ಸಾರಿಗೆ ವ್ಯವಸ್ಥೆಯಿಲ್ಲದೆ ನಡೆದುಕೊಂಡು ಹೋಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

ದೊಡ್ಡಬಳ್ಳಾಪುರ : ರಾಜ್ಯದಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು. ಪರೀಕ್ಷಾರ್ಥಿಗಳು ತುಂಬಾ ಉತ್ಸಾಹದಿಂದ ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಮಾದಗೊಂಡನ ಹಳ್ಳಿ ರಸ್ತೆಯಲ್ಲಿ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿ ಯೂ ಸಿ ಪರೀಕ್ಷಾ ಕೇಂದ್ರವಾಗಿದ್ದು. ಈ ಬಾರಿ ಬರೋಬ್ಬರಿ 641ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ ಈ ಕೇಂದ್ರ ತಲುಪಲು ಸರಿಯಾದ ಬಸ್ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸವೇ ಸರಿ. ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಬೇಕು ಎಂಬ ಆತುರದಲ್ಲಿ ವಿದ್ಯಾರ್ಥಿಗಳ ಪರದಾಟ ನೋಡಲು ಅಸಾಧ್ಯ. ನಗರದ ಬಸವ ಭವನ ದಿಂದ ಕಾಲೇಜಿನವರೆಗೂ ಯಾವುದೇ ಬಸ್ ವ್ಯವಸ್ಥೆ ಇಲ್ಲ, ಕಾಲ್ನಡಿಗೆಯಲ್ಲಿ ಪರೀಕ್ಷಾ ಕೇಂದ್ರ ಸೇರುವಷ್ಟರಲ್ಲಿ ಸುಸ್ತಾಗುವ ಯುವ ಮನಸ್ಸುಗಳು ಪರೀಕ್ಷೆ ಬರೆಯುವುದಾದರು ಹೇಗೆ…?

ಬಿಸಿಲಿನಲ್ಲಿ ನೆಡೆದು ಬರುವುದು ಕಷ್ಟಕರವಾಗಿದೆ. ಆಟೋ ಕೇಳುವ ಎಂದರೇ ದುಬಾರಿ, ನಮ್ಮಲ್ಲಿ ಆಟೋಗೆ ನೀಡುವಷ್ಟು ಹಣವಿಲ್ಲ, ಬಸ್ ಕೇವಲ ಬಸವಭವನ ಸಮೀಪ ನಿಲುಗಡೆಗೊಳ್ಳುತ್ತದೆ ಅಲ್ಲಿಂದ ಇಲ್ಲಿಯವರೆಗೆ ನೆಡೆಯುವುದು ಕಷ್ಟವಾಗಿದೆ. ಅಲ್ಲಿಂದ ಪರೀಕ್ಷಾ ಕೇಂದ್ರ ತಲುಪಲು ಕನಿಷ್ಠ 20ರಿಂದ 30ನಿಮಿಷಗಳ ಅವಧಿ ಬೇಕು. ಬಿಸಿಲಿನ ಈ ಬೆಗೆಯಲ್ಲಿ ನೆಡೆಯುವುದು ಅಸಾಧ್ಯ ನಮಗೊಂದು ಬಸ್ ವ್ಯವಸ್ಥೆ ಮಾಡಿ ಅನ್ನುತ್ತಾರೆ ಪರೀಕ್ಷಾರ್ಥಿಗಳು

ಪರೀಕ್ಷಾ ಮೇಲ್ವಿಚಾರಕರಾದ ಸುಜಾತಾ ಮಾತನಾಡಿ ನಮ್ಮಲ್ಲಿ ಈ ಬಾರಿ 641 ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಹಲವು ಶಾಲೆಗಳಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಬರುತ್ತಿದ್ದು ಕೆಲ ಪೋಷಕರು ತಮ್ಮ ಸ್ವಂತ ವಾಹನಗಳಲ್ಲಿ ತಮ್ಮ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರುತ್ತಿದ್ದಾರೆ. ಹಲವು ಮಕ್ಕಳು ಕಾಲ್ನಡಿಗೆಯಲ್ಲಿ ಬರುತ್ತಿದ್ದು ಪರೀಕ್ಷಾರ್ಥಿಗಳು ಆಯಾಸ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಪರೀಕ್ಷಾರ್ಥಿಗಳು ಯಾವುದೇ ತೊಂದರೆ ಇಲ್ಲದಂತೆ ಪರೀಕ್ಷೆ ಬರೆಯಲು ಹಾಗೂ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಲು ಸಂಬಂಧಪಟ್ಟವರು ಗಮನಹರಿಸಿ ಅನುವು ಮಾಡಿ ಕೊಡಲಿ ಎಂಬುದು ಪೋಷಕರು ಹಾಗು ಸಾರ್ವಜನಿಕರ ಕೋರಿಕೆ