ಘಾಟಿ ದೇವಸ್ಥಾನದ ಆವರಣದಲ್ಲಿ ಜಲ್ ಜೀವನ್ ಮಿಷನ್, ಸ್ವಚ್ಛಭಾರತ ಮಿಷನ್ ಕಾಮಗಾರಿಗೆ ಚಾಲನೆ

ದೊಡ್ಡಬಳ್ಳಾಪುರ:ತೂಬಗೆರೆ ಹೋಬಳಿ ಮೇಲಿನ ಜೋಗಿನಹಳ್ಳಿ (SS ಘಾಟಿ ) ದೇವಸ್ಥಾನದ ಆವರಣದಲ್ಲಿ ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಗಳ ಕಾಮಗಾರಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಡಾ: ಅನುರಾಧ ಕೆ ಎನ್ ಉದ್ಘಾಟಿಸಿದರು ನಂತರ,ಅವರು ಮಾತನಾಡಿ ಜಲ ಜೀವನ್ ಮಿಷನ್ ಹಾಗು ಸ್ವಚ್ಛ ಭಾರತ ಮಿಷನ್ ಯೋಜನೆಯು ಕಾಮಗಾರಿಗಳ ಅನುಷ್ಠಾನದ ಉದ್ದೇಶದ ಪ್ರಾಮುಖ್ಯತೆ ಯೋಜನೆ ಉಪಯೋಗಗಳು ಸುಸ್ಥಿರ ನೀರಿನ ವ್ಯವಸ್ಥೆ ಕಾರ್ಯಾತ್ಮಕ ನಳ ನೀರು ಸಂಪರ್ಕ ಗಳ ಮಾದರಿಗಳ ಕುರಿತು ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮಾಡಲಾಗಿದೆ ಜಲ ಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಪಾಢಿಕೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶ್ರೀಕಾಂತ್ ಕಾರ್ಯ ಪಾಲಕ ಅಭಿಯಂತರರು ಬೆಂಗಳೂರು .ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಶ್ರೀ ಅಮಿತ್ ಸಹಾಯಕ ಅಭಿಯಂತರರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷರು ಗ್ರಾಮ ಪಂಚಾಯಿತಿಯ ಸದಸ್ಯರು ಜಿಲ್ಲಾ ಯೋಜನಾ ವ್ಯವಸ್ಥಾಪಕರು ISA ಸಂಸ್ಥೆಯ ತಂಡದವರು ಎಂ ನಾರಾಯಣ ಸ್ವಾಮಿ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸುಬ್ರಮಣ್ಯ ಸ್ವಾಮಿ ದೇವಸ್ಥಾನ. ಪ್ರಧಾನ ಅರ್ಚಕರು ಸುಬ್ರಮಣಿ ಶಾಲಾ ಮಕ್ಕಳು ಹಾಗು ಸಾರ್ವಜನಿಕರು ಹಾಜರಿದ್ದರು.