಲಾಗಿದೆ ಎಂಬುದರ ಬಗ್ಗೆ ನಮ್ಮರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದ್ದು ಮಾಹಿತಿ ಬಂದ ಕೂಡಲೆ ಇದರ ಬಗ್ಗೆಯು ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು‌.

ದಿನಾಂಕ 13 /5/2023 ರಂದು ನೆಡೆದ ವಿಧಾನಸಭಾ ಚುನಾವಣಾ ಪಲಿತಾಂಶದಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿ ಅಧಿಕಾರ ನೆಡೆಸಲು ಅನುವು ಮಾಡಿಕೊಟ್ಟಿದ್ದರು ಇದುವರೆಗು ಒಂದು ಕ್ಯಾಬಿನೆಟ್ ನೆಡೆಸಲು ಆಗುತ್ತಿಲ್ಲ ಚುನಾವಣಾ ಪೂರ್ವ ದಲ್ಲಿ ನೀಡಿದ ಗ್ಯಾರಂಟಿಗಳಾದ 200 ಯೂನಿಟ್ ವಿದ್ಯುತ್ ಮನೆ ಒಡತಿಯರಿಗೆ 2000ರುಪಾಯಿ,ನಿರುದ್ಯೋಗಿಗಳಿಗೆ 3000 ರು ಡಿಪ್ಲೊಮಾ ಮಾಡಿದವರಿಗೆ 1500 ರುಗಳು ಮತ್ತು ಮಹಿಳೆಯರಿಗೆ ಉಚಿತ ಬಸ್ ಪಾಸ್ ನ ಕಾರ್ಯಗಳು ಇಂಪ್ಳಿಮೆಂಟ್ ಮಾಡದಿದ್ದಲ್ಲಿ ಇಡೀ ರಾಜ್ಯಾದ್ಯಂತ ಕೆ ಆರ್ ಎಸ್ ಪಕ್ಷದಿಂದ ಉಗ್ರವಾದ ಹೋರಾಟ ಮಾಡಲಾಗುವುದೆಂದು ತಿಳಿಸಿದರು.

ಅಂತಿಮವಾಗಿ ದೊಡ್ಡಬಳ್ಳಾಪುರ ವಿಧಾನ ಸಭಾ ಚುನಾವಣೆಯಲ್ಲಿ ಕೆ ಆರ್ ಎಸ್ ಪಕ್ಷದಿಂದ ಸ್ಪರ್ಧಿಸಿದ್ದ ನನಗೆ 249 ಜನರು ಮತ ನೀಡಿ ಆಶಿರ್ವದಿಸಿದ ಮತದಾರರಿಗೆ ಅಭಿನಂದನೆಗಳನ್ನು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ ಅರ್ ಎಸ್ ನ ಜಿಲ್ಲಾ ಯುವ ಘಟಕದ ಅದ್ಯಕ್ಷ ಆನಂದ್ ತಾಲ್ಲೂಕು ಅದ್ಯಕ್ಷ ಎಚ್ ನ್ ವೇಣು ನಗರ ಅದ್ಯಕ್ಷ ನಾಗರಾಜು ಕಾರ್ಯದರ್ಶಿ ವೆಂಕಟೇಶ್ ಚಾಲಕರ ಸಂಘದ ಅದ್ಯಕ್ಷ ವಿಜಯ್ ಉಪಾಧ್ಯಕ್ಷ ಗೋವಿಂದರಾಜು ಮುಂತಾದವರು ಇದ್ದರು.