ಗೃಹ ಸಚಿವ ಅಮಿದ್ ಶಾ ರಾಜಿನಾಮೆಗೆ ಆಗ್ರಹ–ಎಂ ರಾಜಶೇಖರ್

ಚಾಮರಾಜನಗರ:ಡಿ,26: ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆದಷ್ಟು ಬೇಗ ರಾಜೀನಾಮೆ ನೀಡಬೇಕು ಎಂದು ರಾಹುಲ್ ಗಾಂಧಿ ವಿಚಾರ ಮಂಚ್ ವತಿಯಿಂದ ಆಗ್ರಹಿಸಲಾಗುತ್ತದೆ ಎಂದು ರಾಜ್ಯಾಧ್ಯಕ್ಷ ಕೊಮಾರನಪುರ ಎಂ.ರಾಜಶೇಖರ್ ಅವರು ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಮಾತನಾಡುವಾಗ ಅಮಿತ್ ಶಾ ಅವರು ಡಾ.ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನವಾಗಿ ಮಾತನಾಡಿರುವುದು ಖಂಡನೀಯ, ಅವರು ಗೃಹ ಸಚಿವರಾಗಲು ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನದಿಂದ ಅದನ್ನು ಅವರು ಮರೆಯಬಾರದು ಅಲ್ಲದೆ ನರೇಂದ್ರಮೋದಿ ಪ್ರಧಾನಿಯಾಗುವುದಕ್ಕೂ ಸಂವಿಧಾನವೇ ಮುಖ್ಯ ಕಾರಣವಾಗಿದೆ, ಭಾರತ ದೇಶವು ಸಾಕ್ಷರತೆ ಹೋಗಲಾಡಿಸುವುದರಲ್ಲೂ ಮುಂದಿದೆ ಆದ್ದರಿಂದ ಇಂತಹ ಉನ್ನತ ಹುದ್ದೆ ಹೊಂದಿರುವ ಗೃಹ ಸಚಿವರು ತಕ್ಷಣದಿಂದಲೇ ರಾಜೀನಾಮೆ ನೀಡಿ ಎಲ್ಲರ ಸಮ್ಮುಖ ಕ್ಷಮೆ ಯಾಚಿಸಬೇಕು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಹರೀಶ್ ಬಾಬು, ಜಿಲ್ಲಾ ಸಾಮಾಜಿಕ ಜಾಲತಾಣ ಕಾರ್ಯದರ್ಶಿ ಗಣಿಗನೂರು ಚಿನ್ನಸ್ವಾಮಿ, ಯಳಂದೂರು ತಾಲೂಕು ಅಧ್ಯಕ್ಷ ಮಲಾರಪಾಳ್ಯ ಉಮೇಶ್.ಚಾಮರಾಜನಗರ ತಾಲ್ಲೂಕು ಅಧ್ಯಕ್ಷ ಅನಿಲ್ ಕುಮಾರ್ .ಇದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ