ದೊಡ್ಡಬಳ್ಳಾಪುರದಲ್ಲಿ ಯಶಸ್ವಿಯಾಗದ ಕರ್ನಾಟಕ ಬಂದ್
ದೊಡ್ಡಬಳ್ಳಾಪುರ:ರಾಜ್ಯ ಕನ್ನಡ ಒಕ್ಕೂಟದಿಂದ ಮರಾಠಿ ಪುಂಡರ ಅಟ್ಟಹಾಸ ಖಂಡಿಸಿ ಹಾಗು ನೀರಾವರಿ ಯೋಜನೆಗಳು ಜಾರಿಯಾಗಬೇಕು ಎಂದು ಕರ್ನಾಟಕ ಬಂದ್ ಕರೆ ನೀಡಲಾಗಿದ್ದು ಕೆಲವೂಂದು ಕನ್ನಡ ಸಂಘಟನೆಗಳು ಬೆಂಬಲ ವಾಪಸ್ ಪಡೆದ ಹಿನ್ನೆಲೆಯಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆಯಿಂದ ಕರ್ನಾಟಕ. ಬಂದ್ ಪ್ರತಿಭಟನೆಗೆ ಮಾತ್ರ ಸೀಮಿತವಾಗಿ
ತಾಲ್ಲೂಕಿನ ಕನ್ನಡಪರ ರೈತಪರ ದಲಿತಪರ ಸಂಘಟನೆಗಳು ಬಂದ್ ಆಚರಿಸದೇ, ಪ್ರತಿಭಟನೆಗೆ ಕರೆ ನೀಡಿದ್ದರಿಂದ ಜನಜೀವನ ಸಹಜ ಸ್ಥಿತಿಯಲ್ಲಿತ್ತು. ರಾಜ್ಯ ರಸ್ತೆ ಸಾರಿಗೆ ಸೇರಿದಂತೆ ಖಾಸಗಿ ಬಸ್ಸುಗಳು ಸಂಚಾರ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದವು. ಶಾಲಾ ಕಾಲೇಜುಗಳು, ವಿವಿಧ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಚಿತ್ರಮಂದಿರದಲ್ಲಿ ಪ್ರದರ್ಶನಗಳು ನಡೆದವು. ಮಾರುಕಟ್ಟೆ ವಹಿವಾಟು ಎಂದಿನಂತೆ ಇತ್ತು. ಕೈಗಾರಿಕಾ ಪ್ರದೇಶದಲ್ಲಿಯೂ ಕಾರ್ಖಾನೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ತಾಲ್ಲೂಕು ಕನ್ನಡ ಪರ ಸಂಘಟನೆಗಳ ಒಕ್ಕೂಟ ಕರ್ನಾಟಕ ರಾಜ್ಯ ಕನ್ನಡ ಪರ ಸಂಘಟನೆಗಳ ಒಕ್ಕೂಟ ನೀಡಿದ ಕರ್ನಾಟಕ ಬಂದ್ ಗೆ ಬೆಂಬಲವಾಗಿ ಎಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಸಾಂಕೇತಿಕ ಹೋರಾಟದ ಮುಖಾಂತರ ಬೆಂಬಲ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ವಿರೋಧಿ ಧೋರಣೆ ಮತ್ತು ಕನ್ನಡಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯ ದಬ್ಬಾಳಿಕೆ ಇಲ್ಲಿಗೆ ನಿಲ್ಲಬೇಕು ಹಾಗೂ ಕನ್ನಡಿಗರ ಈ ಹಿಂದಿನ ಎಲ್ಲಾ ಹೋರಾಟಗಳಿಗೂ ಜಯ ಸಿಗಬೇಕು ಎಂಬುವ ಘೋಷಣೆಯೊಂದಿಗೆ ಎಲ್ಲರೂ ಒಗ್ಗೂಡಿ ಹೋರಾಟ ನಡೆಸಲಾಯಿತು.
ಈ ಬಂದ್ ಹಿನ್ನೆಲೆಯಲ್ಲಿ ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್ ಮಾತನಾಡಿ ಕನ್ನಡಿಗರ ಮೇಲೆ ದೌರ್ಜನ್ಯ ಎಸಗುತ್ತಿರುವ ಎಂಇಎಸ್ ಮತ್ತು ಶಿವಸೇನೆಯನ್ನು ಸರ್ಕಾರ ನಿಷೇಧಿಸಬೇಕು. ಹಿಂದಿ ಹೇರಿಕೆ ನಿಲ್ಲಬೇಕು. ರಾಜ್ಯದ ನೀರಾವರಿ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ ಈ ಬಾಗ ಮರಾಠಿಗರಿಗೆ ಸೇರಿದ್ದು ಎಂಬ ಮಾತಿಗೆ ಪ್ರತಿ ಕ್ರಿಯೆಯಾಗಿ ಬೆಳಗಾವಿಯ ವಿಚಾರವಾಗಿ ಪದೇಪದೆ ಖ್ಯಾತೆ ತೆಗೆದು ದೌರ್ಜನ್ಯ ನಡೆಸುತ್ತಿರುವ ಎಂಇಎಸ್ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕಿದೆ. ಕೇಂದ್ರ ಸರ್ಕಾರ ಬಲವಂತ ಹಿಂದಿ ಹೇರಿಕೆ ನಿಲ್ಲಿಸಬೇಕು, ಮಹದಾಯಿ, ಕೃಷ್ಣ ಮೇಲ್ದಂಡೆ ಯೋಜನೆ ಮೊದಲಾಗಿ ಕರ್ನಾಟಕದ ನೀರಾವರಿ ಯೋಜನೆಗಳನ್ನು ಜಾರಿ ಮಾಡಲು ಮೀನಮೇಷ ಎಣಿಸುತ್ತಿದೆ ಈ ಕೂಡಲೆ ಜಾರಿಗೊಳಿಸಲು ಕನ್ನಡ ನೆಲ ಜಲ ಭಾಷೆ ಗಡಿ ಹಾಗು ಕನ್ನಡಿಗರ ಹಿತರಕ್ಷಣೆಗೆ ಸೂಕ್ತ ಕ್ರಮ ವಹಿಸಬೇಕೆಂದು ಎಂದು ಜಾಗೃತ ಪರಿಷತ್ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಅಕ್ರೋಶ ವ್ಯಕ್ತ ಪಡಿಸಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಪರ ಹೋರಾಟಗಾರ ಜಿ.ಸತ್ಯನಾರಾಯಣ, ಕರವೇ ತಾಲೂಕು ಅಧ್ಯಕ್ಷ ಮರುಳಾರಾಧ್ಯ, ಜಿಲ್ಲಾ ಶಿವರಾಜ್ ಕುಮಾರ ಸೇನ ಸಮಿತಿಯ ಜಿಲ್ಲಾಧ್ಯಕ್ಷ , ಚೌಡರಾಜು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹನುಮೇಗೌಡ, ಕನ್ನಡ ಪಕ್ಷದ ವೆಂಕಟೇಶ್, ಮುನಿಪಾಪಯ್ಯ, ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಸು.ನರಸಿಂಹಮೂರ್ತಿ, ಉಪಾಧ್ಯಕ್ಷ ವಿ.ಪರಮೇಶ್, ತಿಮ್ಮರಾಜು, ಮುಖಂಡ ನಾಗರಾಜ, ತೂಬಗೆರೆ ಶರೀಫ್ ಮುಖಂಡರಾದ ನವೀನ್, ನಾಗರಾಜ್, ಮಲ್ಲೇಶ್, ಹಲವಾರು ಮುಂಖಡರು ಭಾಗವಹಿಸಿದ್ದರು.