ತಹಶೀಲ್ದಾರವರ ನಕಲಿ ಸಹಿ ಮಾಡಿ 59ಲಕ್ಷ ಲಪಟಾಯಿಸಿದ ಆರೋಪ– ಸಾಸಲು ಆರ್. ಐ. ಬಂಧನ
ದೊಡ್ಡಬಳ್ಳಾಪುರ:ತಹಶೀಲ್ದಾರ್ ಹೆಸರಿನ ನಕಲಿ ಸಹಿ ಬಳಸಿ ಮುಜರಾಯಿ ಇಲಾಖೆಯ ಸುಮಾರು 59 ಲಕ್ಷಕ್ಕೂ ಹೆಚ್ಚು ಹಣವನ್ನು ಲಪಟಾಯಿಸಿರುವ ಅರೋಪದ ಅಡಿ ಸಾಸಲು ಹೋಬಳಿಯ ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕ ಹೇಮಂತ್ ಕುಮಾರ್ ಅವರನ್ನು ಬಂಧಿಸಲಾಗಿದೆ.
ಅರೋಪಿ ಹೇಮಂತ್ ಕುಮಾರ ರವರನ್ನು ದೊಡ್ಡಬಳ್ಳಾಪುರ ನಗರ ಠಾಣೆ ಇನ್ಸ್ ಪೆಕ್ಟರ್ ಅಮರೇಶ್ ಗೌಡ ನೇತೃತ್ವದ ಪೊಲೀಸರು ಬಂಧಿಸಿ, ನ್ಯಾಯಾಲಯದ ಅನುಮತಿ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಮುಜರಾಯಿ ಇಲಾಖೆ ಎಫ್‌ಡಿಎ ಕರ್ತವ್ಯದಿಂದ ಸಾಸಲು ಹೋಬಳಿ.ಕಂದಾಯ ನಿರೀಕ್ಷಕ ಆಗಿ ವರ್ಗಾವಣೆ ಮಾಡಲಾಗಿತ್ತು
ಹೇಮಂತ್ ಕುಮಾರ್ ಅವರು ದಾಖಲೆಗಳನ್ನು ನೀಡುವ ವೇಳೆ ಚೆಕ್‌ಬುಕ್‌ಗಳನ್ನು ನೀಡದೆ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.
ಬಳಿಕ ಹಲವು ಕಂತುಗಳಲ್ಲಿ ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್ ಅವರ ನಕಲಿ ಸಹಿ ಬಳಸಿ ಸುಮಾರು 59 ಲಕ್ಷ ರೂ.ಗಳನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ನಡೆಸಲಾಗಿದೆ.
ಇತ್ತೀಚೆಗೆ ದಾಖಲೆ ಪರಿಶೀಲನೆ ವೇಳೆ ಖಾತೆಯಲ್ಲಿ ಒಂದು ರೂ. ಮಾತ್ರ ಉಳಿದಿದ್ದು, ತನಿಖೆ ನಡೆಸಿದಾಗ ಈ ಕೃತ್ಯ ಬಯಲಾಗಿದೆ.
ಚೆಕ್‌ಬುಕ್ ಮೂಲಕ ಹಣ ಲಪಟಾಯಿಸಿರುವ
ದೂರಿನನ್ವಯ ಹೇಮಂತ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.