ಬ್ಲೂಮ್ ಟೆಕ್ನೋ ಶಾಲೆ ವತಿಯಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ

ದೊಡ್ಡಬಳ್ಳಾಪುರ:ನಗರಸಭಾ ವ್ಯಾಪ್ತಿಯ ಶ್ರೀನಗರ 7ನೇ ವಾರ್ಡ್ ಬ್ಲೂಮ್ ಟೆಕ್ನೋ ಸ್ಕೂಲ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿ ಸಲಾಗಿತ್ತು.

ನಗರಸಭಾ ಉಪಾಧ್ಯಕ್ಷ ಎಂ ಮಲ್ಲೇಶ ರವರಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಉತ್ತಮ ಆರೋಗ್ಯಕ್ಕಾಗಿ ಆಹಾರ ನಿದ್ರೆ ವ್ಯಾಯಮಗಳನ್ನು ಒಳಗೊಂಡಂತೆ ಜೀವನಶೈಲಿಯ ಅಭ್ಯಾಸಗಳು ನಮ್ಮ ದೇಹದ ಮಾದರಿಯನ್ನು ಬದಲಾವಣೆ ಮಾಡುತ್ತವೆ
ದೇಹವನ್ನು ದಂಡಿಸಿ ದೇಹದಲ್ಲಿನ ಬೆವರು ಹರಿಸಿದರೆ ಆರೋಗ್ಯಕರ ಜೀವನ ನಡೆಸಬಹುದು ಎಂದರು.

ಈ ಕಾರ್ಯಕ್ರಮದಲ್ಲಿ ಹಾಗೂ ನಗರಸಭೆ ಸದಸ್ಯ ಜಿ ನಾಗರಾಜ್ ಹಾಗೂ ಮುಖಂಡ ಶ್ರೀನಗರ ಮೂರ್ತಿಯವರು ಹಾಗೂ ಸ್ಕೂಲಿನ ಮಾಲೀಕರಾದಂತ ಶ್ರೀನಿವಾಸ ಬ್ಲೂಮ್ ಟೆಕ್ನೋ ಸ್ಕೂಲ್ ಸಿಬ್ಬಂದಿ ಆಸ್ಪತ್ರೆಯ ಸಿಬ್ಬಂದಿ ಹಾಗು ಸಾರ್ವಜನಿಕರು ಹಾಜರಿದ್ದರು.