ನಾನು ಸ್ವಾಭಿಮಾನಿ ದೊಡ್ಡಬಳ್ಳಾಪುರ ಜನ ನನಗೆ ಮತ ಹಾಕುತ್ತಾರೆ: ಆನಂದ್
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಇಂದು ವಲಸಿಗರ ತಾಣವಾಗಿದೆ.ಅದು ಕೊಟ್ಟೆ,ಇದು ಕೊಟ್ಟೆ, ಉಪ್ಪಿನ ಋಣ ನಿಮ್ಮ ಮೇಲಿದೆ ಅದ್ದರಿಂದ ಮತ ಹಾಕುವ ಮೂಲಕ ನಮ್ಮ ಉಪ್ಪಿನ ಋಣ ತೀರಿಸಿ ಎಂದು ರಾಜಕೀಯ ಪಕ್ಷದ ಕೆಲ ಅಭ್ಯರ್ಥಿಗಳು ಮತವನ್ನು ಕೇಳುತ್ತಿದ್ದಾರೆ.ಇನ್ನೂ ಕೆಲವರು ಸ್ವಾಭಿಮಾನದ ಹೆಸರಿನಲ್ಲಿ ಪಕ್ಷಾಂತರ ಮಾಡುತ್ತಿದ್ದಾರೆ.ಬರೀ ಇವರ ಕಷ್ಟಗಳಿಗೆ ಸ್ಪಂದನೆ ಸಿಗದಿದ್ದಾಗ ಮಾತ್ರ ಇವರಿಗೆ ಸ್ವಾಭಿಮಾನದ ನೆನಪಾಗುತ್ತದೆ. ಆದರೆ ಮತದಾರರ ಸ್ವಾಭಿಮಾನ ಪಕ್ಷಾಂತರಿಗಳಿಗೆ ಲೆಕ್ಕಕ್ಕೇ ಇಲ್ಲ ಎಂದು ಸ್ವಾಭಿಮಾನಿ ದೊಡ್ಡಬಳ್ಳಾಪುರದ ಅಭ್ಯರ್ಥಿ ನಾಗದೇನಹಳ್ಳಿ ಆನಂದ್ ಅಭಿಪ್ರಾಯ ಪಟ್ಟಿದ್ದಾರೆ

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಸ್ವಾಭಿಮಾನಿ ದೊಡ್ಡಬಳ್ಳಾಪುರ ಹೆಸರಿನಲ್ಲಿ ಸ್ಪರ್ದಿಸಿರುವ ನಾಗದೇನಹಳ್ಳಿ ಆನಂದ್ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ,ದೊಡ್ಡಬಳ್ಳಾಪುರದ ಜನ ಸ್ವಾಭಿಮಾನಿಗಳು ಹಾಗೂ ಸ್ಥಳೀಯರಿಗೆ ಮಾನ್ಯತೆ ಕೊಟ್ಟವರು ಋಣದ ಹೆಸರಿನಲ್ಲಿ ಮತ ಹಾಕುವುದಿಲ್ಲ,ಸ್ವಾಭಿಮಾನದಿಂದ ಮತ. ಹಾಕುತ್ತಾರೆ ಸ್ವಾಭಿಮಾನಿ ಹೆಸರಿನಲ್ಲಿ ಸ್ಪರ್ದಿಸಿರುವ ನನಗೆ ದೊಡ್ಡಬಳ್ಳಾಪುರದ ಜನತೆ ಆಶಿರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ.ದೊಡ್ಡಬಳ್ಳಾಪುರದಲ್ಲಿ ಇತ್ತೀಚೆಗೆ ನೆಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತು ನಾನು ಕ್ಷೇತ್ರದ ಹಲವಾರು ಹಿರಿಯರ ಅಭಿಪ್ರಾಯದಂತೆ ದೊಡ್ಡಬಳ್ಳಾಪುರ ಸ್ವಾಭಿಮಾನಿ ಹೆಸರಲ್ಲಿ ಸ್ಪರ್ದಿಸಿದ್ದೇನೆ.ದೊಡ್ಡಬಳ್ಳಾಪುರ ಕ್ಷೇತ್ರದ ಮತದಾರರು ನನ್ನ ಕ್ರಮ ಸಂಖ್ಯೆ 11 ಹಣ್ಣಿನಬುಟ್ಟಿ ಗುರುತಿಗೆ ಮತ ನೀಡಿ ಎಂದರು.ದೊಡ್ಡಬಳ್ಳಾಪುರದಲ್ಲಿ ಎರೆಡು ಲಕ್ಷ ಚಿಲ್ಲರೆ ಮತಗಳಿದ್ದು ಸುಮಾರು 65000 ಕುಟುಂಬಗಳಿವೆ ಕುಟುಂಬಕ್ಕೊಂದು ಮತದಂತೆ ಸುಮಾರು ಅರವತ್ತುಸಾವಿರ‌ ಮತ ನನಗೆ ಬರು ನಿರೀಕ್ಷೆ ಇದೆ ಎಂದ ಆನಂದ್ ಹಲವಾರು ಪಕ್ಷಗಳ ಸುಮಾರು ಸ್ನೇಹಿತರು ಪರೋಕ್ಷವಾಗಿ ಬೆಂಬಲಿಸುವ ಭರವಸೆ ನೀಡಿದ್ದಾರೆ ದೊಡ್ಡಬಳ್ಳಾಪುರ ಜನಕ್ಕೆ ಯಾರು ಹೇಗೆ ಎಂಬುದು ಗೊತ್ತಿದೆ ಹಾಗಾಗಿ ಆಮಿಷಗಳಿಗೆ ಬಲಿಯಾಗಲಾರರು ಈಗಾಗಲೇ ಸಾಕಷ್ಟು ಜನ ದುಡ್ಡು ತೋರಿಸಿದವರನ್ನು ಸೋಲಿಸಿ ತಮ್ಮ ಸ್ವಾಭಿಮಾನವನ್ನು ತೋರಿಸಿದ್ದಾರೆ.ನಾನು ಉಪ್ಪನ್ನು ನೀಡಿ ಋಣವನ್ನು ಹೊರಿಸಲಾರೆ ಹಣವನ್ನು ನೀಡಿ ಮತವನ್ನು ಕೊಳ್ಳಲಾರೆ.ಇದು ದೊಡ್ಡಬಳ್ಳಾಪುರ ಜನತೆಯ ಸ್ವಾಭಿಮಾನದ‌ ಪ್ರಶ್ನೆ ಭ್ರಷ್ಟ ರನ್ನು ತಿರಸ್ಕರಿಸಿ ನನ್ನನ್ನು ಬೆಂಬಲಿಸುತ್ತಾರೆನ್ನುವ ವಿಶ್ವಾಸವಿದೆ ಎಂದು ಆನಂದ್ ಹೇಳಿದ್ದಾರೆ.