ಚನ್ನಹಳ್ಳಿ ಪಂಚಾಯಿತಿಯವರು ಮೂಲಭೂತ ಸೌಕರ್ಯ ಒದಗಿಸಲು ನಿರ್ಲಕ್ಷ್ಯ ಗ್ರಾಮಸ್ಥರ ಆಕ್ರೋಶ
ದೇವನಹಳ್ಳಿ :- ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿದೀಪ, ಮುಂತಾದ ಅಗತ್ಯ ಮೂಲಭೂತ ಸೌಕರ್ಯಗಳಿಗೆ ಅನೇಕ ಬಾರಿ ಅರ್ಜಿ ಹಿಡಿದು ಚನ್ನಹಳ್ಳಿ ಪಂಚಾಯಿತಿಗೆ ಅಲೆದಾಡಿದರು ಸೌಲಭ್ಯ ಗಳ ಭಾಗ್ಯ ದೊರೆಯದೇ.. ಇರುವುದು ವಿಷಾಧ ನೆಯವೆಂದು ಪೋಲನಹಳ್ಳಿ ಗ್ರಾಮಸ್ಥರು ವಿಶೇಷ ಗ್ರಾಮ ಸಭೆಯಲ್ಲಿ ಆಕ್ರೋಶ ಹೊರ ಹಾಕಿದರು .
ಪಂಚ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚನ್ನಳ್ಳಿ ರಾಜಣ್ಣ ಮಾತನಾಡಿ, ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಯ ಪ್ರತಿ ಗ್ರಾಮಗಳಲ್ಲಿನ ಫಲಾನುಭವಿ ಗುರ್ತಿಸಿ ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ಸೖಟ್ ಹಂಚಿಕೆಯನ್ನು ಇದೇ ತಿಂಗಳ 28 ರಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಹಂಚಿಕೆ ಮಾಡಲಿದ್ದಾರೆ. ದೇವನಹಳ್ಳಿ ತಾಲೂಕಿನ ಎಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಸಮಸ್ಯೆಗೆ ಸ್ಪಂದಿಸುತ್ತ ಬಂದಿದ್ದೇವೆ. ಸರ್ಕಾರದ ಸೌಲಭ್ಯಗಳನ್ನು ಹಂಚಿಕೆ ಮಾಡುವ ಸಂಬಂಧ ಬೃಹತ್ ಪ್ರಮಾಣದ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರತಿ ಪಂಚಾಯ್ತಿಯಿಂದ ಫಲಾನುಭವಿಗಳನ್ನು ಕರೆ ದೊಯ್ಯಲು ವಿಶೇಷ ವಾಹನದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.
ಗ್ರಾಮಸ್ಥರ ಸಮಸ್ಯೆಗಳು ಏನೇ ಇರಲಿ ಅವುಗಳನ್ನು ಕೂಲಂಕುಶವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳ ಬಹುದು ಅನಗತ್ಯ ಮಾತಿನ ಚಕಮಕಿ ಅಭಿವೃದ್ಧಿಗೆ ಕುಂಠಿತವಾಗಲಿದೆ ಇಲ್ಲಿನ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದೀರಿ ನಮ್ಮ ಹಂತದಲ್ಲಿ ಆದರೆ ತಡಮಾಡದೆ ಸರಿಪಡಿಸಲಾಗುತ್ತೆ, ಉಳಿದ ಸಮಸ್ಯೆಗಳನ್ನು ಸಂಬಂಧಪಟ್ಟವರಿಂದ ಮಾಡಿಸಿಕೊಡುವ ಭರವಸೆ ನೀಡಿದರು.
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲ್ಲೂಕಿನ ಚನ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊಲನ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರ ಣದಲ್ಲಿ ವಿಷೇಶ ಗ್ಲಾಮಸಭೆ ರಾಧಕೃಷ್ಣ ಅವರ ಅಧ್ಯ ಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅದ್ಯಕ್ಷ ಜಗನ್ನಾಥ್, ಭೂ ಮಂಜುರಾತಿ ಸದಸ್ಯ ನಾರಾಯಣ ಸ್ವಾಮಿ, ಪಂಚಾಯಿತಿ ಉಪಾ ಧ್ಯಕ್ಷೆ ಮುನಿರತ್ನಮ್ಮ ರಮೇಶ್, ಸದಸ್ಯರು ಗಳಾದ ದೇವರಾಜ್ ಸಿ.ಎನ್. ಶಶಿಕಲಾ ಕೆ.ಮುನಿರಾಜು, ಶೋಭಾಎನ್. ಶಿವ ಕುಮಾರ್, ಅನುರಾಧ ದೇವ ರಾಜ್, ನರಸಿಂಹಯ್ಯ, ಶಿಲ್ಪಾ ಡಿ.ಆರ್.ಬೈರೇಗೌಡ, ಕೆ.ಮುನೇಗೌಡ, ಸಂಗೀತ ಚಂದ್ರು, ಗೋಪಿನಾಥ್, ರೖತ ಮುಖಂಡ ಪ್ರಮೋದ್, ಪಿಡಿಒ ನಾಗರಾಜು, ಸುತ್ತಮುತ್ತಲಿನ ಗ್ರಾಮಸ್ಥರು, ಆಶಾ ಕಾರ್ಯ ಕರ್ತೆಯರು ಹಾಜರಿದ್ದರು.