ನಾಳೆ ಡಿ ಕೆ ಶಿವಕುಮಾರ್ ರವರಿಂದ ರೋಡ್ ಶೋ

ದೊಡ್ಡಬಳ್ಳಾಪುರ ವಿಧಾನಸಭಾ ಚುನಾವಣಾ ಅಂಗವಾಗಿ ದೊಡ್ಡಬಳ್ಳಾಪುರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಟಿ ವೆಂಕಟರಮಣಯ್ಯ ಪರವಾಗಿ ನಗರದಲ್ಲಿ ದಿನಾಂಕ 2/5/2023ರ ಮಂಗಳವಾರದಂದು ರೋಡ್ ಶೋ ಮುಖಾಂತರ ಕೆ ಪಿ ಸಿ ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಾರ್ಯಾದ್ಯಕ್ಷ ಸಲೀಂ ಅಹಮದ್ ಮತಯಾಚನೆ ಮಾಡಲಿದ್ದಾರೆ
ನಾಳೆ ಸಂಜೆ 5ಘಂಟೆಗೆ ನಗರದ ಡಾ: ರಾಜ್‌ಕಮಾರ್  ವೃತ್ತದಿಂದ ಆರಂಭವಾಗುವ ರೋಡ್ ಶೋ ಹಳೇ ಬಸ್ ನಿಲ್ದಾಣದ ಮಾರ್ಗವಾಗಿ ಸೌಂದರ್ಯಮಹಲ್ ವೃತ್ತ ಚೌಕದ ಸರ್ಕಲ್ ಮುಖಾಂತರ ತಾಲ್ಲೂಕು ಕಛೇರಿ ವೃತ್ತದಲ್ಲಿ ಮುಕ್ತಾಯಗೊಳ್ಳುತ್ತದೆ ನಂತರ ಕಾರ್ಯಕರ್ತರೊಂದಿಗೆ ಮಾತನಾಡಲಿದ್ದಾರೆಂದು ಪ್ರಚಾರ ಸಮಿತಿ ಅದ್ಯಕ್ಷ ಜಿ ಲಕ್ಷ್ಮೀಪತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.