ಪೆಹಾಲ್ಗಮ್ ಉಗ್ರರ ದಾಳಿ ಯಲ್ಲಿ ಮೃತ ಪಟ್ಟವರಿಗೆ ಕನಸವಾಡಿಯಲ್ಲಿ ಶ್ರದ್ದಾಂಜಲಿ

ದೊಡ್ಡಬಳ್ಳಾಪುರ:ಕಾಶ್ಮೀರದ ಪೆಹಲ್ಗಾಮ್‌ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಕನಸವಾಡಿ ಯಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಮುಂಬತ್ತಿಯೊಂದಿಗೆ ಮೌನ ಮೆರವಣಿಗೆ ನಡೆಯಿತು. ಕನಸವಾಡಿಯ ಬೆಳವಂಗಲ ಕ್ರಾಸ್ ನಿಂದ ಶನಿಮಹಾತ್ಮ ದೇವಸ್ದಾನದವರೆಗೆ ಕಾಲು ನಡಿಗೆಯೊಂದಿಗೆ ಮೊಂಬತ್ತಿ ಹಚ್ಚಿ ಮೌನ ಮೆರವಣಿಗೆ ನಡೆಸಿ ಸಂಘಟನೆಗಳ‌ ಮುಖಂಡರು ಮತ್ತು ಕಾರ್ಯಕರ್ತರು ಕಾಶ್ಮೀರ ಹತ್ಯಾಕಾಂಡವನ್ನು ಖಂಡಿಸಿದರು.
ಮೆರವಣಿಗೆ ಯಲ್ಲಿ‌ ಮಾತನಾಡಿದ ಸಂಘಟನೆಗಳ ಮುಖಂಡರು, ಕಾಶ್ಮೀರದ ಪೆಹಲ್ಗಾಮ್‌ ನಲ್ಲಿ ನಡೆದ ಉಗ್ರರ ದಾಳಿಯನ್ನು ದೇಶದ ಎಲ್ಲಾ‌‌ ಜನರು‌‌‌ ಖಂಡಿಸ ಬೇಕಾಗಿದೆ. ಭಾರತ ಭಾವೈಕ್ಯತೆ ಉಗ್ರರು ಮಾರಕ ವಾಗಿದ್ದಾರೆ. 26 ಮಂದಿಯನ್ನು ಹತ್ಯೆ ಮಾಡಿರುವ ಉಗ್ರವಾದಿ ಗಳಿಗೆ ಕಠಿಣ ಶಿಕ್ಷೆಯಾಗಬೇಕು. ಇಂತಹ ಪ್ರಕರಣ ಮತ್ತೆ ಮರುಕಳಿಸದಂತೆ ಕಾನೂನು‌ ಮತ್ತು ಭದ್ರತಾ ವ್ಯವಸ್ಥೆ ಸಮಪರ್ಕವಾಗಿ ಕಾರ್ಯನಿರ್ವಹಿಸ ಬೇಕಾಗಿದೆ ಎಂದರು.
ಮೆರವಣಿಗೆಯಲ್ಲಿ ಮಧುರೆ ಕಲಾವಿದರ ಸಂಘ ,ಇಸ್ತೂರು ಕೋದಂಡರಾಮಸ್ವಾಮಿ ಭಜನಾ ಸಂಘ, ಶ್ರೀ ಅಭಯ ಆಂಜನೇಯಸ್ವಾಮಿ ಸಮಿತಿ ಮತ್ತು ಮಧುರೆ ಹೋಬಳಿಯ ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.
ದೊಡ್ಡಬಳ್ಳಾಪುರ ‌ನಗರದ ಸಮೀಪವಿರುವ. ಅನಿಬೆಸೆಂಟ್ ಪಾರ್ಕ್ ನಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ, ರಾಜ್ಯ ಸಂಸ್ಥೆ ಆಯೋಜಿಸಿದ್ದ ರೋವರ್ಸ್ ಮತ್ತು ರೇಂಜರ್ಸ ಗಳ ಕೌಶಲ್ಯ ತರಬೇತಿ ಶಿಬಿರದ ಶಿಬಿರಾರ್ಥಿಗಳಿಂದ ಪೆಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ಧಾಳಿಗೆ ಬಲಿಯಾದ ದೇಶದ ನಾಗರಿಕರಿಗೆ ಮೊಂಬತ್ತಿ ಹಿಡಿದು ಮೆರವಣಿಗೆ ನಡೆಸಿ ಗೌರವ ನಮನ ಸಲ್ಲಿಸಿದರು. ಜಿಲ್ಲಾ ಮುಖ್ಯ ಆಯುಕ್ತರು ನಾಗರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು , ಚಂದ್ರು, ನಿತಿನ್ ಅಮೀನ್, ವಿಶ್ವನಾಥ್, ನವೀನ್ ಕುಮಾರ್, ಅಶೋಕ್ ಕುಮಾರ್, ನಿಹಾಲ್ , ಸುಮಾ, ಶೋಭಾ ಮತ್ತು ಶಿಬಿರಾರ್ಥಿಗಳು ಭಾಗವಹಿಸಿದ್ದರು.