ಭಾರತ ಸಂವಿಧಾನ ಸರ್ವಶ್ರೇಷ್ಠವಾದದ್ದು — ಮನೋರಖ್ಖಿತ ಬಂತೇಜಿ
ಹನೂರು: ಪಟ್ಟಣದ ಅಂಬೇಡ್ಕರ್ ಸಾರ್ವಜನಿಕ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಭೀಮ ಸೇನಾ ಕರ್ನಾಟಕ ರಾಜ್ಯ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಹನೂರು ಶಾಖೆ ವತಿಯಿಂದ 75 ನೇ ವರ್ಷದ ಸಂವಿಧಾನ ಸಮರ್ಪಿತಾ ದಿನಾಚರಣೆ ಹಾಗೂ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಮನೋರಖ್ಖಿತ ಬಂತೇಜಿ ಉದ್ಘಾಟಿಸಿ ಬಳಿಕ ಮಾತನಾಡಿದರು ಈ ದೇಶದ ಪ್ರಜೆಗಳಿಗೆ ಭಾರತ ಸಂವಿಧಾನದ ಅರಿವು ಅಗತ್ಯವಾಗಿದೆ. ನಮ್ಮ ಸಂವಿಧಾನವು ಎಲ್ಲಾ ಧರ್ಮ, ಜಾತಿ, ಬಾಷೆ, ಸಂಸ್ಕ್ರತಿಗಳನ್ನು ಸಮಾನವಾಗಿ ಕಾಣುವಂತದ್ದು. ವಿಶ್ವದ ದೊಡ್ಡ ಸಂವಿಧಾನವಾಗಿದೆ. ಈ ಪ್ರಜಾಪ್ರಭುತ್ವದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವಯಡಿ ಡಾ ಬಿ ಆರ್ ಅಂಬೇಡ್ಕರ್ ರವರು ಸಂವಿಧಾನವನ್ನು ರಚಿಸಿದ್ದಾರೆ.
ಅಂಬೇಡ್ಕರ್ ರವರನ್ನು ಭಾರತದ ಪೋಷಕ ತಂದೆ.
ಬುದ್ದರು ಅಧ್ಯಾತ್ಮಿಕ ತಂದೆ
ಅಂಬೇಡ್ಕರ್ ಎಂದರೆ ಜ್ಞಾನ. ಅಂಬೇಡ್ಕರ್ ರವರು ಶೋಷಿತರ ಸಮಸ್ಯೆಗಳನ್ನು ಹಾಗೂ ಭಾರತದ ಅನೇಕ ಶೋಷಣೆಗಳನ್ನು ಅಹಿಂಸಾ ಮಾರ್ಗದಿಂದ ಬಗೆಹರಿಸಿದರು. ಆದರಿಂದ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ನಮ್ಮ ಜ್ಞಾನವೇ ಭೂಮಿಯಾಗಿದೆ ಅದಕ್ಕೆ ಸರಿಯಾಗಿ ಉಳುಮೆ ಮಾಡಿ ಬೀಜ ಬಿತ್ತರೆ ಚೆನ್ನಾಗಿ ಬೆಳೆಯುತ್ತದೆ ಅಜ್ಞಾನವನ್ನು ಹೋಗಲಾಡಿಸಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಬೇಕು. ಬುಅಪಾಯದಲ್ಲಿದೆ. ತತ್ವಗಳನ್ನು ನಾವು ಮೈಗೂಡಿಸಿಕೊಂಡರೆ ಉತ್ತಮ ಜೀವನ ನಡೆಸಬಹುದು.
ಬಿ ವಿ ಎಸ್ ನ ಸಂಪನ್ಮೂಲ ವ್ಯಕ್ತಿಗಳಾದ ಕೇಶವಮೂರ್ತಿ ಮಾತನಾಡಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವು ಇಂದು ಆಳುವ ಸರ್ಕಾರಗಳಿಂದ ಅಪಾಯದಲ್ಲಿದೆ. ಖಾಸಗೀಕರಣ, ಜಾಗತೀಕರಣ, ಉದಾರೀಕರಣದಿಂದ ಬಡವರಿಗೆ ಅನ್ಯಾಯವಾಗಿದೆ ಸರ್ಕಾರಿ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಆದ್ದರಿಂದ ನಮಗೆ ಸಂವಿಧಾನದ ಜಾಗೃತಿ ಅಗತ್ಯವಾಗಿದೆ.ಎಂದರು ಅಂಬೇಡ್ಕರ್ ರವರ ಸಾಧನೆ ಹಾಗೂ ಸಂವಿಧಾನದ ರಚನೆಯನ್ನು ಕುರಿತು ಉಪನ್ಯಾಸ ನೀಡಿದರು
ಈ ಸಂದರ್ಭದಲ್ಲಿ ಜಿ ವಿ ಗೌಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲಾಜರಸ್, ಭೀಮ್ ಸೇನಾ ನೌಕರ ಸಂಘದ ಅಧ್ಯಕ್ಷ ಎನ್ ರಮೇಶ್,
ಉಪಾಧ್ಯಕ್ಷ ಪಶುಪತಿ, ಪ್ರಧಾನ ಕಾರ್ಯದರ್ಶಿ ನಂಜುಂಡಯ್ಯ, ಖಜಾಂಚಿ ಶಿವಕುಮಾರ್. ಕಾರ್ಯಧ್ಯಕ್ಷ ಕೆಂಚಪ್ಪ, ಸಂಘಟನಾ ಕಾರ್ಯದರ್ಶಿ ಡಿ ರಮೇಶ್, ಕೆ ಎಂ ಮಧುಸೂದನ್, ಸಹ ಕಾರ್ಯದರ್ಶಿ ವೆಂಕಟೇಶ್, ಬಿ ಮಧುಸೂದನ್, ಮಹಿಳಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಸಾವಿತ್ರಿ, ಶಿವಮ್ಮ, ರೂಪಶ್ರೀ, ಲಲಿತಾ, ಮಹದೇವಮ್ಮ, ಸುಧಾಮಣಿ, ಉಮಾದೇವಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ