ಜಿಲ್ಲಾಧಿಕಾರಿಗಳಿಂದ ಸಾರ್ವಜನಿಕ ಸಭೆ

ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮಕ್ಕೆ ಹೊಂದಿಕೊಂಡಿರುವಂತ ಬ್ರಾಹ್ಮಿ ರೆಸಾರ್ಟ್ ಪಕ್ಕದಲ್ಲಿ ಮಾನ್ಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರಿಸರ ಸಾರ್ವಜನಿಕ ಸಭೆಯನ್ನು ನಡೆಸಲಾಯಿತು ಈ ಸಂದರ್ಭದಲ್ಲಿ ಕೆಐಎಡಿಬಿ ಇಂಜಿನಿಯರ್ ನಾಗರಾಜ್ ಮಾತನಾಡಿ ಪ್ರಸ್ತುತ ಈ ಭಾಗದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಪರಿಸರ ಹಾನಿಯಾಗದಂತೆ ಕೆಐಎಡಿಬಿ ತೆಗೆದುಕೊಂಡಿರುವ ಕಾರ್ಯಗಳನ್ನು ತಿಳಿಸಿ ಹೇಳಿದರು. ನಂತರ ಸಾರ್ವಜನಿಕರಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಹೇಳಲಿಕ್ಕೆ ಅವಕಾಶ ಮಾಡಿಕೊಟ್ಟರು. ಆ ಸಂದರ್ಭದಲ್ಲಿ ದೊಡ್ಡಬಳ್ಳಾಪುರದ ಸಾರ್ವಜನಿಕರಾದ ವಿಜಯಕುಮಾರ್ ಮಾತನಾಡಿ ಕೆಲವು ಸರಕಾರಿ ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಮತ್ತು ಕೊನಘಟ್ಟ ಸೊಣಪ್ಪನಹಳ್ಳಿ ದೊಡ್ಡಬಳ್ಳಾಪುರ ನಗರ ಹಾಗೂ ಸುತ್ತಮುತ್ತಲಿನ ಬಹಳಷ್ಟು ಸಾರ್ವಜನಿಕರು ಮಾತನಾಡಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಸಮಸ್ಯೆಗಳ ಅರಿವು ಮೂಡಿಸಲು ಪ್ರಯತ್ನಿಸಿದರು. ಮತ್ತು ಪರಿಸರವಾದಿ ಚಿದಾನಂದ್ ಹಾಗೂ ಅವರ ಗೆಳೆಯ ಗಿರೀಶ್ ಅಧಿಕಾರಿಗಳ ನಿರ್ಲಕ್ಷತೆಯ ವಿಚಾರದಿಂದ ಇದುವರೆಗೂ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ಪ್ರಸ್ತುತ ಸಮಸ್ಯೆಗಳನ್ನು ತಂದಿದ್ದರೂ ಯಾವುದೇ ರೀತಿಯಲ್ಲಿ ಪ್ರತಿಫಲ ಸಿಗದ ಕಾರಣ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಅಲ್ಲಿಗೆ ಬಂದಿದ್ದ ಅಧಿಕಾರಿಗಳ ಕಾರ್ಯ ಪ್ರವೃತ್ತಿಯನ್ನು ವಿರೋಧಿಸಿ ಬಾಯಿಗೆ ಬಿಳಿ ಬಟ್ಟೆ ಕಟ್ಟಿಕೊಂಡು ಪೋಸ್ಟರ್ ಹಿಡಿದು ಮೌನ ಪ್ರತಿಭಟನೆಯನ್ನು ನಡೆಸಿದರು. ಕೊನೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಯವರಾದ ಬಸವರಾಜ್ ರವರು ಮಾತನಾಡಿ ಎಲ್ಲಾ ಸಾಧನೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ್ದೇನೆ. ಆದಷ್ಟು ಬೇಗ ಇದನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಸಾರ್ವಜನಿಕರಿಗೆ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಪರಿಸರ ಅಧಿಕಾರಿ ಅನಿಲ್ ಕುಮಾರ್ ಸೇರಿದಂತೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿವರಾದ ನರಸಿಂಹಮೂರ್ತಿ ಉಮಾಶಂಕರ್ ದೊಡ್ಡಬಳ್ಳಾಪುರ ಗ್ರಾಮಾಂತರ ಟಾಣೆಯ ಆರಕ್ಷಕ ನಿರೀಕ್ಷಕರಾದ ಸಾಧಿಕ್ ಪಾಷ, ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖಂಡರು ಕೆ ಐ ಎ ಡಿ ಬಿ ಮುಖಂಡರು ಸ್ಥಳೀಯ ಸುತ್ತಮುತ್ತಲಿನ ರೈತ ಮುಖಂಡರು ಹಾಗೂ ಸಾರ್ವಜನಿಕರು ಈ ಸಂದರ್ಭದಲ್ಲಿ ಹಾಜರಿದ್ದರು