ಶ್ರೀ ಧರ್ಮಸ್ಥಳ ಸಂಘದಿಂದ ಲಾಭಾಂಶ ವಿತರಣೆ
ಕೊಳ್ಳೇಗಾಲ: ತಾಲ್ಲೂಕಿನ ಹೊನ್ನೂರು ವಲಯದ ಹೊನ್ನೂರು ಕಾರ್ಯಕ್ಷೇತ್ರದಲ್ಲಿ,ಜಿಲ್ಲಾ ರೈತರ ಸಂಘದ ಅಧ್ಯಕ್ಷರಾದ
ಹೊನ್ನೂರು ಎಚ್ ವಿ ಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ ಲಾಭಾಂಶ ವಿತರಣೆ ಮಾಡಲಾಯಿತು
251146 ರೂ ನಿಸರ್ಗ ಪ್ರಗತಿ ಬಂದು ಸ್ವಸಹಾಯ ಸಂಘದಲ್ಲಿ ಒಟ್ಟು 07 ಮಂದಿ ಸದಸ್ಯರು ಇದ್ದು ಈ ಸಂಘಕ್ಕೆ ತಲಾ 10,000 ಅಂತೆ ಒಟ್ಟು 70000 ಲಾಭಾಂಶ ಬಂದಿರುತ್ತದೆ.
ಈ ಸಂಘದ ಎಲ್ಲಾ ಸದಸ್ಯರು ಸಂತೋಷ ವ್ಯಕ್ತಪಡಿಸಿರುತ್ತಾರೆ
ಕೊಳ್ಳೇಗಾಲ ತಾಲ್ಲೂಕಿನ ಯೋಜನಾಧಿಕಾರಿಗಳಾದ ದಿನ್ ರಾಜ ಶೆಟ್ಟಿ ಅವರು ಈ ಸಂಘಕ್ಕೆ ಲಾಭಾಂಶ ವಿತರಣೆ ಮಾಡಿರುತ್ತಾರೆ.
ಈ ಸಂಘದ ಸದಸ್ಯರಾದ ಎಂ ಡಿ ಪ್ರತಾಪ್ ವಿ ಅರಸು ಅವರು ಡಾಕ್ಟರ್ ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಯೋಜನೆಯಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮತ್ತು ಸಂಸ್ಥೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿ ಶುಭ ಹಾರೈಸಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ಸೋಮಶೇಖರ್,ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಪ್ರಕಾಶ್, ಎಚ್ ಸಿ, ಮಂಜುನಾಥ್, ಬಸವರಾಜ್ ಎಂ, ಚಾಮರಾಜ ಎಚ್ ಸಿ, ಮಂಜುನಾಥ್ ಎಚ್ಎಂ, ಮಲ್ಲೇಶ್,ಸೇವಾಪ್ರತಿನಿಧಿ, ಸಂಘದ ಸದಸ್ಯರು ಭಾಗವಹಿಸಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ