ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಿಪಿಐಎಂ ಪಕ್ಷದ ಅಭ್ಯರ್ಥಿಯಾಗಿ ಮುನಿವೆಂಕಟಪ್ಪ ಸ್ಪರ್ಧೆ : ಏಪ್ರಿಲ್ 3ರಂದು ನಾಮಪತ್ರ ಸಲ್ಲಿಕೆ
ದೊಡ್ಡಬಳ್ಳಾಪುರ:ಹೋರಾಟದ ಹಿನ್ನೆಲೆಯಿಂದ ಬಂದಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಮುನಿವೆಂಕಟಪ್ಪರವರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಣೆ ಮಾಡಲಾಗಿದ್ದು ಏಪ್ರಿಲ್ 3ರಂದು ಸಂಗಡಿಗರೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಜಿಲ್ಲಾ ಕಾರ್ಯದರ್ಶಿ ಆರ್. ಚಂದ್ರು ತೇಜಸ್ವಿ ತಿಳಿಸಿದರು.
ನಗರಭಾಗದ ಸಿಪಿಐ(ಎಂ ) ಕೇಂದ್ರ ಕಚೇರಿಯಲ್ಲಿ ಗುರುವಾರ ನೆಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯದ ಮೊದಲ ಅಭ್ಯರ್ಥಿಯನ್ನಾಗಿ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಸುದೀರ್ಘ ಹೋರಾಟದ ಹಿನ್ನೆಲೆ ಉಳ್ಳ ಮುನಿವೆಂಕಟಪ್ಪ ಅವರನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವತಿಯಿಂದಕಣಕ್ಕಿಳಿಸುತ್ತಿದ್ದು. ಸುಮಾರು 500ಕ್ಕೂ ಅಧಿಕ ಸಂಗಡಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ ಎಂದರು.
ಕಾರ್ಮಿಕರ ಸಮಸ್ಯೆಗಳಿಗೆ ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಸದಾ ಪ್ರಥಮವಾಗಿ ಸ್ಪಂದಿಸುವ ಕಾರ್ಮಿಕರ ಧ್ವನಿಯಾಗಿ ಹೋರಾಟ ನಡೆಸುವ ಸಿಪಿಐಎಂ ಪಕ್ಷವನ್ನು ಬೆಂಬಲಿಸುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿರುವ ಅನ್ಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕಾಗಿ ಮನವಿ ಮಾಡಿದರು.
ಜಿಲ್ಲಾ ಸಮಿತಿ ಸದಸ್ಯ ಪಿ.ಎ. ವೆಂಕಟೇಶ್ ಮಾತನಾಡಿ ತಮ್ಮ ಪಕ್ಷಗಳು ಅಧಿಕಾರಕ್ಕೆ ಬಂದಾಗ ಸದಾ ಹಗರಣಗಳನ್ನು ಮಾಡುವ ಭ್ರಷ್ಟರ ವಿರುದ್ಧ ಭ್ರಷ್ಟಮುಕ್ತ ಸಮಾಜದ ಆಶಯ ಹೊತ್ತಿರುವ ಸಿಪಿಐಎಂ ಸ್ಪರ್ಧೆ ಮಾಡುತ್ತಿದ್ದು.ಈ ಚುನಾವಣೆ ಸಂವಿಧಾನ ಬದಲಿಸಲು ಹೊರಟಿರುವವರ ವಿರುದ್ಧದ ಚುನಾವಣೆಯಾಗಿದೆ ಎಂದರು.
ನಾಮ್ಮ ಪಕ್ಷವು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರುವ ಪಕ್ಷ. ನಮ್ಮ ಹೋರಾಟ ದೇಶದ ಕಾರ್ಮಿಕರ ಪರ, ದುಷ್ಟರ ವಿರುದ್ಧ ಎಂದರು.ಸಿಪಿಐಎಂ ಪಕ್ಷವು ” 0 “ಪರ್ಸೆಂಟ್ ಭ್ರಷ್ಟಾಚಾರದ ಪಕ್ಷ. ಸ್ವಾತಂತ್ರ್ಯ ಹೋರಾಟಗಾರರ ಆಶಯಗಳನ್ನು ಅನುಷ್ಠಾನಗೊಳಿಸುವಲ್ಲಿ , ಸಮಾನತೆಯ ಸಮಾಜಕಟ್ಟುವ ನಿಟ್ಟಿನಲ್ಲಿ ದುಡಿಯುತ್ತಿರುವ ಪಕ್ಷ ನಮ್ಮ ಸಿಪಿಐಎಂ ಎಂದರು.
ಸುದ್ದಿಗೊಷ್ಟಿಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಸಮಿತಿ ಕಾರ್ಯದರ್ಶಿಗಳಾದಂತ ಎಸ್ ರುದ್ರರಾಧ್ಯ,ತಾಲ್ಲೂಕು ಸಮಿತಿ ಸದಸ್ಯರಾದಂತ ಎಂ ಚೌಡಯ್ಯ, ತಾಲ್ಲೂಕು ಸಮಿತಿ ಸದಸ್ಯರಾದಂತ ಮಣೀಶ್ ಶರ್ಮ ರವರು ಹಾಜರಿದ್ದರು.