ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲ್ಲೋಕಿನಲ್ಲಿ ಇತ್ತೀಚಿಗೆ ಮತದಾರರ ಮಾಹಿತಿ ಸೋರಿಕೆಯಾಗಿದೆ ಎಂದು ಕಾಂಗ್ರೆಸ್ ಮುಖುಂಡರ ಆರೋಪ ಮಾಸುವ ಮುನ್ನವೇ ಅಪರಿಚಿತರಿಂದ ಮತದಾರರ ಮಾಹಿತಿ ನೀಡುವಾದಾಗಿ ನನಗೆ ಅನೇಕ ಕರೆಗಳು ಬಂದಿದೆ ಎಂದು ಕೆ ಆರ್ ಎಸ್ ಪಕ್ಷದ ಅಭ್ಯರ್ಥಿ ಬಿ.ಶಿವಶಂಕರ್ ಶುಕ್ರವಾರ ನೆಡೆದ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡೆಸಿದರು.ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ನನ್ನ ಹೆಸರು ಘೋಷಣೆಯಾದ ದಿನದಿಂದಲೆ ನನ್ನ ವೈಯಕ್ತಿಕ ಮೊಬೈಲ್ ನಂಬರ್ ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಗಳು ದೊಡ್ಡಬಳ್ಳಾಪುರ ತಾಲ್ಲೂಕಿನ ಮತದಾರರ ದತ್ತಾಂಶದ ಮಾಹಿತಿ ನೀಡುವುದಾಗಿ ಮತ್ತು ಕೆ ಆರ್ ಎಸ್ ಪಕ್ಷದ ಪರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದಾಗಿ ತಿಳಿಸಿದ್ದು ಮತದಾರರ ಮಾಹಿತಿ/ಡೇಟಾವನ್ನು ಕದ್ದು ಮಾರಾಟ ಮಾಡುತ್ತಿರುವವರು ಯಾರು ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಬಿ ಶಿವಶಂಕರ್ ಒತ್ತಾಹಿಸಿದರು.
ಬಿಜೆಪಿ ಅಭ್ಯರ್ಥಿ ಪರವಾಗಿ ಮತದಾರರಿಗೆ Q R ಕೋಡ್ ಕೂಪನ್ ನೀಡಿರುವರ ಬಗ್ಗೆ ಚುನಾವಣಾ ಅಧಿಕಾರಿಗಳು ಗಂಬೀರವಾಗಿ ಪರಿಗಣಿಸಿ ಶೀಘ್ರದಲ್ಲಿ ಕ್ರಮ ಜರುಗಿಸಲು ಮುಂದಾಗಬೇಕು,ಕ್ಷೇತ್ರದಲ್ಲಿ ಜೆ ಡಿ ಎಸ್ ಪ್ರಚಾರ ಸಭೆಗೆ ಆಗಮಿಸಿದ್ದ ಅಪ್ರಾಪ್ತರಿಗೆ ಹಣ ಹಂಚುತಿದ್ದ ವಿಡಿಯೋ ತುಣುಕುಗಳು ಹರಿದಾಡುತ್ತಿದ್ದು ಕಾಂಗ್ರೆಸ್ ಪಕ್ಷದವರು ಸಹ ಪ್ರಚಾರಕ್ಕೆ ಮಕ್ಕಳ ನ್ನು ಬಳಸಿ ಕೊಳ್ಳುತ್ತಿದ್ದಾರೆ ಸಂಖ್ಯೆ ತೋರಿಸುವ ಸಲುವಾಗಿ ನಮ್ಮ ಕೆ ಆರ್ ಎಸ್ ಪಕ್ಷ ಪ್ರಚಾರ ಸಭೆಗಳಿಗೆ ಬಾಡಿಗೆ ಕಾರ್ಯಕರ್ತರನ್ನು ಕರೆ ತರುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ ಆರ್ ಎಸ್ ತಾಲ್ಲೂಕು ಅಧ್ಯಕ್ಷ ವೇಣು,ನಗರ ಘಟಕದ ಅಧ್ಯಕ್ಷ ರಾಮಕೃಷ್ಣ ಕಾರ್ಯದರ್ಶಿ ವೆಂಕಟೇಶ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಆನಂದ್ ಚಾಲಕರ ಸಂಘದ ವಿಜಯ್ ಇದ್ದರು..