ಟಾರ್ಪಲ್ ಮುಚ್ಚಿದ್ದ ಈಜು ಕೊಳದಲ್ಲಿ ಬಿದ್ದು ಮೃತಪಟ್ಟ ಬಾಲಕ

ದೊಡ್ಡಬಳ್ಳಾಪುರ: ಟಾರ್ಪಲ್ ಮುಚ್ಚಿದ್ದ ಈಜು ಕೊಳದಲ್ಲಿ ಆಕಸ್ಮಿಕವಾಗಿ ಬಿದ್ದ ಬಾಲಕ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೃತ ಬಾಲಕ ಬಿಜಾಪುರದ ಮೂಲದ ಯಮನಪ್ಪ ಪೂಜಾರಿ ಅವರ ಮಗ ವಿಶ್ವನಾಥ್ (10) ಎಂದು ತಿಳಿದುಬಂದಿದೆ.

ತಾಲೂಕಿನ ತಿಪ್ಪೂರು ಮತ್ತು ಬೊಮ್ಮನಹಳ್ಳಿ ಮಧ್ಯದಲ್ಲಿ ಇರುವ ಶ್ರೀನಿವಾಸ್ ಅವರ ಫಾರಂ ಹೌಸ್ ನಲ್ಲಿ ಬುಧವಾರ ಸಂಜೆ 4:00 ಗಂಟೆ ಸಮಯದಲ್ಲಿ ನೀರು ತುಂಬಿದ್ದ ಈಜುಕೊಳದ ಮೇಲೆ ನೀಲಿ ಬಣ್ಣದ ಟಾರ್ಪಲ್ ಅನ್ನು ಹೊದಿಸಲಾಗಿದ್ದು ಅಲ್ಲಿಯೇ ಕೆಲಸ ಮಾಡುತ್ತಿದ್ದ ಯಮನಪ್ಪ ಪೂಜಾರಿ ರವರ ಮಗ ವಿಶ್ವನಾಥ್ ಎಂಬ 10 ವರ್ಷದ ಬಾಲಕ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾನೆ.

ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.