ಯುಗಾದಿಗೆ ಜೂಜಾಟ ನಿಷೇದ ಜೂಜಾಟ ಕಂಡು ಬಂದಲ್ಲಿ ಕ್ರಮ– ಸಾಧಿಕ್ ಪಾಷ
ದೊಡ್ಡಬಳ್ಳಾಪುರ: ಮುಂಬರುವ ಯುಗಾದಿ ಹಾಗು ರಂಜಾನ್ ಹಬ್ಬಗಳನ್ನು ಶಾಂತಿ ಸೌಹಾರ್ದತೆಯಿಂದ ನಡೆಸಬೇಕೆಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಸಾಧಿಕ್ ಪಾಷ ತಿಳಿಸಿದರು.ಅವರು ಗ್ರಾಮಾಂತರ ಪೋಲಿಸ್ ಠಾಣೆಯ ಆವರಣದಲ್ಲಿ ಮಾತನಾಡಿ ಯುಗಾದಿ ಹಾಗು ರಂಜಾನ್ ಹಬ್ಬಗಳು ಜೊತೆ ಜೊತೆಯಲ್ಲೆ ಬರಲಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹಬ್ಬಗಳನ್ನು ಆಚರಿಸಲು ಸಾರ್ವಜನಿಕರಿಗೆ ಮನವಿ ಮಾಡಿದರು. ಯುಗಾದಿಯ ಸಂದರ್ಭದಲ್ಲಿ ಜೂಜಾಟದಲ್ಲಿ ತೊಡಗಿಕೊಂಡರೆ ಅಂತವರ ವಿರುದ್ದ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.ಶಾಂತಿ ಸಭೆಯಲ್ಲಿ ಅನೇಕ ಮುಸಲ್ಮಾನ ಮುಖಂಡರುಗಳು,ಸಂಘ ಸಂಸ್ಥೆಗಳ ಮುಖಂಡರು,ಪಂಚಾಯ್ತಿ ಸದಸ್ಯರು ಗಳು ಸಾರ್ವಜನಿಕರು ಭಾಗವಹಿಸಿದ್ದರು.