ದೊಡ್ಡಬಳ್ಳಾಪುರದಲ್ಲಿ ರಾಮನವಮಿ ಸಂಭ್ರಮ
ದೊಡ್ಡಬಳ್ಳಾಪುರ:ಶ್ರೀರಾಮ ನವಮಿಯ ಪ್ರಯುಕ್ತ ನಾಡಿನಾದ್ಯಂತ ಸಂಭ್ರಮ ಸಡಗರ ದಿಂದ ಶ್ರೀ ರಾಮನವಮಿ ಅಚರಣೆಯಲ್ಲಿ ಶ್ರೀರಾಮ ಹಾಗೂ ಆಂಜನೇಯ ದೇವಾಲಯಗಳು ಸೇರಿದಂತೆ ವಿವಿದೆಡೆಗಳಲ್ಲಿ ಭಾನುವಾರ ಸಂಭ್ರಮ, ಸಡಗರ ಹಾಗೂ ಶ್ರದ್ಧ ಭಕ್ತಿಯಿಂದ ಪೂಜೆ ಪುನಸ್ಕಾರಗಳು, ಎಲ್ಲೆಲ್ಲೂ ಶ್ರೀ ರಾಮ ನಾಮಗಳು ಮೊಳಗಿದವು.
ತಾಲ್ಲೂಕಿನಾದ್ಯಂತ ನಗರ ಹಾಗು ಪಟ್ಟಣ ಗ್ರಾಮಗಳಲ್ಲಿ ಶ್ರೀ ರಾಮ ಹಾಗು ರಾಮ ಭಕ್ತ ಹನುಮನ ಮಂದಿರಗಳಲ್ಲಿ ಬೆಳಗ್ಗೆಯಿಂದ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ, ಮಹಾಮಂಗಳಾರತಿ ಮಾಡಲಾಯಿತು.
ದೇವರಿಗೆ ಬೆಳಗ್ಗೆಯಿಂದಲೇ ಅಭಿಷೇಕಗಳು ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ಇಂದು ಮುಂಜಾನೆಯಿಂದಲೇ ಸಹಸ್ರಾರು ಭಕ್ತರು ದೇವಾಲಯಗಳಿಗೆ ಆಗಮಿಸಿ ದೇವರ ದರ್ಶನ ಪಡೆದು, ಪಾನಕ, ಮಜ್ಜಿಗೆ, ಕೋಸಂಬರಿ ತಿಂದು ದೇವರ ಕೃಪೆಗೆ ಪಾತ್ರರಾದರು.
ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೊರವಲಯದ ಶ್ರೀ ಗುಟ್ಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮನವಮಿ ಪ್ರಯುಕ್ತ ವಿಶೇಷ ಅಲಂಕಾರ ಮತ್ತು ಪೂಜೆ ನಡೆಯಿತು. ಪಂಚಾಮೃತ ಅಭಿಷೇಕ, ಹನುಮಾನ್ ಚಾಲೀಸ್ ಪಠಣಗಳು ನಡೆದವು.ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಪಾನಕ ಕೋಸಂಬರಿ, ಮಜ್ಜಿಗೆ ವಿತರಿಸಲಾಯಿತು.
ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಇರುವ ಗ್ರಾಮ ದೇವತೆ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿಗೆ ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ಬೆಳಗ್ಗೆ ಅಭಿಷೇಕ ನಂತರ ಮಹಾಮಂಗಳಾರತಿ ನಡೆಯಿತು ಈ ಕಾರ್ಯಕ್ರಮದಲ್ಲಿ ದೇವಾಲಯದ ಮುಖ್ಯಸ್ಥರಾದ ಶ್ರೀ ಸುಬ್ರಹ್ಮಣ್ಯ ನಾಯಕ್ ಹಾಗೂ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಕಾರ್ಯದರ್ಶಿ ಎಂ ನಾರಾಯಣಸ್ವಾಮಿ ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಪಂಚಾಯಿತಿ ಸದಸ್ಯರಾದ ಪುರುಷೋತ್ತಮ್ ಮತ್ತು ಗ್ರಾಮದ ಮುಖಂಡರು ಭಾಗವಹಿಸಿದ್ದರು
ಗ್ರಾಮಗಳಲ್ಲಿ ಅಶ್ವತ್ಥಕಟ್ಟೆ ಗ್ರಾಮದ ದೇವತೆ ಊರಿನ ಮುಖ್ಯ ದೇಗುಲಗಳಲ್ಲಿ ಪೂಜಾ ಕೈಂ ಕಾರ್ಯಗಳು ನೆಡೆದವು ನಂತರ ಕೊಸಂಬಿ ಪಾನಕ ಮಜ್ಜಿಗೆ ವಿತರಿಸಲಾಯಿತು