ಬಿಸಿಲಿನ ಬೇಗೆಗೆ ಬಸವಳಿದ ದೊಡ್ಡಬಳ್ಳಾಪುರಕ್ಕೆ ಮಳೆಯ ಸಿಂಚನ

ದೊಡ್ಡಬಳ್ಳಾಪುರ:ಬೇಸಿಗೆಯ ಬಿಸಿಲಿಗೆ ತಂಪಾಗಿ ಧರೆಗೆ ಇಳಿದ ವರ್ಷಧಾರೆ ಜನರಿಗೆ ಮಳೆಯ ತಂಪು ಎರೆದಿದೆ: ನಾಲ್ಕೈದು ದಿನ ಭಾರೀ ಮಳೆಯಾಗುವ ಸಾಧ್ಯತೆ

ಬಿಸಿಲಿನ ತಾಪ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ನಗರದ ಕೆಲವು ಪ್ರದೇಶಗಳಲ್ಲಿ ಶನಿವಾರ ವರ್ಷದ ಮೊದಲ ಮಳೆ ಸುರಿದಿದೆ.

ವರ್ಷದ ಮೊದಲ ಮಳೆ ಆಗಮನಕ್ಕೆ ಜನರು ಸಂತಸ ವ್ಯಕ್ತ ಪಡಿಸಿದ್ದಾರೆ ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ಮಳೆಯ ತಂಪು ಸಿಕ್ಕಂತಾಗಿದೆ.

ಮುಂದಿನ ನಾಲ್ಕೈದು ದಿನ ಭಾರೀ ಮಳೆಯಾಗಲಿದೆ. ಬೆಂಗಳೂರು ಸೇರಿ ಕರ್ನಾಟಕದ 25ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಈ ಬಾರಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಆರಂಭ ಪಡೆದುಕೊಳ್ಳುವ ಸಾಧ್ಯತೆ ಇದ್ದು, ರೈತರು ಕೂಡ ಖುಷ್‌ ಆಗಿದ್ದಾರೆ. ಮಾರ್ಚ್ ಕೊನೆಯ ವಾರ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದ್ದು ಯುಗಾದಿ ಮುನ್ನವೇ ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿರಲಿದೆ.