ಲೋಕಸಭಾ ಚುನಾವಣೆಗೆ ಮಾಜಿ ಸಚಿವ ಬಿ ಸೋಮಶೇಖರ್ ಗೆ ಸ್ಪರ್ದಿಸಲು ಅವಕಾಶ ಮಾಡಿಕೊಡಲು ಒತ್ತಾಯ

ಸಂತೇಮರಹಳ್ಳಿ : ಮಾಜಿ ಸಚಿವ ಬಿ ಸೋಮಶೇಖರ್ ಗೆ ಕಾಂಗ್ರೆಸ್ ಪಕ್ಷದಿಂದ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡುವಂತೆ ಕಾಂಗ್ರೆಸ್ ಹೈಕಮಾಂಡ್ ಒತ್ತಾಯಿಸುವಂತೆ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯರುಗಳ ಒಕ್ಕೂಟದ ವತಿಯಿಂದ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಏರ್ಪಡಿಸಲಾಗಿತ್ತು.
ಈ ವೇಳೆಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಕಾರ್ಯದರ್ಶಿ ಕೆ ವಿ ದೇವೇಂದ್ರ ಮಾತನಾಡಿ ಚುನಾವಣೆ ದೇಶದ ರಕ್ಷಣೆ ಮತ್ತು ಆಂತರಿಕ ಭದ್ರತೆ ಜನರ ಜೀವನಮಟ್ಟ ಸುಧಾರಣೆ ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಸಮುದಾಯದ ಸೇರಿದಂತೆ ಒಟ್ಟಾರೆ ಜನ ಸಮುದಾಯಗಳ ಹಿತಾಸಕ್ತಿ ಕಾಪಾಡಲು ಪೂರಕವಾದ ಅಂಶಗಳ ಆಧಾರದ ಮೇಲೆ ಚುನಾವಣೆ ನಡೆಯುತ್ತಿದೆ, ಕಳೆದ ಹತ್ತಾರು ವರ್ಷಗಳಿಂದ ಬಿಜೆಪಿ ಆರ್ ಎಸ್ ಎಸ್ ನ ಕೈಗೊಂಬಿಯಾಗಿ ಅಧಿಕಾರ ನಡೆಸಿ ಜನರನ್ನು ದಿಕ್ಕು ತಪ್ಪಿಸುವ ಜನರೇ ಹೆಚ್ಚಾಗಿದ್ದಾರೆ, ಪ್ರಧಾನಿ ಮೋದಿ ಎದರು ದನಿ ಎತ್ತದ ಸಂಸದರು ಇನ್ನೂ ಬೇಕೇ ಎಂಬ ಅಲ್ಲಲ್ಲಿ ಕೇಳಿ ಬರುತ್ತಿವೆ, ಈ ಹಿನ್ನಲೆಯಲ್ಲಿ ಅನುಭವ ಇರುವ ಸೂಕ್ತ ರಾಜಕರಾಣಿ ಹಾಗೂ ಪ್ರಾಮಾಣಿಕ, ಸರಳ ಸಜ್ಜಿನಿಕೆಯ ವ್ಯಕ್ತಿ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಬೇಕು ಹಾಗೂ ದಿವಂಗತ ಆರ್ ದೃವನಾರಾಯಣ್ ಸ್ಥಾನ ತುಂಬ ಬಲ್ಲ ಹಾಗೂ ಹೊಸ ಯೋಜನೆಯನ್ನು ಕಾರ್ಯ ರೂಪಕ್ಕೆ ತರುವಂತಹ ಹಾಗೂ ಸಾಮರ್ಥ್ಯವುಳ್ಳ ವ್ಯಕ್ತಿ ಬಿ ಸೋಮಶೇಖರ್ ಈ ಹಿಂದೆ ಜೆ ಎಚ್ ಪಟೇಲ್ ಮುಖ್ಯ ಮಂತ್ರಿ ಅವಧಿಯಲ್ಲಿ ಸಚಿವರಾಗಿದ್ದಾ ವೇಳೆಯಲ್ಲಿ ಹಲವಾರು ಜನ ಪರ ಯೋಜನೆ ಇಂದಿಗೂ ಜನ ಮೆಚ್ಚುಗೆ ಪಡೆದಿದೆ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಒಂದು ತಿಂಗಳಲ್ಲಿ ಮರು ಪರೀಕ್ಷೆ ಬರೆಯುವಂತಹ ಯೋಜನೆ ಜಾರಿಗೆ ತಂದರು ಹಾಗೂ ಪಹಣಿಯನ್ನ ಕಂಪ್ಯೂಟರೀಕರಣ ಮಾಡಿ ರೈತರಿಗೆ ಅನುಕೂಲವಾಗುವ ಸಾಕಷ್ಟು ಯೋಜನೆಗಳನ್ನ ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದರು.
ಈ ಭಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಕೆ ಪಿ ಸಿ ಸಿ ಅಧ್ಯಕ್ಷ ಶಿವಕುಮಾರ್ ರನ್ನು ನಮ್ಮ ಒಕ್ಕೂಟವು ಆಗ್ರಹ ಪೂರಕವಾಗಿ ಒತ್ತಾಯಿಸುತ್ತಿವೆ ಎಂದರು ಈ ಸಂದರ್ಭದಲ್ಲಿ ರಾಜು, ಎಸ್ ಮೂರ್ತಿ, ಶಿವಣ್ಣ ಇದ್ದರು.

ವರದಿ ಉಮೇಶ್ ಮೈಲಾರಪಾಳ್ಯ