ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭ

ದೊಡ್ಡಬಳ್ಳಾಪುರ:ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಶ್ರೀ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜು ದೊಡ್ಡಬಳ್ಳಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಿತು ಸಮಾರಂಭದಲ್ಲಿ ಮಾತನಾಡಿದ ಶಾಸಕ ಧೀರಜ್ ಮುನಿರಾಜು ಯುವಕರು ದೇಶದ ಆಸ್ಥಿ ಇದ್ದಂತೆ ವಿದ್ಯಾರ್ಥಿಗಳ ದೈಹಿಕ ಪರಿಶ್ರಮದಿಂದ ಬೌದ್ಧಿಕ ಸಾಮರ್ಥ್ಯ ಹೆಚ್ಚಾದರೆ ಹಾಗೆಯೇ ಸಾಂಸ್ಕೃತಿಕ ಚಟುವಟಿಕೆಗಳಿಂದ ಮಾನಸಿಕ ಸ್ಥೈರ್ಯ ಹೆಚ್ಚಾಗುತ್ತದೆ ಎಂದು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮೋಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕ ಓದುವ ಹವ್ಯಾಸ ಹೆಚ್ಚಿಸಿ ಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ ಎನ್ ಕೃಷ್ಣಪ್ಪ ಎಲ್ಲಾ ಯುವಕ ಯುವತಿಯರು ಕಡ್ಡಾಯವಾಗಿ ಕನ್ನಡ ಬಾಷೆ ಸಂಸ್ಕೃತಿ ಉಳಿಸುವ ಬೆಳೆಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಜಿಲ್ಲಾ ಉಪನಿರ್ದೇಶಕರಾದ ಎನ್ ಮೋಹನ್ ಕುಮಾರ್ ಮಾತನಾಡಿದರು ಕಾರ್ಯಕ್ರಮದಲ್ಲಿ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಪ್ರಮೋದ್ ಕುಲಕರ್ಣಿ ಸಂಸ್ಥೆಯ ಅಧ್ಯಕ್ಷರಾದ ಎಂ ರಾಮಶೆಟ್ಟಿ ಕಾರ್ಯದರ್ಶಿ ಎಸ್ ಪ್ರಕಾಶ್ ನಿರ್ದೇಕರುಗಳಾದ ಜೆ ಬಿ ಮಹೇಶ್ ಎಸ್ ರಾಜಲಕ್ಷ್ಮಿ ಶ್ರೀ ಕೊಂಗಾಡಿಯಪ್ಪ ಕಾಲೇಜು ಪ್ರಾಂಶುಪಾಲ ಎನ್ ಆನಂದಮೂರ್ತಿ ಉಪಪ್ರಾಂಶುಪಾಲ ಎಸ್ ಎಸ್ ಶಿವಶಂಕರ್ ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳಾದ ಸುನೀತಾ .ಮಹಾಂತೇಶ್. ಬಿಆರ್ ವೇಣುಗೋಪಾಲ್. ಎಂ ಸಿ ಮಂಜುನಾಥ್ . ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಾಂಶುಪಾಲರುಗಳು ಹಾಜರಿದ್ದರು.ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ವಿಜೇತರಾದ ವಿದ್ಯಾರ್ಥಿಗಳು
ಭಾವಗೀತೆ ಯಲ್ಲಿ ಶ್ರೀ ಕೊಂಗಾಡಿಯಪ್ಪ ಕಾಲೇಜಿನ ಐಶ್ವರ್ಯ ಮತ್ತು ಶ್ರೀ ವಾಣಿ ಕಾಲೇಜಿನ ಮೃದುಲ ಎಂ ಜಾನಪದ ಗೀತೆಯಲ್ಲಿ ಅಕ್ಷತಾ ಟಿ ನಾಯಕ್ ಆಂಗ್ಲ ಪ್ರಬಂಧ ಮಾನ್ವಿತಾ ಪಿ ವಿ
ಏಕಾಬಿನಯಪಾತ್ರದಲ್ಲಿ ಪೃಥ್ವಿ ಕೆ ಆಶುಭಾಷಣ ಸ್ಪರ್ಧೆಯಲ್ಲಿ ತೇಜಶ್ರೀ ಆಂಗ್ಲಭಾಷೆ ಚರ್ಚಾಸ್ಪರ್ಧೆ ಯಲ್ಲಿ ಬಿಂಬಾ ಇವರು ಆಯ್ಕೆಯಾಗಿದ್ದಾರೆ ಕಾರ್ಯಕ್ರಮದಲ್ಲಿ ಉಪನ್ಯಾಸಕರುಗಳಾದ ಟಿ ಆರ್ ಶ್ರೀ ರಾಮೇಗೌಡ ಮಂಗಳಗೌರಿ ರವಿಕುಮಾರ್ ಕೇಶವಮೂರ್ತಿ ಹಾಗೂ ತೀರ್ಪುಗಾರರು ವಿವಿಧ ತಾಲ್ಲೂಕುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು