ಸಂತೇಮರಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ತಾಯಮ್ಮಣಿ ಆಯ್ಕೆ
ಸಂತೇಮರಹಳ್ಳಿ: ಇಲ್ಲಿನ ಗ್ರಾಮ ಪಂಚಾಯಿತಿ ಯಲ್ಲಿ ಕುತೂಹಲ ಮೂಡಿಸಿದ ಅಧ್ಯಕ್ಷರ ಚುನಾವಣೆಯಲ್ಲಿ ತಾಯಮ್ಮಣಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದ ಹಿನ್ನೆಲೆಯಲ್ಲಿ 11 ಮತಗಳನ್ನು ಪಡೆದು ತಾಯಮ್ಮಣಿ ರವರು ಜಯಶೀಲಾರಾಗಿದ್ದಾರೆ.ಎಂದು ಚುನಾವಣೆ ಅಧಿಕಾರಿಗಳು ಘೋಷಣೆ ಮಾಡಿದರು
ಈ ವೇಳೆಯಲ್ಲಿ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಗೆಲುವನ್ನು ಸಂಭ್ರಮಿಸಿದರು.
ಈ ವೇಳೆಯಲ್ಲಿ ನೂತನ ಅಧ್ಯಕ್ಷರಿಗೆ ಗ್ರಾಮಸ್ಥರು ಶುಭ ಕೋರಿದರು. ಈ ವೇಳೆಯಲ್ಲಿ ನೂತನ ಅಧ್ಯಕ್ಷೆ ತಾಯಮ್ಮಣಿ ಮಾತನಾಡಿ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು ಸಿಕ್ಕಿರುವ ಕಡಿಮೆ ಅವಧಿಯಲ್ಲಿ ಅಭಿವೃದ್ಧಿ ಕೆಲಸ ಮಾಡಿ ಈ ಗ್ರಾಮ ಪಂಚಾಯಿತಿಗೆ ಒಳಪಡುವ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಹೇಮಲತಾ, ಸದಸ್ಯರಾದ ಸುಗಂಧರಾಜ್, ಮಲ್ಲೇಶಪ್ಪ, ಟಿ ಎಸ್ ಕುಮಾರ್, ಮಹದೇವಸ್ವಾಮಿ, ಚಿಕ್ಕಬಸವಣ್ಣ, ಜ್ಯೋತಿ,ಜಯಮ್ಮ ಹಾಗೂ ಚುನಾವಣಾ ಅಧಿಕಾರಿ ಮಹೇಶ್, ಪಿಡಿಓ ಮಮತಾ ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ