ಕಾಂಗ್ರೆಸ್ ಗೆ AITUC ಬೆಂಬಲ
ದೊಡ್ಡಬಳ್ಳಾಪುರ:ಮೇ 10ರಂದು ನಡೆಯಲಿರುವ ದೊಡ್ಡಬಳ್ಳಾಪುರ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐಟಕ್) ಕಾಂಗ್ರೆಸ್ ಅಭ್ಯರ್ಥಿ ಟಿ ವೆಂಕಟರಮಣಯ್ಯರವರಿಗೆ ಬೆಂಬಲ ನೀಡಿದೆ.
ಕಾಂಗ್ರೆಸ್ ಕಛೆರಿಯಲ್ಲಿ ನೆಡೆದ ಪತ್ರಿಕಾಗೋಷ್ಠಿಯಲ್ಲಿ AITUC ಪದಾದಿಕಾರಿಗಳು ಮಾತನಾಡಿ ಜನಪರ ಸರ್ಕಾರ ತರುವ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣಯ್ಯ ರವರಿಗೆ ಬೆಂಬಲ ನೀಡಲಿದ್ದೇವೆ ಎಂದು ಹೇಳಿದರು.AITUC ಬೆಂಗಳೂರು ಗ್ರಾಮಾಂತರದ ಜಿಲ್ಲಾಅಧ್ಯಕ್ಷ ಬಿ ಆರ್ ಮಹೇಶ್ ಮಾತನಾಡಿ ಆಶಾ ಕಾರ್ಯಕರ್ತೆಯರು,ಅಂಗನವಾಡಿ ಅಡುಗೆ ಸಿಬ್ಬಂದಿಗೆ ಹೆಚ್ಚಿನ ಪ್ರೋತ್ಸಾಹ ಧನ ನೀಡದೆ ಆ ವರ್ಗ ಬಸವಳಿದಿದೆ.ಮಹಿಳಾ ಕಾರ್ಮಿಕರಿಗೆ ರಾತ್ರಿ ಪಾಳಿ ಉದ್ಯೋಗ ಹಾಗೂ ಕಾರ್ಮಿಕರಿಗೆ 12ಘಂಟೆ ಕೆಲಸ ಎಂಬ ಬಿಜೆಪಿ ಸರ್ಕಾರದ ನಿರ್ಣಯ ಕಾರ್ಮಿಕರಿಗೆ ಕಷ್ಟವಾಗಿದೆ.ಪ್ರಸ್ತುತ ಸರ್ಕಾರ ಖಾಸಗೀಕರಣಕ್ಕೆ ಒತ್ತು ನೀಡುತ್ತಿದ್ದು BSNL BESCOM ಸೇರಿದಂತೆ ಅನೇಕ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಕರಣದ ನೆಪದಲ್ಲಿ ಕಾರ್ಪೊರೇಟ್ ಕಂಪನಿಗಳಿಗೆ ಮಣೆ ಹಾಕುತ್ತಿದೆ ಇದರಿಂದ ವಿದ್ಯಾವಂತ ಯುವ ಜನತೆಗೆ ಸರ್ಕಾರಿ ಕೆಲಸ ಮರೀಚಿಕೆಯಾಗಿದೆ.
೪೦%ಕಮೀಷನ್ ನಿಂದಾಗಿ ಭ್ರಷ್ಟಾಚಾರ ಹೆಚ್ಚಿದ್ದು ರಾಜ್ಯದ ಜನ ಪರಿತಪಿಸುವಂತಾಗಿದೆ ಈ ಎಲ್ಲಾ ಹಿನ್ನೆಲೆಯಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವನ್ನು ಅಧಿಕಾರ ಮುಕ್ತವನ್ನಾಗಿ ಮಾಡಲು ಈ ಬಾರಿಯ ಚುನಾವಣೆಯಲ್ಲಿ ಶ್ರಮಿಕ ಸಂಘಟನೆಗಳ ಮತಗಳು ಹಂಚಿ ಹೋಗದಂತೆ ನಿರ್ಣಹಿಸಿ ಕಾಂಗ್ರೆಸ್ ಗೆ ಬೆಂಬಲ ನೀಡಲು ನಿರ್ದರಿಸಲಾಗಿದೆ ಎಂದರು.
ಸಂಘಟನಾ ಕಾರ್ಯದರ್ಶಿ ಬಾಲು ಮಾತನಾಡಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಮಿಕರ ಬಗ್ಗೆ ಕನಿಷ್ಟ ಕಾಳಜಿ ಇಲ್ಲವಾಗಿದ್ದು ಕೇವಲ ಕಾರ್ಖಾನೆ ಮಾಲಿಕರ ಪರ ನಿಂತಿದೆ.ಕನಿಷ್ಠ ಕಾರ್ಮಿಕ ವೇತನ ಹೆಚ್ಚಳವಾಗದೆ ಕಾರ್ಮಿಕರು ಸಂಕಷ್ಟ ಗಳಿಂದ ಬಳಲುವಂತಾಗಿದೆ ಇಂತಹ ಕಾರ್ಮಿಕ ವಿರೋಧಿ ಬಿಜೆಪಿ ಸರ್ಕಾರವನ್ನು ಕಿತ್ತೊಗಿಯುವ ಸಲುವಾಗಿ ನಮ್ಮ ಸಂಘಟನೆ ಬೆಂಬಲ ನೀಡುತ್ತಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜಿ ಲಕ್ಷ್ಮೀಪತಿ,ಕಸಬಾ ಬ್ಲಾಕ್‌ ಅದ್ಯಕ್ಷ ವೆಂಕಟೇಶ್ (ಅಪ್ಪಿ),ಟ್ರೇಡ್ ಯೂನಿಯನ್ ಮುಖುಂಡರಾದ ಆಂಜಿನಪ್ಪ,ಭಾನು ಪ್ರಕಾಶ್,ಮೋಹನ್, ಶ್ರೀನಿವಾಸ್ ಹಾಗು ರಾಜಘಟ್ಟ ರವಿ ಹಾಜರಿದ್ದರು.