Q R ಕೋಡ್ ಕೂಪನ್ ಮೂಲಕ ಮತದಾರರಿಗೆ ಆಮಿಷ–ಜಿ ಲಕ್ಷ್ಮೀಪತಿ
ನವ ದೊಡ್ಡಬಳ್ಳಾಪುರ ಹೆಸರಿನಲ್ಲಿ Q R ಕೋಡ್ ಕೂಪನ್ ವಿತರಣೆ ಮೂಲಕ ಮತದಾರರ ಗೌಪ್ಯ ಮಾಹಿತಿ ಕದ್ದಿರುವ ಅನುಮಾನವಿದೆಯೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅದ್ಯಕ್ಷ ಜಿ .ಲಕ್ಷ್ಮೀಪತಿ ಗಂಭಿರ ಆರೋಪ ಮಾಡಿದ್ದಾರೆ
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಾಸಲು ಹೋಬಳಿ ಹೊಸಹಳ್ಳಿ ಗ್ರಾಮದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ದೀರಜ್ ಮುನಿರಾಜು ಪರ ಮತದಾರರಿಗೆ ಆಮಿಷ ಒಡ್ಡಲು Q R ಕೋಡ್ ಕೂಪನ್ ವಿತರಣೆ ಆರೋಪ ಹಿನ್ನೆಲೆಯಲ್ಲಿ ಹೊಸಹಳ್ಳಿ ಪೋಲಿಸ್ ಠಾಣೆಯಲ್ಲಿ ದಾಖಲಾದ ದೂರಿನ ಬಗ್ಗೆ ನಗರದ ಕಾಂಗ್ರೆಸ್ ಕಛೇರಿಯಲ್ಲಿ ನೆಡೆದ ಪತ್ರಿಕಾಗೋಷ್ಠಿಯಲ್ಲಿ ಲಕ್ಷಿಪತಿ ಮಾತನಾಡಿ ಕೂಪನ್ ವಿತರಿಸಲು ಅದಿಕ್ರುತ ಅನುಮತಿ ಪಡೆದಿಲ್ಲ.ಬಿಜೆಪಿ ಕಾರ್ಯಕರ್ತರೆನ್ನಲಾದ ಹೊರ ಜಿಲ್ಲೆಯ ಮೂವರು ವ್ಯಕ್ತಿಗಳು ಮತದಾರಿಗೆ ಆಮಿಷ ಒಡ್ಡಲು Q R ಕೋಡ್ ಕೂಪನ್ ವಿತರಿಸುತ್ತಿದ್ದರು.ಸಂದೇಹದ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೂವರನ್ನು ಹಿಡಿದು ಮದ್ಯಾಹ್ನ 2 ಘಂಟೆಗೆ ಚುನಾವಣಾ ಅಧಿಕಾರಿಗಳಿಗೆ ಒಪ್ಪಿಸಿದ್ದರು ಸಂಜೆ 4 ಘಂಟೆಯಾದರು ಅಧಿಕಾರಿಗಳು ಕ್ರಮ ಕೈಗೊಂಡಿರುವುದಿಲ್ಲ ಆರೋಪಿಗಳ ಬಗ್ಗೆ ಸೂಕ್ತ F I R ಹಾಕುವಲ್ಲಿ ಪೋಲಿಸರು ಕರ್ತವ್ಯ ಲೋಪವೆಸಗಿದ್ದಾರೆ.
ಈ ಪ್ರಕರಣದಲ್ಲಿ ಬಿ ಜೆ ಪಿ ಅಭ್ಯರ್ಥಿ ದೀರಜ್ ಮುನಿರಾಜು, ಕುರುಬರ ಹಳ್ಳಿ ಮಹೇಶ್,ಕಾಸರಗೋಡಿನ ಗೋಸಾಡ ಗ್ರಾಮದ ಮಹೇಶ್ ಹಾಗೂ ಕಾಸರಗೋಡಿನ ಮಂಗಲವಾಡಿ ಗ್ರಾಮದ ಕಿಶೋರ್ ವಿರುದ್ದ ಸ್ಟೇಷನ್ ಬೇಲ್ ನಂತಹ ಸಾಮಾನ್ಯ ಪ್ರಕರಣ ದಾಖಲಾಗಿದೆ.ಅನುಮಾನಾಸ್ಪದದ ಎರಡು ಬಸ್ಸುಗಳಲ್ಲಿ ಅನುಮತಿ ಇಲ್ಲದೆ ಪ್ರಚಾರಕ್ಕೆ ಬಳಸಿದ್ದು,ಅದನ್ನು ದೊಡ್ಡ ಬೆಳವಂಗಲ ಪೋಲಿಸ್ ಠಾಣೆಗೆ ದೂರು ನೀಡಿದ್ದರು ಸಹ ಅವರ ವಿರುದ್ಧ ಕ್ರಮ ಕೈಗಂಡಿಲ್ಲ ಕ್ರಮದ ಬಗ್ಗೆ ಪೋಲಿಸರಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದ ಲಕ್ಷ್ಮೀ ಪತಿ ಈ ಬಗ್ಗೆ ಸುದ್ದಿ ಗೋಷ್ಟಿ ನೆಡೆಸಿದ ಬಿಜೆಪಿ ಅಭ್ಯರ್ಥಿ ದೀರಜ್ ಮುನಿರಾಜುರವರು ಹೇಳಿದಂತೆ ಪ್ರಚಾರದ ವಾಹನಕ್ಕೆ ಅನುಮತಿ ಪಡೆದಿಲ್ಲ ಎಂದು ಹೇಳಿದ್ದಾರೆ.ಇದು ನೀತಿ ಸಂಹಿತೆಯ ಉಲ್ಲಂಘನೆ ಅಲ್ಲವೆ?ಎಂದರು ಬಿಜೆಪಿ ಅಭ್ಯರ್ಥಿಗೆ ಸ್ಥಳೀಯರ ಮೇಲೆ ನಂಬಿಕೆ ಇಲ್ಲದೆ ಹೊರಗಿನವರನ್ನು ಕರೆತಂದು ಕೂಪನ್ ಹಂಚಿಕೆ ಮಾಡಿಸುತ್ತಿದ್ದಾರೆ.ಇದರ ಜೊತೆಗೆ ಡಿಜಿಟಲ್ ಬಗ್ಗೆ ಕಾಂಗ್ರೆಸ್ ನವರಿಗೆ ಜ್ಞಾನವಿಲ್ಲವೆಂದು ಮಾತನಾಡಿದ್ದಾರೆ.ನಿಜ ಗ್ರಾಮಾಂತರ ಬಾಗದ ರೈತಾಪಿ ಜನಕ್ಕೆ ಡಿಜಿಟಲ್ ಬಗ್ಗೆ ಹೇಗೆ ಗೊತ್ತಾಗಬೇಕು ವಿದೇಶದಿಂದ ಬಂದ ದೀರಜ್ ಮುನಿರಾಜು ರವರಿಗೆ ಈ ಬಗ್ಗೆ ಅರಿವಿಲ್ಲವೆ:ಈ ಪ್ರಕರಣದ ಬಗ್ಗೆ ಕಾಂಗ್ರೆಸ್ ಪಕ್ಷ ಕಾನೂನು ಹೋರಾಟ ನೆಡೆಸಲಿದೆಯೆಂದು ಲಕ್ಷ್ಮೀ ಪತಿ ಹೇಳಿದ್ದಾರೆ
ಸುದ್ದಗೋಷ್ಟಿಯಲ್ಲಿ ದೊಡ್ಡಬಳ್ಳಾಪುರ ಕಾಂಗ್ರೆಸ್ ತಾಲ್ಲೂಕು ಅದ್ಯಕ್ಷ ಭೈರೇಗೌಡ,ನಗರಾದ್ಯಕ್ಷ ಕೆ ಪಿ ಜಗನ್ನಾಥ್,ಕೆ ಪಿ ಸಿ ಸಿ ಸದಸ್ಯ ಹೇಮಂತರಾಜು ಸೇವಾದಳ ಜಿಲ್ಲಾದ್ಯಕ್ಷ ಕಾಂತರಾಜು ಮುಂತಾದವರು ಹಾಜರಿದ್ದರು.