ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ವಾಲ್ಮೀಕಿ
ಜನ ಜಾಗೃತಿ ವೇದಿಕೆ
ಬಹು ಮುಖ್ಯವಾದುದ್ದು ಜಗದ್ಗುರು ಪ್ರಸನ್ನಾನಂದ ಸ್ವಾಮೀಜಿ ಅಭಿಮತ
ನೆಲಮಂಗಲ:ನಮ್ಮ ಸಮಾಜದಲ್ಲಿ ಯುವಕರು ಜಾಗೃತರಾಗಿ ಸಮುದಾಯದ ಮತ್ತು ಸಮಾಜದ ಸರ್ವೋತುಮುಖ ಅಭಿವೃದ್ಧಿಗಾಗಿ ಮಹರ್ಷಿ ವಾಲ್ಮೀಕಿ ಜನ ಜಾಗೃತಿ ವೇದಿಕೆಯನ್ನು ಮಾಡಿರುವುದು ನನಗೆ ಅತೀವ ಸಂತೋಷವನ್ನು ತಂದಿದೆ ಎಂದು ಜಗದ್ಗುರು ಪ್ರಸನ್ನಾನಂದ ಸ್ವಾಮೀಜಿ ಹೇಳಿದರು
ನಗರದ ಕೆ.ಎಸ್.ಆರ್.ಟಿ. ಸಿ. ಬಡಾವಣೆಯಲ್ಲಿರುವ
ಶ್ರೀ ಮಹರ್ಷಿ ವಾಲ್ಮೀಕಿ
ಜನ ಜಾಗೃತಿ ವೇದಿಕೆ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ
ಜನ ಜಾಗೃತಿ ವೇದಿಕೆಯ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ರಾಜನಹಳ್ಳಿಯಲ್ಲಿ ಪ್ರತಿವರ್ಷ
ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ.
ಈ ಜಾತ್ರೆಯಲ್ಲಿ ಸಮುದಾಯದ ಯುವಕರನ್ನು, ವಿದ್ಯಾರ್ಥಿಗಳನ್ನು ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಸಮುದಾಯದ ಮುಖಂಡರುಗಳು ಮಾಡುತ್ತಿದ್ದಾರೆ.
ಇಂದು ನಮ್ಮ ಸಮುದಾಯ ತುಂಬಾ ಹಿಂದುಳಿದಿದೆ. ಹಾಗಾಗಿ ಜನ ಜಾಗೃತಿ ವೇದಿಕೆ ಈ ನಿಟ್ಟಿನಲ್ಲಿ ಜಾಗರೂಕರಾಗಿ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.
ಶ್ರೀ ಮಹರ್ಷಿ ವಾಲ್ಮೀಕಿ ಜನ ಜಾಗೃತಿ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎ.ದಿಲೀಪ್ ಕುಮಾರ್ ಮಾತನಾಡಿ ನಮ್ಮ ವೇದಿಕೆ ನಮ್ಮ ಸಮುದಾಯದ ಮತ್ತು ಸಮಾಜದ ಏಳ್ಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದೇವೆ.ಇದಕ್ಕೆ
ನಮ್ಮ ಎಲ್ಲಾ ಪದಾಧಿಕಾರಿಗಳು ತುಂಬು ಹೃದಯದಿಂದ ಪ್ರೋತ್ಸಾಹ ನೀಡುತ್ತಿದ್ದಾರೆ. ಇದಕ್ಕೆ ನಾನು ಅಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳ, ಯುವಜನತೆಯ ಮತ್ತು ಮಹಿಳೆಯರ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಅನಿಲ್ ಪ್ರಸಾದ್,
ಪ್ರಧಾನ ಕಾರ್ಯದರ್ಶಿ ಬಿ.ಎ. ದಿಲೀಪ್ ಕುಮಾರ್,
ನೆಲಮಂಗಲ ತಾಲ್ಲೂಕು ವ್ಯವಸಾಯ ಉತ್ಪನ್ನಗಳ ಮಾರಾಟ ಸಹಕಾರ ಸಂಘ ನಿಯಮಿತ ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ,
ತಾಲ್ಲೂಕು ಎಸ್ಟಿ ಮೋರ್ಚಾ ಅಧ್ಯಕ್ಷ ಕೆಂಪರಾಮಯ್ಯ, ಕಾರ್ಯದರ್ಶಿ ಶೈಲಜಾ, ಸ್ವಸಹಾಯ ಸಂಘಗಳ. ಮುಖ್ಯಸ್ಥೆ ಪುಷ್ಪಲತಾಮುಖಂಡರುಗಳಾದ
ಸುಬ್ಬರಾಯಪ್ಪ (ಮಣಿ)
ನಾಗೇಶ್ ಬಿ.ಹೆಚ್ ,
ಆನಂದ್.ಹೆಚ್
ಗೋಪಾಲ್.ಬಿ.ಆರ್,
ಪ್ರಕಾಶ್ ವಾಲ್ಮೀಕಿನಗರ
ಚಂದ್ರಶೇಖರ್ ಮಣ್ಣೆ,t ದೇಗನಹಳ್ಳಿ
ನರಸಿಂಹರಾಜು,
ವೆಂಕಟಾಚಲಯ್ಯ,
ರವಿಕುಮಾರ್, ಬಿದಲೂರು
ಜಯರಾಮು, ಮತ್ತಿತರರು ಉಪಸ್ಥಿತರಿದ್ದರು.
ವರದಿ
ವೈ ಆನಂದ್ ಮೌರ್ಯ