ವಿಜೃಂಭಣೆಯಿಂದ ನಡೆದ ಶ್ರೀ ಮಂಟೇಸ್ವಾಮಿ ಸಿದ್ದಪ್ಪಾಜಿ ಕಂಡಾಯ‌ ಉತ್ಸವ ಮೆರವಣಿಗೆ

 

ಯಳಂದೂರು ತಾಲ್ಲೂಕಿನ ಮಲಾರಪಾಳ್ಯ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಹಳ ವಿಜೃಂಭಣೆಯಿಂದ ಕಂಡಾಯ‌ದ ‌ಒಡೆಯ ಧರೆಗೆ ದೊಡ್ಡವರು ಶ್ರೀ ಮಂಟೇಸ್ವಾಮಿ ಸಿದ್ದಪ್ಪಾಜಿ ಹೊನ್ನಯ್ಯ ಲಿಂಗಯ್ಯ ಶಿವಶರಣರ ಕಂಡಾಯ‌ ಮೆರವಣಿಗೆಯು ಪ್ರಾಥಮಿಕ ಶಾಲೆ ಆವರಣದಲ್ಲಿ ಹೂವು ಹೊಂಬಾಳೆ ಪೂಜೆ ಪುನಸ್ಕಾರಗಳು ನೆಡೆದವು
ಗ್ರಾಮದ ಎಲ್ಲಾ ಕೋಮಿನ ಯಜಮಾನರು ಯುವಕರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಾಗಟೆ ಬಾರಿಸುತ್ತಾ ಸ್ವಾಮಿಯ ಘೋಷಣೆ ಕೂಗುತ್ತ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು ಎಲ್ಲಾ ಭಕ್ತಾಧಿಗಳು ಡೋಲು ಶಂಕ ಜಾಗಟೆ ಶಬ್ದಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು
ಭಕ್ತಾಧಿಗಳು ತಮ್ಮ ತಮ್ಮ ಮನೆಗಳಲ್ಲಿ ಶ್ರೀ ಸ್ವಾಮಿಗೆ ಫಲಹಾರ ಪೂಜೆ ಭಂಗಿ ಸೇವೆಗಳನ್ನು ಮಾಡಿಸಿ ಸ್ವಾಮಿ ಕೃಪೆಗೆ ಪಾತ್ರರಾದರು.

ವರದಿ ಆರ್ ಉಮೇಶ್ ಮಲಾರಪಾಳ್ಯ