ಗ್ರಂಥಾಲಯ ಉದ್ಘಾಟನೆಗೆ ಬರದೆ ಶಾಸಕರ ನಿರ್ಲಕ್ಷ್ಯತೆ ಖಂಡಿಸಿ ವೀರಭಧ್ರನಪಾಳ್ಯದ ನಿವಾಸಿಗಳಿಂದ ಪ್ರತಿಭಟನೆ

ದೊಡ್ಡಬಳ್ಳಾಪುರ : ದಲಿತರ ಕಾಲೋನಿಯಲ್ಲಿನ ಉದ್ಘಾಟನೆಗೆ ಬರುವುದಾಗಿ ಹೇಳಿದ್ದ  ಶಾಸಕರು ಏಕಾಏಕಿ ಕಾರ್ಯಕ್ರಮ ರದ್ದು ಮಾಡಿದ್ದಾರೆ, ತಮ್ಮನ ಮದುವೆ ಅಹ್ವಾನ ಪತ್ರಿಕೆ ಹಂಚುವ ಕಾರಣಕ್ಕೆ ಗ್ರಂಥಾಲಯ ಉದ್ಘಾಟನೆಗೆ ಶಾಸಕರು ಬರದೆ ಅಂಬೇಡ್ಕರ್ ರವರಿಗೆ ಅಗೌರವ ತೋರಿಸಿದ್ದಾರೆಂದು ವೀರಭಧ್ರನಪಾಳ್ಯದ ನಿವಾಸಿಗಳು  ಪತ್ರಿಭಟನೆ ನಡೆಸಿದರು.
ದೊಡ್ಡಬಳ್ಳಾಪುರ ನಗರದ 12ನೇ ವಾರ್ಡ್ ನ ವೀರಭಧ್ರನಪಾಳ್ಯದಲ್ಲಿ ನೂತನವಾಗಿ ಗ್ರಂಥಾಲಯ ನಿರ್ಮಾಣ ಮಾಡಲಾಗಿದ್ದು, ಸ್ಥಳೀಯ ಯುವಕರು ಸಹಾಯ ಧನದಿಂದ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಲಾಗಿದೆ, ಗಣರಾಜ್ಯೋತ್ಸವ ಹಿನ್ನಲೆ ಇಂದು ಗ್ರಂಥಾಲಯ ಉದ್ಘಾಟನೆಗೆ ಸ್ಥಳೀಯ ಯುವಕರು ಸಿದ್ಧತೆ ನಡೆಸಿದ್ದರು, ಕಾರ್ಯಕ್ರಮಕ್ಕೆ ಶಾಸಕರಾದ ಧೀರಜ್ ಮುನಿರಾಜುರವರಿಗೆ ಅಹ್ವಾನ ನೀಡಲಾಗಿತ್ತು, ಶಾಸಕರು ಕಾರ್ಯಕ್ರಮಕ್ಕೆ ಬರವುದಾಗಿ ಭರವಸೆ ನೀಡಿದ್ದರು. ಶಾಸಕರ ಮಾತಿನ ನಂಬಿಕೆ ಮೇಲೆ ಯುವಕರು ಗ್ರಂಥಾಲಯ ಉದ್ಘಾಟನೆಗೆ ಸಿದ್ಧತೆ ನಡೆಸಿದ್ದರು, ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆಗೆ ಸಮಯ ನಿಗದಿ ಮಾಡಲಾಗಿತ್ತು, ಬೆಳಗ್ಗೆ ಶಾಸಕರ ಸಿಬ್ಬಂದಿಗೆ ಪೊನ್ ಮಾಡಿದಾಗ ಶಾಸಕರು ಸಹೋದರನ ಮದುವೆ ಅಹ್ವಾನ ಪತ್ರಿಕೆ ಹಂಚುವ ಸಲುವಾಗಿ ಹೊರಗೆ ಹೋಗಿದ್ದು ಕಾರ್ಯಕ್ರಮಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಇದು ಸ್ಥಳೀಯ ಯುವಕರ ಅಕ್ರೋಶಕ್ಕೆ ಕಾರಣವಾಗಿದೆ.
ಶಾಸಕರ ನಿರ್ಲಕ್ಷ್ಯತೆಯ ವಿರುದ್ಧ  ಅಕ್ರೋಶಗೊಂಡ ಸ್ಥಳೀಯ ಯುವಕರು ಗ್ರಂಥಾಲಯ ಕಟ್ಟಡದ ಮುಂದೆ ಪ್ರತಿಭಟನೆ ನಡೆಸಿದರು, ಇದೇ ವೇಳೆ ಮಾತನಾಡಿದ ಸ್ಥಳೀಯ ಯುವಕರಾದ ವಿಜಯಕುಮಾರ್, ಶಾಸಕರು ಸಂವಿಧಾನ ವಿರೋಧಿಯಾಗಿದ್ದು, ದಲಿತರ ಕಾಲೊನಿಯಲ್ಲಿನ ಗ್ರಂಥಾಲಯ ಎಂಬ ಕಾರಣಕ್ಕೆ ಉದಾಸೀನತೆ ತೋರಿದ್ದಾರೆ, ಗ್ರಂಥಾಲಯ ಅಧಿಕಾರಿ ಸರೋಜಮ್ಮನವರಿಗೆ ಧಮ್ಕಿ ಹಾಕಿ ಗ್ರಂಥಾಲಯ ಕಟ್ಟಡಕ್ಕೆ ಬೀಗ ಹಾಕಿ ಕೊಂಡು ಹೋಗುವಂತೆ ಹೇಳಿದ್ದಾರೆ, ಇಂದು ಗಣರಾಜ್ಯೋತ್ಸವ ಹಿನ್ನಲೆ ಒಳ್ಳೇಯ ದಿನವಾದ ಕಾರಣಕ್ಕೆ ಗ್ರಂಥಾಲಯ ಉದ್ಘಾಟನೆಗಾಗಿ ಪೆಂಡಾಲ್ ಸೇರಿದಂತೆ ಅಲಂಕಾರಕ್ಕಾಗಿ ಹಣ ಖರ್ಚು ಮಾಡಲಾಗಿತ್ತು, ಇವತ್ತು ಶಾಸಕರು ಸಹೋದರನ ಮದುವೆ ಅಹ್ವಾನ ಪತ್ರಿಕೆ ಹಂಚುವ ಕಾರಣಕ್ಕೆ ಕಾರ್ಯಕ್ರಮಕ್ಕೆ ಬರದೆ ಉದಾಸೀನತೆ ತೋರಿದ್ದಾರೆ, ಮಧ್ಯಾಹ್ನದೊಳಗೆ ಬರದೆ ಇದ್ದರೆ ನಾವೇ ಬಾಗಿಲ ಬೀಗ ಹೊಡೆದು ಗ್ರಂಥಾಲಯ ಉದ್ಘಾಟನೆ ಮಾಡುವ ಎಚ್ಚರಿಕೆ ನೀಡಿದರು.
ಈ ವೇಳೆ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಸದಸ್ಯರಾದ ಅಂಜನಮೂರ್ತಿ, ಸ್ಥಳೀಯ ಯವಕರಾದ ಸಂತೋಷ, ರಮೇಶ್, ಹರೀಶ್.ವೈ ಎನ್, ನಂದೀಶ್,  ಮಂಜುನಾಥ್, ಚಂದ್ರು, ಮುನಿರಾಜು,  ಶಿವು, ಮುರುಳಿ, ನವೀನ್ ಮುಂತಾದವರು ಇದ್ದರು.