*ಆರ್.ಎಲ್.ಜಾಲಪ್ಪ 3ನೇ ಪುಣ್ಯಸ್ಮರಣೆ ಸರಳ ಆಚರಣೆ*

ದೊಡ್ಡಬಳ್ಳಾಪುರ:ಮಾಜಿ ಕೇಂದ್ರ ಸಚಿವ ದಿವಂಗತ ಆರ್.ಎಲ್.ಜಾಲಪ್ಪ ಅವರ 3ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ದೊಡ್ಡಬಳ್ಳಾಪುರದ ಆರ್‌ಎಲ್‌ಜೆಐಟಿ ಕ್ಯಾಂಪಸ್‌ನಲ್ಲಿರುವ ಸ್ಮೃತಿವನದಲ್ಲಿ ಮಂಗಳವಾರ ಸರಳವಾಗಿ ನಡೆಯಿತು. ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ಶೈಕ್ಷಣಿಕ ಘಟಕಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಜಾಲಪ್ಪ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.