ಜಂಟಿ ಮತಬೇಟೆಗೆ ಚಾಲನೆ: ಜೆಡಿಎಸ್ ಅಭ್ಯರ್ಥಿ ಕರೆಮ್ಮ ಜಿ ನಾಯಕ ಪರ ಸಿಪಿಐಎಂ ಮತಬೇಟೆ

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ವಾಲ್ಮೀಕಿ ಸರ್ಕಲ್ ಬಳಿ ಜೆಡಿಎಸ್, ಸಿಪಿಐಎಂ ಪಕ್ಷದ ಮುಖಂಡರು ಜಂಟಿ ಮತಬೇಟಿಗೆ ರವಿವಾರ ಚಾಲನೆ ನೀಡಿದರು,

2023ರ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇವದುರ್ಗ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಜಿ ನಾಯಕ ಅವರ ಪರ ಭಾರತ ಕಮ್ಯುನಿಸ್ಟ್ ಮಾರ್ಕ್ ವಾದ (ಸಿಪಿಐಎಂ) ಪಕ್ಷದ ತಾಲೂಕು ಕಾರ್ಯದರ್ಶಿ ನರಸಣ್ಣ ನಾಯಕ, ಗಿರಿಯಪ್ಪ ಪೂಜಾರಿ, ನೇತೃತ್ವದಲ್ಲಿ ಸಿಪಿಐಎಂ ಮುಖಂಡರು ಹಾಗೂ ಜೆಡಿಎಸ್ ಮುಖಂಡರಾದ ವಿಠೋಬ ನಾಯಕ, ಗೋವಿಂದಪ್ಪ ತಿಂಪುರು, ವೆಂಕನಗೌಡ, ಹುಸೇನಪ್ಪ ಗುತ್ತೇದಾರ್ ನೇತೃತ್ವದಲ್ಲಿ ಮನೆ ಮನೆಗೆ ಭೇಟಿ ನೀಡಿ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಜಿ ನಾಯಕ ಅವರಿಗೆ ಮತ ಹಾಕಿ ಅಂತ ಹೇಳಿದ್ರು,

ಇದೆ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ರಂಗಪ್ಪ ಬಂಡಿ, ಗುರುಗೌಡ, ರಂಗಣ್ಣ ದೊರೆ ಯರಕಮಟ್ಟಿ, ದುರಗಪ್ಪ ಕಾವಲಿ,ಬುಡನಸಾಬ್, ರಾಚಯ್ಯ ಸ್ವಾಮಿ, ಗುರು ತೋಟದ, ತಿಮ್ಮಣ್ಣ ಗ್ಯಾರೇಜ್, ರಾಜು,ಮದು, ಮಲ್ಲು ಚಿಂತಲಕುಂಟಿ ಸಿಪಿಐಎಂ ಮುಖಂಡರಾದ ಶಬ್ಬೀರ್ ಜಾಲಹಳ್ಳಿ, ಮೌನೇಶ್ ದಾಸರ, ದುರಗಪ್ಪ ವರಟಿ, ರಾಜು ನಾಯಕ, ಮುಕ್ತಂ ಷಾಷ, ರಿಯಾಜ್ ಆರ್ತಿ, ಅಮೀರ್ ಪಾಟೀಲ್, ಆರೀಫ್ ಆರ್ತಿ, ರಿಯಾಜ್ ಖುರ್ಷಿ, ಮತ್ತು ಇತರರು ಇದ್ದರು