ಹಣಬೆ ವಿ. ಎಸ್. ಎಸ್. ಎನ್. ಕಾಂಗ್ರೆಸ್ ಮೇಲುಗೈ
ದೊಡ್ಡಬಳ್ಳಾಪುರ:ಹಣಬೆ ವಿವಿದೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ 2025ರಿಂದ 2030ರ ಅವಧಿಯ ಆಡಳಿತ ಮಂಡಳಿಗೆ ದಿ 25.1.2025ರಂದು ನಡೆದ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದ ಹನ್ನೊಂದು ಸ್ಥಾನಗಳಿಗೆ ಸಾಮಾನ್ಯ ವರ್ಗದಿಂದ ಕೆ. ಎಸ್. ರವಿಕುಮಾರ್, ಜಯಣ್ಣ, ಜೆ. ಸಿ. ಮೂರ್ತಿ, ಹೆಚ್. ಎನ್. ಅಶೋಕ್, ಬೈರೇಗೌಡ,ಹಿಂದುಳಿದ ಎ. ವರ್ಗದಿಂದ ಹೆಚ್. ಎಸ್. ಕೆಂಪೇಗೌಡ
ಹಿಂದುಳಿದ ಬಿ. ವರ್ಗದಿಂದ ಹೆಚ್. ಬಿ. ಕೀರ್ತಿ
ಪರಿಶಿಷ್ಟ ಜಾತಿ ಮೀಸಲು ಸ್ಥಾನ ಕ್ಕೆ ಸುಬ್ಬಣ್ಣ
ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ರಾಜಣ್ಣ
ಮಹಿಳಾ ಮೀಸಲು ಸ್ಥಾನಕ್ಕೆ ಚೈತ್ರ, ಗೌರಮ್ಮ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ನಾಗಮಣಿ ಕೆ. ಎನ್. ರವರು ಘೋಷಿಸಿದ್ದಾರೆ.
ಹನ್ನೊಂದು ಸ್ಥಾನಗಳ ಪೈಕಿ ಹತ್ತು ಸ್ಥಾನಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದು ಉಳಿದ ಒಂದು ಸ್ಥಾನ ಇತರರ ಪಾಲಾಗಿ ಹಣಬೆ ವಿ. ಎಸ್. ಎಸ್. ಎನ್.ಕಾಂಗ್ರೆಸ್ ಬೆಂಬಲಿತರ ಪಾಲಾಗಿದೆ. ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ ಮಾತನಾಡಿ ಈ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಹತ್ತು ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ಅಭೂತ ಪೂರ್ವ ಬೆಂಬಲ ನೀಡಿದ್ದಾರೆ. ಈ ಗೆಲುವು ಮಾಜಿ ಶಾಸಕರಾದ ಆರ್. ಜಿ. ವೆಂಕಟಾಚಲಯ್ಯ ನವರ ಗೆಲುವಾಗಿದ್ದು, ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದ ವಿರೋಧ ಪಕ್ಷಗಳಿಗೆ ಈ ಚುನಾವಣೆಯಿಂದ ಸೂಕ್ತ ಉತ್ತರ ಸಿಕ್ಕಂತಾಗಿದೆ ಎಂದರು. ವಿಜೇತ ಅಭ್ಯರ್ಥಿ ಕೆ. ಎಸ್. ರವಿಕುಮಾರ್ ಮಾತನಾಡಿ ಈ ಚುನಾವಣೆಯ ಅಭೂತ ಪೂರ್ವ ಗೆಲುವಿನಿಂದ ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಸಂಘಟಿಸುವುದರ ಜೊತೆಗೆ ಸಮಗ್ರ ಜನಪರವಾದ ಕೆಲಸ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಹೇಳಿದರು. ನೂತನವಾಗಿ ಆಯ್ಕೆಯಾದ ನಿರ್ದೇಶಕರನ್ನು ತಾಲೂಕಿನ ಹಲವಾರು ಮುಖಂಡರು ಅಭಿನಂದಿಸಿದ್ದಾರೆ.