ಕ್ಷಯ ಮುಕ್ತ ಭಾರತವನ್ನು ನಿರ್ಮಿಸಲು ಟಿಬಿ ಚಾಂಪಿಯನ್ ಗಳ ಸಹಭಾಗಿತ್ವದಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ ಆಚರಣೆ

ದೊಡ್ಡಬಳ್ಳಾಪುರ : ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆದು ಕಾಯಿಲೆಯ ವಿರುದ್ಧ ಹೋರಾಡಿ ಟಿಬಿ ಯನ್ನು ಗೆದ್ದು ಬಂದ ಟಿಬಿ ಚಾಂಪಿಯನ್ ಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲೆಕ್ಕ ಕೃಷ್ಣಾರೆಡ್ಡಿ ಹಾಗೂ ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ ನಾಗೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈಗಾಗಲೇ ತಾಲೂಕಿನ ವ್ಯಾಪ್ತಿಯಲ್ಲಿ ಚಿಕಿತ್ಸೆಯನ್ನು ಪಡೆದು ಟಿಬಿ ಯಿಂದ ಗುಣಮುಖರಾಗಿರುವ ವ್ಯಕ್ತಿಗಳು ಟಿಬಿ ಚಾಂಪಿಯನ್ ಗಳಾಗಿದ್ದು,ಇವರುಗಳಲ್ಲಿ ಕೆಲ ಚಾಂಪಿಯನ್ ಗಳನ್ನು ಆಯ್ಕೆ ಮಾಡಿ ಇಂದು ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ ಟಿಬಿ ಚಾಂಪಿಯನ್ ಗಳು ಮುಂದಿನ ದಿನಗಳಲ್ಲಿ ಟಿ ಬಿ ಕಾಯಿಲೆಗೆ ತುತ್ತಾಗಿ ಬರುವ ಹೊಸ ಟಿಬಿ ರೋಗಿಗಳಿಗೆ ಮನೋಸ್ಥೈರ್ಯ ನೀಡಿ ಚಿಕಿತ್ಸೆ ಪೂರ್ಣವಾಗಿ ಪಡೆಯಲು ಮನ ಒಲಿಸುವ ಮೂಲಕ ಕ್ಷಯ ಮುಕ್ತ ಭಾರತದ ನಿರ್ಮಾಣಕ್ಕೆ ಸಹಾಯಕವಾಗಲಿದ್ದಾರೆ ಎಂದರು.

ಒಂದು ವೇಳೆ ಚಿಕಿತ್ಸೆ ಪ್ರಾರಂಭಿಸಿದ ನಂತರ ರೋಗಿಯು ಅರ್ಧದಲ್ಲಿ ಚಿಕಿತ್ಸೆ ಬಿಟ್ಟರೆ ಆತನಿಗೆ ತನ್ನ ಚಿಕಿತ್ಸೆ ಯ ಅನುಭವಗಳು ಮತ್ತು ಉದಾಹರಣೆಗಳನ್ನು ನೀಡುವುದರ ಮೂಲಕ ಚಿಕಿತ್ಸೆಯನ್ನು ಮುಂದುವರಿಸಲು ಆಪ್ತ ಸಮಾಲೋಚನೆ ಮಾಡುವುದು. ಶ್ರೀ ಶಕ್ತಿ ಸ್ವಸಹಾಯ ಸಂಘಗಳಲ್ಲಿ, ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿ, ಸಮುದಾಯದಲ್ಲಿ ಶಾಲಾ-ಕಾಲೇಜುಗಳಲ್ಲಿ ಹಾಜರಾಗಿ ಜಾಗೃತಿ ಮೂಡಿಸುವುದು ಟಿಬಿ ಬಗ್ಗೆ ಅರಿವು ಮೂಡಿಸುವುದು ಟಿಬಿ ಬಗ್ಗೆ ಇರುವಂತಹ ಕಳಂಕ ತಾರತಮ್ಯವನ್ನು ಹೋಗಲಾಡಿಸಿ ಕ್ಷಯ ಮುಕ್ತ ಭಾರತವನ್ನು ಮಾಡಲು ಕೈಜೋಡಿಸುವುದು. ಹಾಗೂ ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಮಾಡುವಂತೆ ಮನವರಿಕೆ ಮಾಡುವುದು ರೋಗಿಯನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವಂತೆ ಪೋಷಕರಿಗೆ ಮಾನವಲಿಸುವುದು . ತಮ್ಮ ವ್ಯಾಪ್ತಿಯಲ್ಲಿ ಬರುವ ಕ್ಷಯ ರೋಗಿಗಳನ್ನು ದತ್ತು ಪಡೆದು ಫುಡ್ ಕಿಟ್ ವಿತರಣೆ ಮಾಡಲು ಸಾರ್ವಜನಿಕ ರಲ್ಲಿ ಮನವರಿಕೆ ಮಾಡುವುದು ಇವರ ಪ್ರಮುಖ ಕರ್ತವ್ಯ ಹಾಗೂ ಉದ್ದೇಶವಾಗಿರುತ್ತದೆ ಎಂದು ತಿಳಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಆಡಳಿತಧಿಕಾರಿ ಶಾರದಾ ನಾಗರಾಜ್ ಸೇರಿದಂತೆ ಜಿಲ್ಲಾ ಕ್ಷಯ ರೋಗ ನಿರಂತರ ಅಧಿಕಾರಿಗಳ ಕಚೇರಿಯ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು.