ಪತ್ರಕರ್ತರಿಗೆ ಬಸ್ ಪಾಸ್ ಯೋಜನೆ
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ

ಬೆಂಗಳೂರು ಗ್ರಾಮಾಂತರ:ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಪತ್ರಕರ್ತರ ಬಸ್ ಪಾಸ್ ಯೋಜನೆ ಮೊನ್ನೆ ನೆಡೆದ ರಾಜ್ಯ ಬಜೆಟ್ ನಲ್ಲಿ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಮೂಲಕ ಹಲವಾರು ವರ್ಷಗಳ ಬೇಡಿಕೆಗೆ ತೆರೆ ಬಿದ್ದಿದ್ದು ಇದರ ಸಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಪಧಾದಿಕಾರಿಗಳಿಂದ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಆರ್ ರಮೇಶ್ kuwj ಯ ಹಲವಾರು ವರ್ಷಗಳ ನಿರಂತರ ಹೋರಾಟದ ಫಲವಾಗಿ ಇಂದು ರಾಜ್ಯದ ಪತ್ರಕರ್ತರಿಗೆ ಬಸ್ ಪಾಸ್ ಯೋಜನೆ ದೊರೆತಿದ್ದು ಇಂದಿನ ರಾಜದ್ಯಕ್ಷ ರಾದ ಶಿವಾನಂದ ತಗಡೂರು ಪ್ರದಾನ ಕಾರ್ಯದರ್ಶಿ ಜಿ.ಸಿ ಲೋಕೇಶ್ ಮತ್ತು ರಾಜ್ಯ ಪಧಾದಿಕಾರಿಗಳ ಅವಿರತ ಶ್ರಮದಿಂದ ಬಸ್ ಪಾಸ್ ಯೋಜನೆ ಜಾರಿಗೊಂಡಿರುವುದು ಸಂತಸದ ವಿಷಯ ಬಸ್ ಪಾಸ್ ದೊರೆತಿರುವುದು ನಮ್ಮ ಸಂಘದ ಶ್ರಮದಿಂದ ಎಂದು ಇತ್ತೀಚಿಗೆ ಸ್ಥಾಪನೆಗೊಂಡ ಮತ್ತೊಂದು ಪತ್ರಕರ್ತರ ಸಂಘದ ಸದಸ್ಯರು ತಪ್ಪು ಮಾಹಿತಿ ಹಂಚುತ್ತಿದ್ದಾರೆ,ಆದರೆ ಇದು kuwj ಯ ಸತತ ಪ್ರಯತ್ನದಿಂದ ಮಾತ್ರ ಸರ್ಕಾರ ಈ ಯೋಜನೆ ಜಾರಿಯಾಗಿದೆ ಎಂದರು.
ನಂತರ ಮಾತನಾಡಿದ ಜಿಲ್ಲಾ ಪತ್ರಕರ್ತರ ಸಂಘದ ಸಲಹೆಗಾರಾದ ಬಿ ಪಿಳ್ಳರಾಜು ಸರ್ಕಾರ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಯೋಜನೆ ಜಾರಿಮಾಡಿದೆ ಆದರೆ ಇದು ಕೇವಲ ಗ್ರಾಮಾಂತರ ಪ್ರದೇಶದ ಸಂಚಾರಕ್ಕೆ ಮಾತ್ರ ಸೀಮಿತವೋ ಅಥವಾ ರಾಜ್ಯಾದ್ಯಂತ ಸಂಚರಿಸಲು ಅವಕಾಶವಿದೆಯೋ ತಿಳಿದುಕೊಂಡು ಗ್ರಾಮೀಣ ಬಾಗಕ್ಕೆ ಮಾತ್ರ ಸೀಮಿತವಾಗಿದ್ದರೆ ಅದನ್ನು ರಾಜ್ಯಾದ್ಯಂತ ಹೋರಾಡಲು ಅನುಕೂಲ ಮಾಡಿಕೊಡಲು ರಾಜ್ಯ ಸಂಘ ದ ಮೂಲಕ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದರು.ನಂತರ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಅಧ್ಯಕ್ಷ ಜಿ.ಶ್ರೀನಿವಾಸ್ ರಾಜ್ಯಸಂಘದ ಕಾರ್ಯವೈಖರಿಯನ್ನು ಶ್ಲಾಘಿಸುತ್ತಾ ರಾಜ್ಯ ಸಂಘವು ಪತ್ರಕರ್ತರ ಶ್ರೇಯಾಬಿವೃದ್ದಿಗೆ ಸರ್ಕಾರಕ್ಕೆ ಹಲವಾರು ಪ್ರಸ್ತಾವನೆಯನ್ನು ಸಲ್ಲಿಸಿದ್ದು ಅದರಲ್ಲಿ ಹಲವು ವರ್ಷಗಳ ಬೇಡಿಕೆಯಿದ್ದ ಬಸ್ ಪಾಸ್ ಯೋಜನೆಗೆ‌ ಹಸಿರು ನಿಶಾನೆ ದೊರೆತಿದ್ದು ಪತ್ರಕರ್ತರ ಬಸ್ ಪಾಸ್ ಯೊಜನೆ ಕಾರ್ಯರೂಪಕ್ಕೆ ನೀಡಿದ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರಿಗೆ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ರವರಿಗೆ ಅಭಿನಂದನೆ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಕುಸುಮಾ ಪರ್ವತರಾಜು,ಜಿಲ್ಲಾ ಅದ್ಯಕ್ಷ ಜಿ ಶ್ರೀನಿವಾಸ್ ಉಪಾಧ್ಯಕ್ಷ ಎಂ ಜ್ಯೋತಿಶ್ವರಪ್ಪ,ಜಿಲ್ಲಾ ಖಜಾಂಚಿ, ಶಾಂತಮೂರ್ತಿ,ಕಾರ್ಯದರ್ಶಿ ಎಂ ಆರ್ ನಾಗರಾಜ್ ಬಿ.ಸಿ ಪರಮಶಿವಯ್ಯ ಗೌರವ ಸಲಹೆಗಾರರಾದ ಎಸ್ ಬಿ ರಫಿಯುಲ್ಲಾ,ಬಿ ಪಿಳ್ಳರಾಜು ಜಿಲ್ಲಾ ಸಂಘದ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಜರಿದ್ದರು.