ವಿಜೃಂಭಣೆಯಿಂದ ನೆರವೇರಿದ ಮಾದಪ್ಪನ ಯುಗಾದಿ ತೇರು

ಚಾಮರಾಜನಗರ: ಜಿಲ್ಲೆಯ ಹನೂರು.ಯುಗಾದಿ ಜಾತ್ರೆಯ ಪ್ರಯುಕ್ತ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಮಹಾ ರಥೋತ್ಸವವು ಮಾದಪ್ಪನ ಸನ್ನಿಧಿಯಲ್ಲಿ ಶ್ರೀ ಸಾಲೂರು ಬೃಹನ್ಮಠದ ಪೀಠಾಧಿಪತಿಗಳಾದ ಪೂಜ್ಯ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜೀಯವರ ನೇತೃತ್ವದಲ್ಲಿ ಮಹಾರಥೋತ್ಸವು ವಿಜೃಂಭಣೆಯಿಂದ ಜರುಗಿತು

ಸಂಭ್ರಮ ಸಡಗರ ಮೂಡಿದ್ದು, ವಿಜೃಂಭಣೆಯಿಂದ ಮಹದೇಶ್ವರನ ಯುಗಾದಿ ರಥೋತ್ಸವ ನೆರವೇರಿದೆ. 101 ಬೇಡಗಂಪಣ ಬಾಲಕಿಯರಿಂದ ಬೆಲ್ಲದಾರತಿ ಬೆಳಗಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಈ ಬಾರಿ ಬಿದಿರು ಹಾಗೂ ಹುರಿಯ ಹಗ್ಗಗಳಿಂದ ತೇರು ಸಿದ್ಧವಾಗಿದೆ. 52 ಅಡಿ ತೇರಿನಲ್ಲಿ 5 ಚೌಕ ಪೆಟ್ಟಿಗೆ ನಿರ್ಮಾಣವಾಗಿದೆ. ಮೊದಲ ಪೆಟ್ಟಿಗೆ, ಗುಬುರು, ಬಾಗಲವಾಡಿ, ದುಂಡದೂಡು, ತಾಳಗಳನ್ನು ಹೊಂದಿದೆ. ಇದಕ್ಕೆ ಸುಂದರ ವಸ್ತ್ರ ಧಾರಣೆ ಮಾಡಲಾಗಿದ್ದು, ತಳಿರು ತೋರಣ ಹಾಗೂ ಛತ್ರ, ಕಳಸಗಳನ್ನು ಅಳವಡಿಸಿರುವ ತೇರು ಕಂಗೊಳಿಸುತ್ತಿತ್ತು ಬೆಳಿಗ್ಗೆ 8ರಿಂದ 9ರ ನಡುವೆ ಮಹಾರಥೋತ್ಸವವು ನಡೆಯಿತು.

ವಿಶೇಷವಾಗಿ ಈ ಯುಗಾದಿಗೆ ರಥಕ್ಕೆ 89ವರ್ಷತುಂಬಿ 90ನೇ ವರ್ಷ ನಡೆಯುತ್ತಿದೆ

ಶ್ರೀ ಮಲೆ ಮಹದೇಶ್ವರಬೆಟ್ಟಕೇ ಮೈಸೂರಿನ ರಾಜಮನತನದವರು
1935ರ ಏ.4ರಂದು ನಾಲ್ವಡಿ ಶ್ರೀ ಕೃಷ್ಣರಾಜಒಡೆಯರ್ ಅವರು ಯುಗಾದಿ ಹಬ್ಬದ ಮೊದಲ
ದೊಡ್ಡಜಾತ್ರೆಗೆ ರಥವನ್ನು ಕೊಡುಗೆ ನೀಡಿದ್ದರು. ಇದೀಗ ರಥಕ್ಕೆ ಬರೊಬ್ಬರಿ 90ವರ್ಷವಾಗಿದೆ.

ಅಂದಿನ ಕಾಲದ ದೇವಸ್ಥಾನದ ಕಮಿಟಿ ಮೆಂಬರ್ ರಾವ್‌ಸಾಹೇಬ್,
ಕೊಳೇಗಾಲ ಜಿಪಿ ಮಲ್ಲಪ್ಪ, ಸಾಲೂರು ಮಠದ ವೇದಮೂರ್ತಿ ಶಾಂತಲಿಂಗಸ್ವಾಮಿಗಳು,
ಪುಟ್ಟ ಮಾದತಂಬಡಯ್ಯ, ಒಮಾದತಂಬಡಯ್ಯ ಎಂಬ ಹೆಸರುಗಳು ರಥದ ಹಿಂಬಧಿಯಲ್ಲಿ ಬರೆಯಲಾಗಿದೆ.

ಮಹಾರಥವನ್ನು ವಿವಿಧ ಪುಷ್ಪಗಳಿಂದ ಸಿಂಗಾರ ಮಾಡಲಾಗಿತ್ತು, ದೇಗುಲವನ್ನು ತಳಿರು ತೋರಣದಿಂದ ಸಿಂಗಾರ ಮಾಡಲಾಗಿತ್ತು. ಬೆಳಗಿನ ಜಾವತಿ ಗಂಟೆಯಿಂದ 6.30ರವರೆಗೆ ಸ್ವಾಮಿಗೆ ಪ್ರಥಮ ಹಾಗೂ ದ್ವಿತೀಯ ವಿಶೇಷ ಪೂಜೆ ನೆರವೇರಿಸ ಲಾಯಿತು. ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಬೆಳಗಿನ ಜಾವ ಪ್ರಥಮ ಹಾಗೂ ದ್ವಿತೀಯ ವಿಶೇಷ ಪೂಜೆ ನೆರವೇರಿಸಲಾಯಿತು. ಉಪವಾಸವಿದ್ದ ಬೇಡಗಂಪಣರು ಸರದಿ ಅರ್ಚಕರು ಛತ್ರಿ, ಚಾಮರ, ವಾದ್ಯ ಮೇಳದೊಂದಿಗೆ ದೇಗುಲ ಪ್ರದಕ್ಷಿಣೆ ಹಾಕಿ ವಿಶೇಷ ಪೂಜೆಯನ್ನು ಸಲ್ಲಿಸಿ ಮೆರವಣಿಗೆಯ ಮೂಲಕ ಉತ್ಸವ ಮೂರ್ತಿಯನ್ನು ಮಹಾರಥೋತ್ಸವವಕ್ಕೆ ತರಲಾಯಿತು . ಸ್ವಾಮಿಗೆ ಸಂಕಲ್ಪಮಾಡಿ, ಅಷ್ಟೋತ್ತರ. ಬಿಲ್ವಾರ್ಚನೆ, ದೋಪ ದೀಪ ನೈವೇದ್ಯ ಮಹಾಮಂಗಳಾರತಿ ನೆರವೇರಿಸಿದರು. ಈ ವೇಳೆ ಭಕ್ತರು ಉಘೇ ಉಘೇ ಮಹಂತ್ ಮಲ್ಲಯ್ಯಾ, ಉಘೇ ಮಾದಪ್ಪ ಉಘೇ, ಸಾಲೂರುಮಠದೊಡೆನಿಗೆ ಉಘೇ ಉಘೇ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ಭಕ್ತಿ ಭಾವದ ಸಂಗಮದಲ್ಲಿ ಭಕ್ತರು ಮುಳುಗಿದರು..

ವರದಿ ಆರ್ ಉಮೇಶ್ ಮಲಾರಪಾಳ್ಯ