ಹಿಟ್ ಮತ್ತು ರನ್ ಅಪಘಾತದಲ್ಲಿ ಮರಣ ಹೊಂದಿದ ವಾರಸುದಾರರು ಗಾಯಗೊಂಡವರಿಗೆ ಪರಿಹಾರ ಸೌಲಭ್ಯ :ಜಿಲ್ಲಾಧಿಕಾರಿ ಶಿಲ್ಪ ನಾಗ್

ಚಾಮರಾಜನಗರ : ಹಿಟ್ ಮತ್ತು ರನ್ ಅಪಘಾತದಲ್ಲಿ ಮರಣ ಹೊಂದಿದ ವಾರಸುದಾರರು ಮತ್ತು ಗಾಯಗೊಂಡವರು ಪರಿಹಾರ ಮೊತ್ತವನ್ನು ಪಡೆಯಲು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಅರ್ಜಿ ಸಲ್ಲಿಸುವಂತೆ ಶಿಲ್ಪಾ ನಾಗ್ ತಿಳಿಸಿದ್ದಾರೆ.

ಮೋಟಾರು ವಾಹನ ಕಾಯ್ದೆ 1988 ರೆಡಿ ಸೆಕ್ಷನ್ 161 ರಲ್ಲಿ ಕಾಂಪನ್ಸೇಷನ್ ಟು ವಿಟಮಿನ್ಸ್ ಆಫ್ ಹಿಟ್ ಅಂಡ್ ರನ್ ಮೋಟಾರು ಆಕ್ಸಿಡೆಂಟ್ ಸ್ಕೀಮ್ 2022 ರ ಸೋಲಾಶಿಯಂ ಯೋಜನೆಯ 1989ನ್ನು ಮರುಪರಿಶೀಲಿಸಿ 2022ರ ಏಪ್ರಿಲ್ ಒಂದರಿಂದ ಜಾರಿಗೆ ಬರುವಂತೆ ಸದರಿ ಯೋಜನೆಯನ್ನು ವರ್ದಿಸಲು ಹಾಗೂ ರಸ್ತೆ ಅಪಘಾತಗಳ ಹಿಟ್ ಮತ್ತು ರನ್ ಪ್ರಕರಣಗಳಲ್ಲಿ ಗಾಯಗೊಂಡವರಿಗೆ ಐವತ್ತು ಸಾವಿರ ರೂಪಾಯಿಗಳನ್ನು ಮತ್ತು ಮೃತಪಟ್ಟ ಅವಲಂಬಿತ ಕುಟುಂಬದ ಸದಸ್ಯರಿಗೆ 2 ಲಕ್ಷ ರೂಗಳ ಪರಿಹಾರ ಮೊತ್ತವನ್ನು ಈ ಯೋಜನೆ ಅಡಿ ಪಡೆದುಕೊಳ್ಳಬಹುದು.

ಸಾರ್ವಜನಿಕರು ಪರಿಹಾರದ ಅನುಕೂಲವನ್ನು ಪಡೆದುಕೊಳ್ಳಲು ಸಮಿತಿಯನ್ನು ರಚಿಸಲಾಗಿರುತ್ತದೆ ಅದರಂತೆ ಕ್ಲೈಮ್ಸ್ ಸೆಟಲ್ಮೆಂಟ್ ಕಮಿಷನರ್ ಆಗಿ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಪೊಲೀಸ್ ಉಪಾದಿಕ್ಷಕರು, ಕ್ಲೈಮೆನ್ಸ್ ಸೆಟಲ್ಮೆಂಟ್ ಎನ್ಕ್ವೈರಿ ಆಫೀಸರ್ ಆಗಿ ಉಪ ವಿಭಾಗ ಅಧಿಕಾರಿಗಳು, ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ಅಧೀಕ್ಷಕರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ರಸ್ತೆ ಸುರಕ್ಷತೆಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಯ ಸದಸ್ಯರಾದ ನಗರದ ರೋಟರಿ ಸಿಲ್ಕ್, ಸಿಟಿಯ ಮಾಜಿ ಅಧ್ಯಕ್ಷರಾದ ಡಿಎಸ್ ಗಿರೀಶ್ ಸಮಿತಿಯ ಸದಸ್ಯರಾಗಿದ್ದಾರೆ. ಸದಸ್ಯ ಕಾರ್ಯದರ್ಶಿಗಳಾ ಗಿ ಮೈಸೂರಿನ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಅಧಿಕಾರಿ ಶಿವಪ್ರಸನ್ನ ನೇಮಕವಾಗಿದ್ದಾರೆ.

ಹಿಟ್ ಮತ್ತು ರನ್ ಅಪಘಾತದಲ್ಲಿ ಮರಣ ಹೊಂದಿದ ವಾರಸುದಾರರು ಹಾಗೂ ಗಾಯಗೊಂಡವರು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08226-223160, ಮೊಬೈಲ್ ಸಂಖ್ಯೆ9740942901, ಹಾಗೂ ಪೊಲೀಸ್ ಇಲಾಖೆಯ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 08226-222383, ಮೊಬೈಲ್ ಸಂಖ್ಯೆ 9480804600 ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ.