ಗೀತಮ್ ನಲ್ಲಿ M. U. R. T. I ಸಂಶೋಧನ ಕೇಂದ್ರ ದೊಡ್ಡಬಳ್ಳಾಪುರ:ರಾಷ್ಟ್ರೀಯ ಶಿಕ್ಷಣ ನೀತಿ 2020ರ ಸಂಶೋಧನೆಯ ಮೂಲಭೂತ ತತ್ವಕ್ಕೆ ಅನುಗುಣವಾಗಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಅತ್ಯುತ್ತಮ ಶಿಕ್ಷಣ ಮತ್ತು ಅಭಿವೃದ್ಧಿ ಬೆಂಗಳೂರಿನ ಗೀತಮ್ ಭಾಷಾಂತರ ಉಪಕ್ರಮಗಳ ಸಂಶೋಧನ ಕೇಂದ್ರದ ಬಹು ಶಿಸ್ತೀಯ ಸಂಶೋಧನ.. M. U. R. T.I… ಕೇಂದ್ರವನ್ನು ಉದ್ಘಾಟನೆ ಮಾಡಿದೆ.
ಬಹು ಶಿಸ್ತೀಯ ಸಂಶೋಧನ ಉಪಕ್ರಮವು ಆವಿಷ್ಕಾರಿತ ಮತ್ತು ಅರ್ಥಪೂರ್ಣವಾದ ಬದಲಾವಣೆ ತರುವ ನಿಟ್ಟಿನಲ್ಲಿ ಸಮಾನ ಮನಸ್ಕರ ಸಹಯೋಗವನ್ನು ಒಗ್ಗೂಡಿಸಲು ನೇರವಾಗುತ್ತದೆ. ವಿವಿಧ ಕ್ಷೇತ್ರಗಳ ಸಂಶೋಧಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ M. U. R. T. I. ಅನೇಕ ಸವಾಲುಗಳನ್ನು ಎದುರಿಸುವ ಸಲುವಾಗಿ ವಿವಿಧ ಹಿನ್ನೆಲೆ ಗಳ ಸಂಶೋಧಕರ ಸಾಮೂಹಿಕ ಪರಿಣತಿಯನ್ನು ಬಳಸಿಕೊಳ್ಳುವ ಗುರಿ ಹೊಂದಿದೆ.
ಹಗುರ ಯುದ್ಧ ವಿಮಾನ L. C.A. ತೇಜಸ್ ಯೋಜನೆಯ ಕಾರ್ಯಕ್ರಮ ನಿರ್ದೇಶಕ ಮತ್ತು ವಿನ್ಯಾಸಕರ ಡಾ. ಕೋಟ ಹರಿನಾರಾಯಣ್,ಚನ್ನೈ ನ ಯು. ಎಸ್. ಕನ್ಸುಲೆಟ್ನ ಕಾನ್ಸುಲ್ ಜನರಲ್ ಕ್ರಿಷ್ಟೋಫರ್ W. ಹೋಡ್ಜಸ್, ಗೀತಮ್ ಕುಲಪತಿ ಡಾ. ವೀರೇಂದ್ರ ಸಿಂಗ್ ಚೌಹಾನ್, ಉಪಕುಲಪತಿ ಪ್ರೊ. ದಯಾನಂದ ಸಿದ್ದಪಟ್ನo, ಬೆಂಗಳೂರು ಕ್ಯಾಂಪಸ್ ನ ಪ್ರೊ ವಿ. ಸಿ. ಪ್ರೊ. ಕೆ. ಎನ್. ಆಚಾರ್ಯ ಸೇರಿದಂತೆ ಇನ್ನಿತರ ಗಣ್ಯರ ಸಮ್ಮುಖದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು.
ಖ್ಯಾತ ಇಂಜಿನಿಯರ್, ಶಿಕ್ಷಣ ತಜ್ಞ ಮತ್ತು ಹಗುರ ಯುದ್ಧ ವಿಮಾನ L. C. A. ತೇಜಸ್ ಯೋಜನೆಯ ಕಾರ್ಯಕ್ರಮ ನಿರ್ದೇಶಕ ಹಾಗೂ ಮುಖ್ಯ ವಿನ್ಯಾಸಕರ ಡಾ. ಕೋಟ ಹರಿನಾರಾಯಣ್ ಮಾತನಾಡಿ, ಸುಸ್ತಿರ ತಂತ್ರಜ್ಞಾನವು ಹೇಗೆ ಬೆಳೆಯಬೇಕೆಂಬುಧರ ಬಗ್ಗೆ ಸಂಪೂರ್ಣ ಮರು ಚಿಂತನೆಯನ್ನು ನಡೆಸುವ ಅಗತ್ಯವಿದೆ. ಗೀತಮ್ ದಾಖಲೆಯ ಸಮಯದಲ್ಲಿ M. U. R. T. I. ಯನ್ನು ಸ್ಥಾಪಿಸಿರುವುದು ನನಗೆ ಖುಷಿ ತಂದಿದೆ.13ಪ್ರಮುಖ ಪ್ರಮುಖ ಕ್ಷೇತ್ರಗಳ ಜೊತೆ ಇದು ಸರಿಯಾದ ಆರಂಭವಾಗಿದೆ. ಮತ್ತು ಇವುಗಳನ್ನು ನಾವು ಬದಲಾವಣೆ ಮಾಡುವ ಕ್ಷೇತ್ರಗಳಾಗಿವೆ. ಗೀತಮ್ ಮಾತ್ರವಲ್ಲದೆ ಸಮಾಜಕ್ಕೂ ಇದರಿಂದ ಉಪಯೋಗವಿದೆ. ವಿಶ್ವ ವಿದ್ಯಾಲಯವನ್ನು ಉದ್ಯಮ ಮತ್ತು ಸಮಾನರೊಂದಿಗೆ ಸಂಪರ್ಕಿಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದ ಅವರು ಎಂಜಿನಿಯರಿಂಗನ್ನು ಮರು ಎಂಜಿನಿಯರ್ ಅನ್ನಾಗಿ ರೂಪಿಸುವ ಅಗತ್ಯವಿದೆ. ಇದು ಮೂಲಭೂತ ಅಗತ್ಯತೆಯೂ ಆಗಿದೆ. ನಾವು ಇಂದನವನ್ನು ಉತ್ಪಾದಿಸುವ ವಿಧಾನ ಮತ್ತು ಅದನ್ನು ಸಂಗ್ರಹಿಸುವ ಹಾಗೂ ರವಾನಿಸುವ ವಿಧಾನ ಹೀಗೆ ಎಲ್ಲವನ್ನು ಮತ್ತೆ ನೋಡುವ ಅಗತ್ಯವಿದೆ. ಕ್ರಿಷ್ಟೋಫರ್ W. ಹೋಡ್ಜಸ್ ಅವರ ಉಪಸ್ಥಿತಿಯು ಯು. ಎಸ್. ಅಕಾಡೆಮಿ, ಯು. ಎಸ್. ಉದ್ಯಮ ಭಾರತೀಯ, ಭಾರತೀಯ ಉದ್ಯಮ ಮತ್ತು ಸಾಮಾನ್ಯವಾಗಿ ಸಮಾಜದ ನಡುವಿನ ಬಲವಾದ ಸಹಯೋಗವನ್ನು ಖಚಿತ ಪಡಿಸುತ್ತದೆ. ಎಂಬುದನ್ನು ನಾನು ನಂಬುತ್ತೇನೆ ಎಂದರು.
ಚನ್ನೈನ ಯು. ಎಸ್. ಕಾನ್ಸುಲ್ ಜನರಲ್ ಕ್ರಿಷ್ಟೋಫರ್ W. ಹೋಡ್ಜಸ್ ಮಾತನಾಡಿ M. U. R. T. I. ಸಂಸ್ಥೆಯು ನಾವಿನ್ಯತೆ ಮತ್ತು ಸಹಬಾಗಿತ್ವಕ್ಕಾಗಿ ನಮಗೆ ಅಗತ್ಯವಿರುವ ಸಂಯೋಜನೆ ಮತ್ತು ಸಹಬಾಗಿತ್ವಕ್ಕಾಗಿ ನಮಗೆ ಅಗತ್ಯವಿರುವ ಸಂಯೋಜನೆ ಮತ್ತು ಕ್ರಿಯಾತ್ಮಕ ಸಂಶೋಧನೆಗೆ ಮಾದರಿಯಾಗಿದೆ. ಇದು ನಮ್ಮ ಆರ್ಥಿಕತೆ ಮತ್ತು ಸಂಬಂಧವನ್ನು ವೃದ್ಧಿಸಲು ನೆರವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಗೀತಮ್ ಬೆಂಗಳೂರ್ ಕ್ಯಾಂಪಸ್ ನ ಪ್ರೊ ವಿ ಸಿ ಪ್ರೊ.ಕೆ. ಎನ್. ಎಸ್. ಆಚಾರ್ಯ ಮಾತನಾಡಿ, ಭಾರತದಲ್ಲಿನ ಶೈಕ್ಷಣಿಕ ಸಂಸ್ಥೆಗಳಿಗೆ ಸಂಶೋಧನೆ ಮತ್ತು ಅಭಿವೃದ್ಧಿ ನಿರ್ಣಾಯಕ ಅಂಶಗಳಾಗಿವೆ. ಹೊಸತನವನ್ನು ಬೆಳೆಸುವ ಸಲುವಾಗಿ ಜ್ಞಾನವನ್ನು ವೃದ್ಧಿ ಮಾಡುವಲ್ಲಿ ಮತ್ತು ಇತ್ತೀಚಿನ ಬೆಳವಣಿಗೆಗಳೊಂದಿಗೆ ಶೈಕ್ಷಣಿಕ ಪಠ್ಯ ಕ್ರಮಗಳು ಹಾಗೂ ಕಾರ್ಯಕ್ರಮಗಳನ್ನು ನವೀಕರಿಸುವ ನಿಟ್ಟಿನಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಇದು ನಿರ್ಣಾಯಕ ವೆನಿಸುವ ಸವಾಲುಗಳನ್ನು ಪರಿಹಾರ ಮಾಡುತ್ತದೆ. ಇದರ ಜೊತೆಗೆ ಉದ್ಯಮ ಶೀಲತೆಯನ್ನು ಉತ್ತೇಜಿಸುವುದು ಮತ್ತು ಉದ್ಯಮ, ಸಮಾಜದ ಶ್ರೇಯಸ್ಸಿಗೆ ಅಗತ್ಯವಾದ ಪರಿಹಾರವನ್ನು ಒದಗಿಸುತ್ತದೆ.ವಿದ್ಯಾರ್ಥಿಕೇಂದ್ರೀತ ಶಿಕ್ಷಣ ದೃಷ್ಟಿ ಕೋನದಿಂದ ನೋಡಿದರೆ M. U. R. T. I. ಉಪಕ್ರಮವು ವಿದ್ಯಾರ್ಥಿಗಳಿಗೆ ಕೇವಲ ಕಂಠ ಪಾಠ ಆಧಾರಿತ ಶಿಕ್ಷಣ ಪದ್ದತಿಯನ್ನು ಮೀರಿ ಪ್ರಯೋಗಲಯದ ರಚನೆಯಲ್ಲಿ ನೈಜ ಪ್ರಪಂಚದ ಸಮಸ್ಯೆ ಪರಿಹಾರದ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ವಿಮರ್ಶೆತ್ಮಕವಾದ ಚಿಂತನೆ ಮತ್ತು ಪ್ರಯೋಗಾತ್ಮಕ ಕೌಶಲ್ಯಗಳ ಬೆಳವಣಿಗೆಯನ್ನು ಉತ್ತೇಜಸುತ್ತ ಪ್ರಯೋಗ ಪ್ರಕ್ರಿಯೆಯ ನೈಸರ್ಗಿಕ ಬಾಗವಾಗಿ ವೈಫಲ್ಯಗಳನ್ನು ಸ್ವೀಕರಿಸುವ ಮನಸ್ಥಿತಿಯನ್ನು ಪೋಷಣೆ ಮಾಡುತ್ತದೆ ಎಂದರು.