ಕಾಂಗ್ರೆಸ್ ಗೆ ಸೋಲಿನ ಬೀತಿ:ದೀರಜ್
ದೊಡ್ಡಬಳ್ಳಾಪುರ: ಬಿ ಜೆ ಪಿ ಯ ನಿಷ್ಠಾವಂತ,ಸಕ್ರಿಯ ಕಾರ್ಯಕರ್ತರ ಕಾರ್ಯ ವೈಖರಿಗೆ ಕಾಂಗ್ರೆಸ್ ಹಾಗೂ ಜೆ ಡಿ ಎಸ್ ಪಕ್ಷಗಳು ಸೋಲಿನ ಭೀತಿಯಿಂದ ಬಿ ಜೆ ಪಿಯ ಬಗ್ಗೆ ಅಪಪ್ರಚಾರ ಮಾಡುತ್ತಿವೆ ಎಂದು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿ ದೀರಜ್ ಮುನಿರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಪಕ್ಷದಿಂದ ಗುರುವಾರ ನೆಡೆದ ಪತ್ರಿಕಾಗೋಷ್ಠಿಯಲ್ಲಿ ದೀರಜ್ ಮುನಿರಾಜು ಮಾತನಾಡಿ ತಂತ್ರಜ್ಞಾನ ದ ಮೂಲಕ ಮತದಾರರ ಮಾಹಿತಿ ಪಡೆಯಲು ವಿತರಿಸಲಾಗಿದ್ದ QR ಕೋಡ್ ಕೂಪನ್ ಬಗ್ಗೆ ಕಾಂಗ್ರೆಸ್, ದಳ ಪಕ್ಷಗಳು ವಿನಾ ಕಾರಣ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿವೆ.
ಹೊರ ಜಿಲ್ಲೆಗಳಿಂದ ಬಂದ ಬಿ ಜೆ ಪಿ ಸಕ್ರಿಯ ಕಾರ್ಯಕರ್ತರು Q R ಕೋಡ್ ಕೂಪನ್ ಹಂಚಲು ಬಂದಿದ್ದು ನಿಜ,ಆದರೆ Q R ಕೋಡ್ ಕೋಪನ್ ನಿಂದ ಆದುನಿಕ ತಂತ್ರಜ್ಞಾನ ಬಳಸಿಕೊಂಡು ಮತದಾರರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಮುಟ್ಟಲಾಗುತ್ತಿದೆ. ಇದು ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿದೆ,ಇದನ್ನೇ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಳಸಲಾಗುತ್ತಿದೆ.ಇದರ ಬಗ್ಗೆ ಅರಿವಿರದ ಕಾಂಗ್ರೆಸ್ ಹಾಗೂ ದಳದವರು ಬಿ ಜೆ ಪಿ ಚುನಾವಣೆಯಲ್ಲಿ ಅಕ್ರಮ ನೆಡೆಸುತ್ತಿದ್ದಾರೆಂದು ಚುನಾವಣಾ ಆಯೋಗಕ್ಕೆ ದೂರು ನೀಡಿರುವುದು ಹಾಸ್ಯಾಸ್ಪದ ಎಂದ ದೀರಜ್ ವಿಪಕ್ಷಗಳಿಗೆ ಮತದಾರರನ್ನು ಓಲೈಸಲು ಬೇರೆ ವಿಚಾರಗಳಿಲ್ಲ.
ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಭಜರಂಗದಳದ ನಿಷೇಧದ ಬಗ್ಗೆ ರಾಜ್ಯಾದ್ಯಂತ ಕಾಂಗ್ರೆಸ್ ಬಗ್ಗೆ ಉಂಟಾದ ವಿರೋಧವನ್ನು ಮರೆ ಮಾಚಲು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ QR ಕೂಪನ್ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸಿ ದೊಡ್ಡಬಳ್ಳಾಪುರ ಕ್ಷೇತ್ರದ ಮತದಾರರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಈ ಬಗ್ಗೆ ನಾವು ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆಂದು ದೀರಜ್ ಹೇಳಿದ್ದಾರೆ.
ಕೆ ಎಂ ಹನುಮಂತರಾಯಪ್ಪ ಟಿ ವಿ ಲಕ್ಷ್ಮೀ ನಾರಾಯಣ್ , ಬಿ ಸಿ ಆನಂದ್ ಅಶ್ವಥ್ ನಾರಾಯಣ್ ಪುಷ್ಪ ಶಿವಶಂಕರ್ ನಾಗೇಶ್ ,ಮುದ್ದಪ್ಪ,ಬಂತಿ ವೆಂಕಟೇಶ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.