ಚಾಲಕನ ನಿಯಂತ್ರಣ ತಪ್ಪಿದ ಕೆ. ಎಸ್. ಆರ್. ಟಿ. ಸಿ. ಬಸ್.. ತಪ್ಪಿದ ಅನಾಹುತ
ದೊಡ್ಡಬಳ್ಳಾಪುರ:ತಾಲ್ಲೂಕಿನ,ದೊಡ್ಡಬೆಳವಂಗಲ,ಹೋಬಳಿಯಾದ್ಯಂತ ಸುರಿದ ಮಳೆಯಿಂದಾಗಿ ಬೋಕಿಪುರ ಗ್ರಾಮದ ರಸ್ತೆ ಹದಗೆಟ್ಟು ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ ರಸ್ತೆ ಬದಿ ಕಂಬಕ್ಕೆ ಡಿಕ್ಕಿಯಾಗುವ ಮೂಲಕ ದೊಡ್ಡ ಅನಾಹುತ ತಪ್ಪಿದೆ.
ದೊಡ್ಡಬಳ್ಳಾಪುರ ಹಾಗು ಹಾದ್ರಿಪುರ ನಡುವಿನ ಸಾರಿಗೆ ಬಸ್ ಶುಕ್ರವಾರ ಸಂಚರಿಸುವ ವೇಳೆ ತಿರುವಿನಲ್ಲಿ ರಸ್ತೆ ತೀವ್ರ ಹದಗೆಟ್ಟಿದ್ದು ಮಳೆಯಿಂದ ಕೆಸರು ಗುಂಡಿಯಂತಾಗಿತ್ತು. ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಗೆ ಸಾಗಿದೆ. ಬಸ್ ಒಂದಿಷ್ಟು ಮುಂದು ಹೋಗಿದ್ದರು ಪಲ್ಟಿ ಹೊಡೆಯುವ ಸಂಭವ ಇತ್ತು. ಆದರೆ, ಚಾಲಕನ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಸಂಭವಿಸುವಂತಹ ಅನಾಹುತ ತಪ್ಪಿದೆ ಎಂದು ಅಲ್ಲಿದ್ದ ಗ್ರಾಮಸ್ಥರು ತಿಳಿಸಿದ್ದಾರೆ