ದೊಡ್ಡಬಳ್ಳಾಪುರ ಪೋಲಿಸ್ ಉಪ ವಿಭಾಗದ ವತಿಯಿಂದ ಎಸ್ಸಿ.ಎಸ್ಟಿ. ಕುಂದು ಕೊರತೆಗಳ ಸಭೆ

ದೊಡ್ಡಬಳ್ಳಾಪುರ:ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೋಲಿಸ್ ಮತ್ತು ದೊಡ್ಡಬಳ್ಳಾಪುರ ಪೋಲಿಸ್ ಉಪವಿಭಾಗದ ವತಿಯಿಂದ ಎಸ್ಸಿ-ಎಸ್ಟಿ ಕುಂದು ಕೊರತೆಗಳ ಸಭೆಯನ್ನು ದೊಡ್ಡಬಳ್ಳಾಪುರ ನಗರದ ಆರ್.ಡಿ ಕನ್ವೆನ್ಷನ್ ಹಾಲ್ ನಲ್ಲಿ ಏರ್ಪಡಿಸಲಾಗಿತ್ತು. ದೊಡ್ಡಬಳ್ಳಾಪುರ ಉಪ ವಿಭಾಗದ ಡಿ.ವೈ.ಎಸ್ ಪಿ ರವಿ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೊಡ್ಡಬಳ್ಳಾಪುರ ಉಪವಿಭಾಗದ ವ್ಯಾಪ್ತಿಗೆ ಒಳಪಡುವ ಹಲವಾರು ಪರಿಶಿಷ್ಟ ಜಾತಿ-ಪಂಗಡದವರು ಮತ್ತು ಅನೇಕ ದಲಿತ ಮುಖಂಡರು ಬಾಗವಹಿಸಿ ಜನಾಂಗಕ್ಕೆ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಮನವಿ ಮಾಡಿದರು.ತಾಲ್ಲೂಕಿನಲ್ಲಿ ಗಾಂಜಾ ಮಾರಾಟದ ಹಾವಳಿ ತೀವ್ರವಾಗಿದ್ದು ಅನೇಕ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವ ಪೀಳಿಗೆ ಗಾಂಜಾ ವ್ಯಸನಿಗಳಾಗುತಿದ್ದು ಬೈಕ್ ವೀಲಿಂಗ್ ಸೇರಿದಂತೆ ಅನೇಕ ಸಮಾಜಘಾತುಕ ಚಟುವಟಿಕೆಗಳು ಹೆಚ್ಚಾಗುತ್ತಿದೆ, ಅನೇಕ ಗ್ರಾಮಗಳಲ್ಲಿ ಇಂದಿಗು ದಲಿತರಿಗೆ ದೇವಾಲಯದ ಪ್ರವೇಶ ನಿಷಿದ್ದವಾಗಿದೆ ಇದರ ಬಗ್ಗೆ ಪೋಲಿಸ್ ಇಲಾಖೆ ದೇವಾಲಯ ಪ್ರವೇಶ ನಿಷಿದ್ದ ಮಾಡುವವರು ಮೇಲೆ ಕ್ರಮ ಜರುಗಿಸಬೇಕಿದೆ ಎಂದು ಕೆಲ ದಲಿತ ಮುಖುಂಡರು ಅಳಲು ತೋಡಿಕೊಂಡರು.

ತಾಲ್ಲೋಕಿನಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು ಕ್ರಮ ವಹಿಸಬೇಕಿರುವ ಅಬಕಾರಿ ಇಲಾಖೆ ಗಾಢ ನಿದ್ರೆಯಲ್ಲಿದೆ. ತಾಲ್ಲೂಕಿನಲ್ಲಿ ಪ್ರತಿ ಗ್ರಾಮಗಳಲ್ಲು ಸಹ ಸಣ್ಣ ಪುಟ್ಟ ಅಂಗಡಿಗಳಲ್ಲಿ ದಿನಬಳಕೆಯ ವಸ್ತುಗಳ ರೀತಿಯಲ್ಲಿ ಮದ್ಯವನ್ನು ಮಾರಾಟ ಮಾಡಲಾಗುತ್ತಿದ್ದು ಇದರಿಂದ ಗಲಾಟೆಗಳು ಹೆಚ್ಚಾಗುತ್ತಿದೆ. ಈ ವಿಚಾರವಾಗಿ ಪೋಲಿಸ್ ಇಲಾಖೆ ಅಕ್ರಮ ಮದ್ಯ ಮಾರಾಟ ಮಾಡುವವರ ಮೇಲೆ ಕಾನೂನು ‌ಕ್ರಮ ಜರುಗಿಸಲು ಅನೇಕ ದಲಿತ‌ ಮುಖುಂಡರು ಮನವಿ‌ ಮಾಡಿದರು.ಸಮಸ್ಯೆಗಳನ್ನು ಆಲಿಸಿದ ಡಿ.ವೈ.ಎಸ್.ಪಿ ರವಿರವರು ಮಾತನಾಡಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಶೀಘ್ರವಾಗಿ ಕ್ರಮವಹಿಸುವುದಾಗಿ ತಿಳಿಸಿ ದಲಿತರಿಗೆ ಯಾವುದೇ ರೀತಿಯ ತೊಂದರೆಗಳಾದಲ್ಲಿ ಇಲಾಖೆಗೆ ತಿಳಿಸಲು ಹೇಳಿದರು.


ಸಭೆಯಲ್ಲಿ ಉಪವಿಭಾಗದ ವ್ಯಾಪ್ತಿಗೆ ಬರುವ ನಗರ ಠಾಣೆಯ ಇನ್ಸ್‌ಪೆಕ್ಟರ್ ಅಮರೇಶ್ ಗೌಡ ಇನ್ಸ್ಪೆಕ್ಟರ್ ಗಳಾದ ಶ್ರೀ ಅಮರೇಶ್ ಗೌಡ. ಎ, ಹರಿ ವರ್ಧನ್, ಕಲ್ಲಪ್ಪ ಎಸ್ ಕರಾತ್, ದಿಲೀಪ್ ಕುಮಾರ್ ಸಿಬ್ಬಂದಿ ವರ್ಗದವರು ಇದ್ದರು.