ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ಆರ್. ಮುರುಳಿಧರ್, ಉಪಾಧ್ಯಕ್ಷರಾಗಿ ಕೆ. ಹೆಚ್. ಅರಸೆಗೌಡ ಆಯ್ಕೆ

ದೊಡ್ಡಬಳ್ಳಾಪುರ:ಕೃಷಿಕ ಸಮಾಜದ ಸ್ಥಾನಗಳಿಗೆ ಚುನಾವಣೆ ನಡೆಯಿತು.ನೂತನ ಅಧ್ಯಕ್ಷ ಮುರುಳಿಧರ್.ಆರ್, ಉಪಾಧ್ಯಕ್ಷರಾಗಿ ಅರಸೇಗೌಡ.ಕೆ.ಎಚ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೃಷಿಕ ಸಮಾಜದ ಅಧ್ಯಕ್ಷ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ಆಯ್ಕೆ ಯಾದವರನ್ನು ಹೊರತುಪಡಿಸಿ ಬೇರೆಯವರು ತಮ್ಮ ನಾಮ ಪತ್ರಗಳನ್ನು ಸಲ್ಲಿಸದ ಹಿನ್ನೆಲೆ ಚುನಾವಣಾಧಿಕಾರಿ ಯಾಗಿದ್ದ ಸಹಾಯಕ ಕೃಷಿ ನಿರ್ದೇಶಕರು ಅವಿರೋಧ ಆಯ್ಕೆಯನ್ನು ಪ್ರಕಟಿಸಿದ್ದಾರೆ.
ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳ ಅವಧಿ 5 ವರ್ಷ ಗಳಾಗಿದ್ದು, 2029-30ನೇ ಸಾಲಿನಲ್ಲಿ ಇವರ ಅವಧಿ ಅಂತ್ಯ ವಾಗಲಿದೆ .

ಈ ಕುರಿತು ನೂತನ ಅಧ್ಯಕ್ಷ ಆರ್.ಮುರುಳಿಧರ್ ಮಾತನಾಡಿ ಅಧ್ಯಕ್ಷನಾಗಿ ಕೃಷಿಕ ಸಮಾಜಕ್ಕೆ ಸುಸಜ್ಜಿತ ಉತ್ತಮ ಕಟ್ಟಡ ನಿರ್ಮಾಣ ಮಾಡುವುದು ನನ್ನ ಮುಖ್ಯ ಉದ್ದೇಶ ವಾಗಿದೆ,ಈ ಕುರಿತು ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ ಅವರ ಬಳಿ ಮನವಿ ಮಾಡಲಾಗುವುದು. ಅಂತೆಯೇ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ನೇರವಾಗಿ ರೈತರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ನೂತನ ಉಪಾಧ್ಯಕ್ಷ ಅರಸೇಗೌಡ.ಕೆ.ಎಚ್ ಮಾತನಾಡಿ, ಹಿರಿಯರ ಮಾರ್ಗದರ್ಶನದಂತೆ ನಾನು ಕೆಲಸ ಮಾಡುತ್ತೇನೆ, ಅವರ ಹೆಸರಿಗೆ ಯಾವುದೇ ರೀತಿಯ ಚ್ಯುತಿ ಬಾರದಂತೆ ಕೆಲಸ ಮಾಡುವೆ, ಸ್ವತಃ ನಾನು ರೈತ ನಾಗಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವು ನನಗೆ ಇರುವುದರಿಂದ ಕೃಷಿ ಇಲಾಖೆಯಿಂದ ರೈತರಿಗೆ ಸಿಗಬೇಕಾದ ಎಲ್ಲ ಸವಲತ್ತುಗಳನ್ನು ಕೊಡಿಸುವ ಕೆಲಸ ಮಾಡುವುದಾಗಿ ಹೇಳಿದರು.

ಕಾಂಗ್ರೆಸ್ ಮುಖಂಡ ರಂಗಪ್ಪ ಮಾತನಾಡಿ, ಕೆಲವು ದುಷ್ಟ ಶಕ್ತಿಗಳು ಕೃಷಿ ಸಮಾಜಕ್ಕೆ ಚುನಾವಣೆ ಯಾಗದಂತೆ ತಡೆದಿದ್ದರು, ಈಗ ಎಲ್ಲ ಪಕ್ಷದವರನ್ನು ಹೊಂದಾಣಿಕೆ ಮಾಡಿಕೊಂಡು ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಪರಸ್ಪರ ಹೊಂದಾಣಿಕೆ ಮೂಲಕ ಅಧಿಕಾರವನ್ನು ಹಂಚಿಕೆ ಮಾಡಲಾಗಿದ್ದು, ಮುಂದಿನ ಅವಧಿಯಲ್ಲೂ ಅಧಿಕಾರ ಹಂಚಿಕೆ ಮಾಡಿಕೊಂಡು ರೈತರ ಪರವಾಗಿ ಕೆಲಸ ಮಾಡುವ ಕೆಲಸ ಮಾಡುವುದಾಗಿ ತಿಳಿಸಿದರು
ಕಾಂಗ್ರೆಸ್ ಮುಖಂಡರಾದ ಆರ್.ವಿ.ಮಹೇಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರ ಪರವಾಗಿದ್ದು, ರೈತರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳು ಜಾರಿಗೆ ಬರಲಿದ್ದು, ಅರ್ಹ ರೈತರನ್ನು ಗುರಿತಿಸಿ ಯೋಜನೆಯ ಲಾಭ ಸಿಗುವ ಪ್ರಮಾಣಿಕ ಕೆಲಸ ಮಾಡುವುದ್ದಾಗಿ ಹೇಳಿದರು.

ಅವಿರೋಧವಾಗಿ ಆಯ್ಕೆಯಾದ ದೊಡ್ಡಬಳ್ಳಾಪುರ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀನಿವಾಸ, ಎ.ರವೀಂದ್ರ, ಪಿ.ನಾಗರಾಜು, ಮಂಜುನಾಥ್, ಎಂ.ಗೋಪಾಲರೆಡ್ಡಿ, ಜಿ.ಆರ್.ಅಶೋಕ್,ಆರ್.ಕೃಷ್ಣಮೂರ್ತಿ,ಟಿ.ವಿ.ರವಿಕುಮಾರ್ ಆರ್.ಜಯರಾಮಯ್ಯ,ಕೆ.ನರಸಿಂಹಯ್ಯರವರನ್ನು ಅಭಿನಂದಿಸಲಾಯಿತು.
ಈ ವೇಳೆ ಅಧ್ಯಕ್ಷ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಜಿಲ್ಲಾ ಪಂಚಾಯತಿ ಸದಸ್ಯ ಅರವಿಂದ್, ದೇವನಹಳ್ಳಿ ರವಿ ಕುಮಾರ್, ಕಾಂಗ್ರೆಸ್ ಮುಖಂಡ ರವಿ ಸಿದ್ದಪ್ಪ, ಭೂ ಮಂಜೂರಾತಿ ಸದಸ್ಯ ಶ್ರೀಧರ್.ಜಿ.ಕೆ ಗಂಗಸಂದ್ರ , ವಕೀಲರಾದ ಆರ್ ವಿ ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.