ವೀರಾಪುರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ಗ್ರಾಮಾಂತರ ಭಾಗದ ವೀರಾಪುರ ಗ್ರಾಮದಲ್ಲಿ ಬೆಂಗಳೂರಿನ ಹೆಸರಾಂತ ವೈದೇಹಿ ಆಸ್ಪತ್ರೆಯಿಂದ ಮಜರಾಹೊಸಹಳ್ಳಿ ಗ್ರಾಮಪಂಚಾಯಿತಿ ಸಹಯೋಗದೊಂದಿಗೆ ವೀರಾಪುರ ಗ್ರಾಮದ ಶಾಲಾ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಹೃದಯರೋಗ, ನರರೋಗ, ಕಿಡ್ನಿಯಲ್ಲಿ ಕಲ್ಲು, ಮೂತ್ರಕೋಶ, ಮತ್ತು ಮೂತ್ರಪಿಂಡಕ್ಕೆ ಸಂಬಂದಿಸಿದ ಕಾಯಿಲೆಗಳು, ಕ್ಯಾನ್ಸರ್‌, ಮೂಳೆಶಾಸ್ತ್ರ, ಕಿವಿ, ಮೂಗು, ಗಂಟಲು, ಹಾಗೂ ಸ್ತ್ರೀ ರೋಗ ಸಂಬಂದಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಯಿತು. ಶಿಬಿರದಲ್ಲಿ ವೀರಾಪುರ ಗ್ರಾಮದ ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರು ಪಾಲ್ಗೊಂಡಿದ್ದರು. ಶಿಬಿರದಲ್ಲಿ ಮಜರಾಹೊಸಹಳ್ಳಿ ಗ್ರಾಮಪಂಚಾಯಿತಿಯ ಅಧಿಕಾರಿಗಳು ಸೇರಿದಂತೆ ಗ್ರಾಮಪಂಚಾಯಿತಿ ಅಧ್ಯಕ್ಷರಾದ ನೀಲಮ್ಮ ಪಿಳ್ಳೇಗೌಡ ಸೇರಿದಂತೇ ವೈದೇಹಿ ಆಸ್ಪತ್ರೆಯ ವೈದ್ಯರಾದ ಡಾ.ಯೋಗೇಶ್, ಡಾ.ಶ್ವೇತ, ಡಾ.ನಮ್ರತಾ, ಡಾ ಶ್ರಿಯಾ , ಹಾಗೂ ಕ್ಯಾಂಪ್ ಮುಖಂಡರಾದ ಸುರೇಶ್ ಹಾಗೂ ವೀರಾಪುರ ಗ್ರಾಮದ ಮುಖಂಡರಾದ ಪಿಳ್ಳೇಗೌಡರು. ಗ್ರಾಮಪಂಚಾಯಿತಿ ಕಾರ್ಯದರ್ಶಿಯವರಾದ ಹನುಮಂತಪ್ಪನವರು ಭಾಗವಹಿಸಿ ಆರೋಗ್ಯ ಶಿಬಿರವನ್ನ ಯಶಸ್ವಿಗೊಳಿಸಿದರು.