ಆನ್ಲೈನ್ ವ್ಯವಸ್ಥೆ ಇದ್ದರೂ ಕಂದಾಯ ಕಟ್ಟಲಿಕ್ಕೆ ಜನ ಕ್ಯೂ ನಿಲ್ಲುವುದು ತಪ್ಪಿಲ್ಲ–ಬಿ. ಸಿ. ರೇಖಾ
ದೊಡ್ಡಬಳ್ಳಾಪುರ:ನಾಗರಿಕರಿಗೆ ಅನುಕೂಲವಾಗಲೆಂದು ಅಳುವ ಸರ್ಕಾರಗಳು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಆದುನಿಕ ತಂತ್ರಜ್ಞಾನ ಬಳಸಿ ಎಲ್ಲಾ ದಾಖಲೆಗಳನ್ನು ಮೊಬೈಲ್ನಲ್ಲಿ ನೋಡುವಂತ ಡಿಜಿಟಲ್ ಆನ್ಲೈನ್ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ವ್ಯವಸ್ಥೆ ಸರಿಯಾಗಿ ಬಳಕೆಯಾಗದೆ ಬರೀ ಆದೇಶದಲ್ಲಿ ಉಳಿದಿದೆ ಎನ್ನುವುದು ಕಟುಸತ್ಯ ಎಂದು ಸರಿಯಾಗಿ ಜಾರಿಯಾಗದ ತಂತ್ರ ಜ್ಞಾನದ ಬಗ್ಗೆ ಗೃಹಿಣಿ, ತಂತ್ರಾಂಶ ಅಭಿಯಂತರೆ ಬಿ. ಸಿ. ರೇಖಾ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಂತ್ರಜ್ಞಾನ ಮುಂದುವರೆದಿದ್ದರೂ ಸಹ ನಗರಸಭೆ ಕಂದಾಯ, ವಿದ್ಯುತ್ ಬಿಲ್ ಸೇರಿದಂತೆ ಸಾರ್ವಜನಿಕ ವಲಯದ ಕೆಲಸಗಳಿಗೆ ನಾಗರಿಕರು ನಾಗರಿಕರು ಸರತಿ ಸಾಲಿನಲ್ಲಿ ನಿಂತು ಬಿಲ್ ಕಟ್ಟುವ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ರೇಖಾ ಪ್ರಸ್ತುತ ದಿನಗಳಲ್ಲಿ ಬಹುಪಾಲು ಅಂಶಗಳು ತಾಂತ್ರಿಕವಾಗಿ ಡಿಜಿಟಲಿ ಕರಣ ಯುಗದಲ್ಲಿದ್ದರು ಸಹ ಜೊತೆಗೆ ಪೇಪರ್ ರಹಿತ ವ್ಯವಸ್ಥೆ ಜಾರಿಗೆ ಬಂದರೂ ಸಹ ನಗರ ಸಭೆಗಳ ಖಾತಾ ಸಂಬಂಧಿಸಿದಂತೆ ಕಂದಾಯ ಕಟ್ಟಲು ಜನ ಕಚೇರಿಗಳ ಮುಂದೆ ಕೆಲಸ ಕಾರ್ಯ ಬಿಟ್ಟು ಗಂಟೆ ಗಟ್ಟಲೆ ಕ್ಯೂ ನಿಲ್ಲುವುದು ತಪ್ಪಿಲ್ಲ ಎಂದರೆ ಆನ್ಲೈನ್ ವ್ಯವಸ್ಥೆ ಎಲ್ಲಿ ಯಾರಿಗೆ ಜಾರಿಯಾಗಿದೆ ಎಂಬ ಅನುಮಾನ ಬರದಿರದು. ಸಾಲದ್ದಕ್ಕೆ ಕಂದಾಯ ಕಟ್ಟಲು ಅರ್ಜಿಗಳನ್ನು ತುಂಬಲು ಬಾರದ ಜನಕ್ಕೆ ಸ್ಥಳೀಯ ಸಂಸ್ಥೆಗಳು ದಿನಗಟ್ಟಲೆ ಅಲೆದಾಡಿಸುವುದು ಎಷ್ಟರ ಮಟ್ಟಿಗೆ ಸರಿ. U. P. ಐ. ಸಹಾಯದಿಂದ ಬ್ಯಾಂಕ್ ಖಾತೆಗೆ ವರ್ಗಾಯಿಸುವ ಸೌಲಭ್ಯಗಳಿದ್ದರು ಸಹ ಜನ ಸಾಮಾನ್ಯರಿಗೆ ಸಮಸ್ಯೆ ತಪ್ಪಿದ್ದಲ್ಲ. ಜೊತೆಗೆ ಚಲನ್ ತೆಗೆದು ಕೊಂಡು ಕಂದಾಯ ಕಟ್ಟಲು ಹೋದರೆ ಸರ್ವರ್ ಸಮಸ್ಯೆಗಳಿಂದಾಗಿ ಸಾರ್ವಜನಿಕರು ತಮ್ಮ ದೈನಂದಿನ ಕೆಲಸಗಳನ್ನು ಬಿಟ್ಟು ಬರೀ ಕಂದಾಯ ಕಟ್ಟುವುದಕ್ಕೆ ದಿನಗಳನ್ನು ವ್ಯಯಿಸಬೇಕಾಗಿ ಬಂದಿರುವುದು ವಿಪರ್ಯಾಸವೇ ಸರಿ ಎಂದ ರೇಖಾ ಆಡಳಿತದಲ್ಲಿ ಪಾರದರ್ಶಕತೆ, ಭ್ರಷ್ಟಾಚಾರ ರಹಿತ ಸೇವೆಯನ್ನು ನೀಡುವುದಾಗಿ ಬರವಸೆಗಳನ್ನು ನೀಡಿರುವ ಸರ್ಕಾರಗಳು ಈ ವಿಚಾರಗಳಲ್ಲಿ ತಂತ್ರಜ್ಞಾನ ಬಳಸಿ ಆನ್ಲೈನ್ ಸೇವೆಯನ್ನು ಸಮರ್ಪಕ ಗೊಳಿಸಿದರೆ ನಾಗರಿಕರಿಗೆ ಕಚೇರಿಗೆ ಅಲೆದಾಡುವ ಸಮಸ್ಯೆ ತಪ್ಪುತ್ತದೆ.
ಆನ್ಲೈನ್ ಪೋರ್ಟಲ್ ಗಳಲ್ಲಿ ಜನರು ತಮ್ಮ ಅಸ್ತಿಗೆ ಸಂಬಂಧ ಪಟ್ಟ ದಾಖಲೆಗಳನ್ನು ಸ್ಥಿರಿಕರಿಸುವ ವ್ಯವಸ್ಥೆ ಸರಿಯಾಗಿ ಜಾರಿಗೆ ಬಾರದಿರುವುದು ಶೋಚನಿಯ. ಅದರಲ್ಲೂ ಅನಕ್ಷರಸ್ತ ರಾದರೆ ಅವರ ಪಾಡು ಹೇಳುವುದೇ ಬೇಡ ಎಂಬ ಪರಿಸ್ಥಿತಿ ಜನಜನಿತ. ಬರೀ ಆನ್ಲೈನ್ ವ್ಯವಸ್ಥೆ ಸಾರ್ವತ್ರೀಕರಣ ಗೊಳಿಸಿರುವ ಸರ್ಕಾರ ಅದನ್ನು ಸಮರ್ಪಕ ಜಾರಿ ಮಾಡದೇ ತಾಂತ್ರಿಕ ಕಾರಣಗಳಿಂದಾಗಿ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಜೊತೆಗೆ ಆಡಳಿತಗಾರರ, ಅಧಿಕಾರಿಗಳ, ಜನ ಸಾಮಾನ್ಯರ ಮದ್ಯೆ ಪಾರದರ್ಶಕತೆಗೆ ಸರ್ಕಾರ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ರೇಖಾ ಹೇಳಿದ್ದಾರೆ.