ಸೂರ್ಯ ಪದವಿ ಪೂರ್ವ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ಸಾಲಿನ ಮುಕ್ತಾಯ ಸಮಾರಂಭ
ದೊಡ್ಡಬಳ್ಳಾಪುರ:2024-25 ಶೈಕ್ಷಣಿಕ ಸಾಲಿನ ಮುಕ್ತಾಯ ಸಮಾರಂಭ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆ ಉಪಾಧ್ಯಕ್ಷ ಎಂ ಮಲ್ಲೇಶ್ ವಿದ್ಯಾರ್ಥಿ ಜೀವನದ ಸಂತೋಷ ದಿನಗಳನ್ನು ಮೆಲುಕು ಹಾಕಿದರು ನಾನು ಪ್ರಥಮ ಪಿಯುಸಿ ವರೆಗೆ ಓದಿ ಕಾರಣಾಂತರಗಳಿಂದ ದ್ವಿತೀಯ ಪಿಯುಸಿ ಮುಂದುವರೆಸಲು ಸಾಧ್ಯವಾಗಲಿಲ್ಲ ಅದುದರಿಂದ ನಾನು ಶೈಕ್ಷಣಿಕವಾಗಿ ಮುಂದುವರೆಯಲು ಸಾದ್ಯವಾಗಲಿಲ್ಲ ಆದರೆ ಈಗಿನ ಪರಿಸ್ಥಿತಿ ಹಾಗಿಲ್ಲ ಇಂದು ವಿದ್ಯಾರ್ಥಿಗಳಿಗೆ ಎಲ್ಲಾ ಅವಕಾಶಗಳು ಸೌಲಭ್ಯಗಳು ದೊರೆಯುತ್ತಿವೆ ಆದರೆ ಇಂದಿನ ವಿದ್ಯಾರ್ಥಿಗಳು ಶಿಕ್ಷಣದ ಕಡೆ ಗಮನ ಕೊಡದೆ ಇತರ ಚಟುವಟಿಕೆಗಳ ಹೆಚ್ಚು ಆಸಕ್ತಿ ವಯಸುತ್ತಿರುವುದು ದುರದೃಷ್ಟಕರ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸುಜ್ಞಾನ ದೀಪಿಕಾ ಸಂಸ್ಥೆಯ ಮುಖ್ಯಸ್ಥರಾದ ಎಂ ಎಸ್ ಮಂಜುನಾಥ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ ಹೆಚ್ ಜಿ ವಿಜಯಕುಮಾರ್ ರವರು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಮುಗಿಸಿ ಮುಂದಿನ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಿದರೆ ನಿಮ್ಮ ಭವಿಷ್ಯ ಉಜ್ವಲ ವಾಗಿರುತ್ತದೆ ನಿಮ್ಮ ಆಯ್ಕೆ ಉತ್ತಮವಾಗಿರಲಿ ನಿವು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಹೊದರೆ ನಿಮ್ಮ ಪೋಷಕರಿಗೆ ಗುರುಗಳಿಗೆ ಹೆಚ್ಚು ಸಂತೋಷವಾಗುತ್ತದೆ ಎಂದು ಹೇಳಿದರು. ಪ್ರಾಂಶುಪಾಲ ಎಂ ಸಿ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿ ಜೀವನ ಬಹಳ ಸುಂದರವಾಗಿರುತ್ತದೆ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹೇಳಿದರು. ಪತ್ರಿಕಾವರದಿಗಾರರು ಆದ ಎನ್ ಜೆ ಕೃಷ್ಣಪ್ರಸಾದ್ ಮಾತನಾಡಿದರು ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪುನೀತ್ ಟಿ ಉಮ್ಮೆಮುಸ್ಕಾನ್ ಕೆ ವಿ ಸೌಮ್ಯಶ್ರಿ ಪಲ್ಲವಿ ಮೋಹನ್ ಕುಮಾರ್ ಜಿತೇಂದ್ರ ನೇತ್ರಾವತಿ ಶಾರದಾ ಮಿಥುನ್ ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು