ಮೋದಿಯವರು ವಿದೇಶಗಳಿಗೆ ಕೊಟ್ಟಿದ್ದು ನಮ್ಮ ತೆರಿಗೆ ಹಣವಲ್ಲವೇ… ವಿಶ್ವಾಸ್ ಗೌಡ.

ದೊಡ್ಡಬಳ್ಳಾಪುರ:ಕಾಡಾನೆ ದಾಳಿಯಿಂದ ಕೇರಳದ ವೈನಾಡು ಜಿಲ್ಲೆಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನೆರವಾಗುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವಿಯ ಮೇರೆಗೆ ಕರ್ನಾಟಕ ಸರ್ಕಾರ ಪರಿಹಾರ ನೀಡಿರುವ ವಿಚಾರವನ್ನು ಕಾಂಗ್ರೆಸ್ ಯುವ ಮುಖಂಡ ವಿಶ್ವಾಸ್ ಗೌಡ ಸಮರ್ಥಿಸಿಕೊಂಡಿದ್ದಾರೆ.
ಪರಿಹಾರ ಘೋಷಣೆ ಕುರಿತು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ವಿಶ್ವಾಸ್ ಗೌಡ ರವರು ಅಮಾಯಕನ ಸಾವಿಗೆ ಪರಿಹಾರ ನೀಡಿದರೆ ಬಾಯಿ ಬಡೆದುಕೊಳ್ಳುತ್ತಿರುವ ವಿರೋಧ ಪಕ್ಷಗಳ ದ್ವಿಮುಖ ನೀತಿ ಬಯಲಾಗಿದೆ.ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದೇಶಗಳಿಗೆ ಕೋಟಿಗಟ್ಟಲೆ ಪರಿಹಾರ ಕೊಟ್ಟಾಗ ಬಾಯಿಬಿಡದ ಇದೇ ಬಿ.ಜೆ.ಪಿ ಗರು ಪಕ್ಕದ ರಾಜ್ಯದ ಬಡ ವ್ಯಕ್ತಿಯ ಸಾವಿಗೆ ಪರಿಹಾರ ನೀಡಿದರೆ ರಾಜಕೀಯ ಮಾಡುತ್ತಾರೆ.ಹಾಗಾದರೆ ಇವರು ಅಧಿರಕಾರದಲ್ಲಿದ್ದಾಗ ಹೊರ ರಾಜ್ಯದವರಿಗೆ ಏನು ಪರಿಹಾರ ಕೊಟ್ಟಿಲ್ಲವೇ?ಇಷ್ಟು ದಿನ ಬಡವರಿಗೆ ನೀಡಿದ ಯೋಜನೆಯನ್ನು ಬಿಟ್ಟಿ ಎಂದು ಬಡಜನರಿಗೆ ಅವಮಾನಿಸಿದರು,ನಂತರ ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು.ಬಜೆಟ್ ವೇಳೆ ಮುಖಭಂಗವಾಗಿ ಸಭಾತ್ಯಾಗ ಮಾಡಿ ಪ್ರತಿಭಟನೆ ಮಾಡಿದರು,ಈಗ ತೆರಿಗೆ ಬೇರೆ ರಾಜ್ಯಕ್ಕೆ ಕೊಡುತ್ತಾರೆಂದು ನಾಟಕವಾಡುತ್ತಿದ್ದಾರೆ.
ಕೇಂದ್ರದಿಂದ ಬರಬೇಕಾದ ಅನುದಾನದ ಬಗ್ಗೆ ಮಾತನಾಡದ ಬಿ.ಜೆ.ಪಿ ದಳದ ನಾಯಕರು ಬರ ಪರಿಹಾರದ ಬಗ್ಗೆ ಮಾತನಾಡುವುದಕ್ಕೆ ಯಾವುದೇ ನೈತಿಕತೆ ಇಲ್ಲ.ಇವರಿಗೆ ರೈತರ ಬಗ್ಗೆ ಕನಿಷ್ಠ ಕಾಳಜಿ ಇಲ್ಲ.ನಮ್ಮ ಸರ್ಕಾರ ರೈತರಿಗೆ ಬರ ಪರಿಹಾರವಾಗಿ 2000 ನೀಡಲು ಸಿದ್ದವಾಗಿದೆ.ಕೇಂದ್ರದ ಪರಿಹಾರ ಎಲ್ಲಿ ಎಂದರೆ ಒಬ್ಬರು ಮಾತನಾಡುತ್ತಿಲ್ಲ.ಕೇಂದ್ರದಿಂದ ನಮಗೆ ಬರಬೇಕಾದ ಅನುದಾನದ ಬಗ್ಗೆ ಮಾತನಾಡಿದರೆ ಅದಕ್ಕೆ ನಾಡ ದ್ರೋಹಿಗಳಂತೆ ಕೇಂದ್ರದ ಪರ ವಕಾಲತ್ತು ವಹಿಸುತ್ತಾರೆ ಎಂದ ವಿಶ್ವಾಸ್ ಗೌಡರು ರಾಜ್ಯದಲ್ಲಿ ತೀವ್ರ ತೊಂದರೆ ಕೊಡುತ್ತಿದ್ದ ಹಿನ್ನೆಲೆಯಲ್ಲಿ ಆಕ್ರೋಶಿತ ಜನರ ಒತ್ತಡಕ್ಕೆ ಮಣಿದು ಹಾಸನ ಜಿಲ್ಲೆ ಬೇಲೂರಿನಲ್ಲಿ ಸೆರೆ ಹಿಡಿದಿದ್ದ ಆನೆಯನ್ನು ಬಿ.ಆರ್.ಟಿ ಯಲ್ಲಿ ಬಿಡಲಾಗಿತ್ತು.ಅಲ್ಲಿಂದ ಬಂಡಿಪುರ ದಾಟಿ ವೈನಾಡು ಬಾಗಕ್ಕೆ ತಲುಪಿದ್ದ ಆನೆ ಅಜೀಶರವರ ಮೇಲೆ ದಾಳಿ ಮಾಡಿತ್ತು.ದಾಳಿಯಲ್ಲಿ ಆತ ಮೃತಪಟ್ಟಿದ್ದ,ಈ ಬಗ್ಗೆ ಆನೆಗೆ ಹಾಕಿದ್ದ ಕಾಲರ್ ಐ ಡಿ ಯಿಂದ ಸ್ಪಷ್ಟವಾಗಿದೆ.
ಇತ್ತೀಚೆಗೆ ಕ್ಷೇತ್ರಕ್ಕೆ ತೆರಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೃತ ಕುಟುಂಬಕ್ಕೆ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು.ಅದರಂತೆ ಪರಿಹಾರ ಪ್ರಕ್ರಿಯೆ ನೆಡೆಯುತ್ತಿದೆ.ಈ ವಿಚಾರ ತಿಳಿಯದೆ ದಳ ಕಮಲದ ನಾಯಕರು ಸಾವಿನ ಪರಿಹಾರದಲ್ಲಿಯು ರಾಜಕೀಯ ಮಾಡುತ್ತಲಿರುವುದು ವಿಪರ್ಯಾಸದ ಸಂಗತಿ ಎಂದು ವಿಶ್ವಾಸ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.