ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾದ ಜೆ ಡಿ ಎಸ್ ಪಕ್ಷಕ್ಕೆ ಕನ್ನಡ ಪಕ್ಷ ಬೆಂಬಲಿಸುವುದಾಗಿ ಕನ್ನಡ ಪಕ್ಷದ ರಾಜ್ಯ ಸಮಿತಿಯ ಸದಸ್ಯರಾದ ಸಂಜೀವ್ ನಾಯಕ್ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಜೀವ ನಾಯಕ್ ಮಾತನಾಡಿ ಕನ್ನಡ ಪಕ್ಷ ಮೊದಲಿನಿಂದಲು ಕನ್ನಡ ನಾಡು ನುಡಿ ನೆಲ ಜಲದ ಉಳಿವಿಗಾಗಿ ಹೊರಾಡಿದ ಪಕ್ಷ.ಜೊತೆಗೆ ಜ್ಯಾತ್ಯಾತೀತ ನಿಲುವಿಗೆ ಬದ್ದವಾಗಿದೆ.ಪ್ರಸ್ತುತ ರಾಜ್ಯ ಹಾಗೂ ರಾಷ್ಟ್ರದಲ್ಲಿ ಆಡಳಿತ ನೆಡೆಸಿರುವ ಬಿ ಜೆ ಪಿ ಡಬಲ್ ಇಂಜಿನ್ ಸರ್ಕಾರ ಜನವಿರೋದಿ ನೀತಿ ಅನುಸರಿಸುತ್ತಿದ್ದು ಮಿತಿ ಮೀರಿದ ಭ್ರಷ್ಟಾಚಾರ ಹಾಗು ಬೆಲೆ ಏರಿಕೆಯಿಂದಾಗಿ ರಾಜ್ಯದ ಜನಸಾಮಾನ್ಯರ ಬದುಕು ದುಸ್ತರವಾಗಿದೆ ಜೊತೆಗೆ ರಾಜ್ಯದಲ್ಲಿ ಇತ್ತೀಚಿಗೆ ಉತ್ತರದ ಹಿಂದೀವಾಲಗಳ ದಬ್ಬಾಳಿಕೆಯಿಂದಾಗಿ ಕನ್ನಡಿಗರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ಸಾಮಾನ್ಯರ ಬದುಕಿನ ಜೊತೆ ಆಟವಾಡುತ್ತಿರುವ ಭ್ರಷ್ಟ ಬಿ ಜೆ ಪಿ ಪಕ್ಷವನ್ನು ದಿಕ್ಕರಿಸುವ ಸಲುವಾಗಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಪಕ್ಷ ಜ್ಯಾತ್ಯಾತೀತ ಹಾಗು ಪ್ರಾದೇಶಿಕ ನಿಲುವಿಗೆ ಹತ್ತಿರವಾಗಿರುವ ಜ್ಯಾತ್ಯಾತೀತ ಜನತಾದಳದ ಅಭ್ಯರ್ಥಿ ಮುನೇಗೌಡರನ್ನು ಬೆಂಬಲಿಸಲಿದೆ ಎಂದು ಸಂಜೀವ್ ನಾಯಕ್ ರವರು ಹೇಳಿದ್ದಾರೆ.
ಕನ್ನಡ ಪಕ್ಷದ ಹಿರಿಯ ಮುಖುಂಡ ಡಿ.ಪಿ ಆಂಜಿನೇಯ ಮಾತನಾಡಿ ನಾಲ್ಕು ದಶಕಗಳ ಹಿನ್ನೆಲೆ ಇರುವ ಕನ್ನಡ ಪಕ್ಷ ಮೊದಲಿನಿಂದಲೂ ಬಡವರ,ದೀನ ದಲಿತರ ಪರವಾಗಿರುವ ಪಕ್ಷ.
ಇತ್ತೀಚಿನ ದಿನಗಳಲ್ಲಿ ರಾಜ್ಯದ ಜನ ಭ್ರಷ್ಟ ಬಿ ಜೆ ಪಿ ಆಡಳಿತದಿಂದಾಗಿ ಬೇಸರಗೊಂಡಿದ್ದು ಈ ಹಿನ್ನೆಲೆಯಲ್ಲಿ ಜನಸಾಮಾನ್ಯರ ನಿಲುವಿಗೆ ಬೆಂಬಲಿಸುವ ಸಲುವಾಗಿ ಹಾಗು ಕನ್ನಡ ಪಕ್ಷ ಮೊದಲಿನಿಂದಲು ಕೋಮುವಾದಿ ಪಕ್ಷಗಳ ವಿರೋಧಿಯಾಗಿದ್ದು ಅದರಲ್ಲು ಬಹು ಮುಖ್ಯವಾಗಿ ನಾಡು ನುಡಿಯ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿರುವ ಯಾವುದೇ ಪಕ್ಷ ಅಥವಾ ಸಂಘಟನೆಗಳನ್ನು ಮೂಲದಿಂದಲು ದಿಕ್ಕರಿಸಿಕೊಂಡು ಬಂದಿದೆ.ಅದರಲ್ಲು ಬಹು ಮುಖ್ಯವಾಗಿ ಸ್ಥಳೀಯ ವಿಚಾರಗಳಿಗೆ ಅನುಸಾರವಾಗಿ ತಾಲ್ಲೂಕಿನ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಂದರ್ಭಾನುಸಾರ ಕೆಲವು ಪಕ್ಷಗಳ ಜೊತೆ ಕನ್ನಡ ಪಕ್ಷ ಹೊಂದಾಣಿಕೆ ಮಾಡಿಕೊಂಡು ಬಂದಿದೆ . ಪ್ರಸ್ತುತ ಪ್ರಾದೇಶಿಕ ಚಿಂತನೆಯಲ್ಲಿರುವ ಜ್ಯಾತ್ಯಾತೀತ ಜನತಾ ದಳಕ್ಕೆ ಬೆಂಬಲಿಸುವ ಸಲುವಾಗಿ ಕನ್ನಡ ಪಕ್ಷದ ಸರ್ವ ಸಮ್ಮತದ ತೀರ್ಮಾನವಾಗಿದ್ದು ಪ್ರಸ್ತುತ ನೆಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜ್ಯಾತ್ಯಾತೀತ ಜನತಾ ದಳದ ಅಭ್ಯರ್ಥಿ ಬಿ ಮುನೇಗೌಡರಿಗೆ ಕನ್ನಡ ಪಕ್ಷ ಬೇಷರತ್ತು ಬೆಂಬಲ ಸೂಚಿಸಿದೆ ಎಂದು ಹೇಳಿದರು.
ಕನ್ನಡ ಪಕ್ಷದ ಜಿಲ್ಲಾ ಪದಾದಿಕಾರಿ ಮುನಿ ಪಾಪಯ್ಯ ತಾಲ್ಲೂಕು ಅದ್ಯಕ್ಷ ವೆಂಕಟೇಶ್ ಗೌರವಾದ್ಯಕ್ಷ ರಂಗನಾಥ್ ಮುಖುಂಡರಾದ ಕೇಬಲ್ ಮುನಿರಾಜು ಕುಮಾರ್ ಮಂಜುನಾಥ್ ಜಯರಾಮ್ ಮುನಿಸ್ವಾಮಿ ಮುಂತಾದವರು ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.